ನಿರೀಕ್ಷೆಗಿಂತ ಹೆಚ್ಚು ಲಾಭ ಗಳಿಸಿದ ನೆಟ್ ಫ್ಲಿಕ್ಸ್!

ನೆಟ್ ಫ್ಲಿಕ್ಸ್ ನ ಬಳಕೆದಾರರು ಹೆಚ್ಚಿದ್ದು ಕಳೆದ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದಾಯವನ್ನು ಗಳಿಸಿದೆ.
ನೆಟ್ ಫ್ಲಿಕ್ಸ್
ನೆಟ್ ಫ್ಲಿಕ್ಸ್
Updated on
ನೆಟ್ ಫ್ಲಿಕ್ಸ್ ನ ಬಳಕೆದಾರರು ಹೆಚ್ಚಿದ್ದು ಕಳೆದ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದಾಯವನ್ನು ಗಳಿಸಿದೆ.
ವಿಶ್ವಾದ್ಯಂತ ಸುಮಾರು 7 ಮಿಲಿಯನ್ ನಷ್ಟು ಗ್ರಾಹಕರನ್ನು ಹೊಸದಾಗಿ ಪಡೆದಿರುವ ನೆಟ್ ಫ್ಲಿಕ್ಸ್ ನ ಒಟ್ಟಾರೆ ಗ್ರಾಹಕರ ಸಂಖ್ಯೆ ಈಗ 137 ಮಿಲಿಯನ್ ನಷ್ಟಾಗಿದೆ.  ಕಳೆದ ತ್ರೈಮಾಸಿಕದಲ್ಲಿ ನೆಟ್ ಫ್ಲಿಕ್ಸ್ ನ ಲಾಭ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದ್ದು 403 ಮಿಲಿಯನ್ ಡಾಲರ್ ಗೆ ಏರಿಕೆಯಾಗಿದ್ದು, ಆದಾಯದಲ್ಲಿ ಶೇ.34 ರಷ್ಟು ಏರಿಕೆಯಾಗಿ, 4 ಬಿಲಿಯನ್ ನಷ್ಟಾಗಿದೆ. 
ಇನ್ನು ನೆಟ್ ಫ್ಲಿಕ್ಸ್ ಲಾಭ ಗಳಿಸುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲೂ ನೆಟ್ ಫ್ಲಿಕ್ಸ್ ಷೇರುಗಳು ಶೇ.12 ರಷ್ಟು ಏರಿಕೆ ಕಂಡಿದೆ. ಒರಿಜಿನಲ್ ಕಂಟೆಂಟ್ ನಲ್ಲಿ ನೆಟ್ ಫ್ಲಿಕ್ಸ್ 8 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜನೆ ಹೊಂದಿದ್ದು, ಹೂಡಿಕೆದಾರರಿಗೆ ಲಾಭದ ಭರವಸೆ ನೀಡಲು ಬಯಸುತ್ತೇವೆ ಎಂದು ಸಂಸ್ಥೆ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com