ಸೆನ್ಸೆಕ್ಸ್ ಕುಸಿತ: ಹೂಡಿಕೆದಾರರಿಗೆ 1 ಲಕ್ಷ ಕೋಟಿ ನಷ್ಟ!

ಷೇರು ಮಾರುಕಟ್ಟೆ ವ್ಯವಹಾರಸ್ಥರ ಪಾಲಿಗೆ ಈ ದಿನ ಕರಾಳ ಸೋಮವಾರವಾಗಿ ಪರಿಣಮಿಸಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಾಂಕವು 505 ಪಾಯಿಂಟ್ ಕುಸಿತ ಕಂಡು 38,000ಕ್ಕಿಂತಲೂ ಕೆಳಗಿಳಿದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಷೇರು ಮಾರುಕಟ್ಟೆ ವ್ಯವಹಾರಸ್ಥರ ಪಾಲಿಗೆ ಈ ದಿನ ಕರಾಳ ಸೋಮವಾರವಾಗಿ ಪರಿಣಮಿಸಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಾಂಕವು 505 ಪಾಯಿಂಟ್ ಕುಸಿತ ಕಂಡು 38,000ಕ್ಕಿಂತಲೂ ಕೆಳಗಿಳಿದಿದೆ.
ಷೇರುಗಳ ಕುಸಿತದ ಹಿನ್ನೆಲೆಯಲ್ಲಿ ಬಿಎಸ್ಇ ಲಿಸ್ಟ್ ನಲ್ಲಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳ 1,55,22,343 ಕೋಟಿ ರೂ ನಿಂದ 1,14,676.15 ಕೋಟಿ ರೂ ಗೆ ಇಳಿಕೆಯಾಗಿದೆ.
30 ಷೇರುಗಳ ಕೀ ಇಂಡೆಕ್ಸ್ (ಸೂಚ್ಯಾಂಕ) 505.13 ಪಾಯಿಂಟ್ ಗಳನ್ನು ಅಥವಾ ಶೇ.1.33ರಷ್ಟು ಕುಸಿತ ದಾಖಲಿಸಿದೆ. ಇಂದಿನ ವಹಿವಾಟಿನ ಅಂತ್ಯಕ್ಕೆ ಬಿಎಸ್ಇ ಸೂಚ್ಯಾಂಕವು 37,585.51ಕ್ಕೆ ಕೊನೆಗೊಳಿಸಿತು.
ಯುಎಸ್ ಮತ್ತು ಚೀನಾ ನಡುವಿನ ವ್ಯಾವಹಾರಿಕ ತಿಕ್ಕಾಟವು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.ರೂಪಾಯಿ ಮೌಲ್ಯ ಕುಸಿತದ ಕಾರಣದಿಂದಲೂ ಹೂಡಿಕೆದಾರರು ವಹಿವಾಟು ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.
ಪ್ರಸಕ್ತ ದಿನ ಭಾರತೀಯ ರೂ.ಮೌಲ್ಯ ಡಾಲರ್ ಗೆ 72.69 ಗೆ ತಲುಪಿದೆ.
30 ಷೇರುಗಳ ಕೀ ಇಂಡೆಕ್ಸ್ ನಲ್ಲಿ ಸನ್ ಫಾರ್ಮಾ, ಎಚ್ಡಿಎಫ್ಸಿ, ಟಾಟಾ ಮೋಟರ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸೇರಿ ಒಟ್ಟಾರೆ 25 ಕಂಪನಿ ಷೇರುಗಳು ನಷ್ಟ ಅನುಭವಿಸಿದೆ.
ಬಿಎಸ್ಇದಲ್ಲಿ 1,441 ಷೇರುಗಳು ಕುಸಿದಿದ್ದರೆ 1,282 ಷೇರುಗಳು ಏರುಗತಿ ದಖಲಿಸಿದ್ದವು. ಇನ್ನೂ 191 ಷೇರುಗಳಲ್ಲಿ ಯಾವ ಬದಲಾವಣೆ ಆಗಿಲ್ಲ.
ಇಂದಿನ ವಹಿವಾಟಿನಲ್ಲಿ  ಬರೋಬ್ಬರಿ 140 ಕ್ಕೂ ಹೆಚ್ಚು ಷೇರುಗಳು 52  ವಾರಗಳ ಕನಿಷ್ಟ ಮಟ್ಟಕ್ಕೆ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com