ಷೇರು ವಹಿವಾಟು: ಸೆನ್ಸೆಕ್ಸ್ 537 ಅಂಕ ಕುಸಿತ, ಐದು ದಿನದಲ್ಲಿ ಹೂಡಿಕೆದಾರರಿಗೆ 8.5 ಲಕ್ಷ ಕೋಟಿ ನಷ್ಟ!

ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಸಹ ಕರಡಿ ಕುಣಿತ ಮುಂದುವರಿದಿದೆ.ಬಿಎಸ್ಇ ಸೆನ್ಸೆಕ್ಸ್ 537 ಪಾಯಿಂಟ್ ಗಳ ಕುಸಿತ ದಾಖಲಿಸಿ ಎರಡು ತಿಂಗಳ ಕನಿಷ್ಟ್ 36,305.02ಕ್ಕೆ ತಲುಪಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಸಹ ಕರಡಿ ಕುಣಿತ ಮುಂದುವರಿದಿದೆ.ಬಿಎಸ್ಇ ಸೆನ್ಸೆಕ್ಸ್ 537 ಪಾಯಿಂಟ್ ಗಳ ಕುಸಿತ ದಾಖಲಿಸಿ ಎರಡು ತಿಂಗಳ ಕನಿಷ್ಟ್ 36,305.02ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಸೂಚ್ಯಾಂಕ ನಿಫ್ಟಿ ಸಹ 11,000 ಅಂಕಗಳಿಗೆ ಕುಸಿತ ಕಂಡಿದೆ. ಬ್ಯಾಂಕ್ ಹಾಗೂ ಆಟೋ ಕ್ಷೇತ್ರದ ಸ್ಟಾಕ್ ಗಳಲ್ಲಿ ಭಾರೀ ನಷ್ಟದ ಕಾರಣ ಈ ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ.
30 ಷೇರುಗಳ ಕೀ ಇಂಡೆಕ್ಸ್ 536.58 ಅಂಕಗಳನ್ನು  ಕಳೆದುಕೊಂಡು ಶೇ. 1.46 ರಷ್ಟು ಕುಸಿತ ದಾಖಲಿಸಿದೆ.  36,305.02ಕ್ಕೆ ತಲುಪಿತ್ತು. ಇದು ಕಳೆದ ಫೆಬ್ರವರಿ ಮಾಹೆಯಲ್ಲಿ ಆಗಿದ್ದ ಕುಸಿತದ ಬಳಿಕ ನಡೆದ ಮಹಾ ಪತನ ಎಂದು ದಾಖಲಾಗಿದೆ. ಫೆಬ್ರವರಿ 6ರಂದು ನಡೆದ ವಹಿವಾಟಿನಲ್ಲಿ ಮಾರುಕಟ್ಟೆಯು 561.22 ಅಂಕಗಳನ್ನು ಕಳೆದುಕೊಂಡಿತ್ತು.
ಐದು ದಿನಗಳಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ರೂ ನಷ್ಟವಾಗಿದೆ.ಬಿಎಸ್ಇ  ಸೆನ್ಸೆಕ್ಸ್ ಸೂಚ್ಯಾಂಕ ಕಳೆದ ವಾರದಿಂದ ಸುಮಾರು ಶೇ 5 ರಷ್ಟು ಕುಸಿತ ಕಂಡಿದೆ.
ಕಳೆದ ನಾಲ್ಕು ಸೆಷನ್ ಗಳಲ್ಲಿ ಸೂಚ್ಯಾಂಕವು ಒಟ್ಟಾರೆ 1,249.04 ಅಂಕಗಳನ್ನು ಕಳೆದುಕೊಂಡಿದೆ.
ಜಾಗತಿಕ ವಾಣಿಜ್ಯ ಸಮರ, ರೂಪಾಯಿಯ ಕುಸಿತ, ಏಹ್ಯಾ ಷೇರು ಮರುಕಟ್ಟೆಗಳ ದುರ್ಬಲ ಸ್ಥಿತಿ ಇದೇ ಮುಂತಾದ ಕಾರಣದಿಂದ ಮಾರುಕಟ್ಟೆ ವಹಿವಾಟಿನಲ್ಲಿ ಈ ಬಗೆಯ ಏರಿಳತವಾಗಿದೆ ಎಂದು ಹೇಳಲಾಗುತ್ತಿದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com