ನವದೆಹಲಿ: ಮತ್ತೆ ಟಾಟಾ ತೆಕ್ಕೆಗೆ ಸೇರಿದ ಹೋಟೆಲ್ ತಾಜ್ ಮಾನ್ಸಿಂಗ್

ದೆಹಲಿಯ ಪ್ರತಿಷ್ಠಿತ ಹೋಟೆಲ್ ತಾಜ್ ಮಾನ್ಸಿಂಗ್ ಹೋಟೆಲ್ ಮಾಲಿಕತ್ವವನ್ನು ಟಾಟಾ ಗ್ರೂಪ್ ನ ಇಂಡಿಯನ್ ಹೊಟೇಲ್ ಕಂಪನಿ ಲಿಮಿಟೆಡ್ (ಐಎಚ್ಸಿಎಲ್) ಹರಾಜಿನಲ್ಲಿ ತನ್ನದಾಗಿಸಿಕೊಂಡಿದೆ.
ಹೋಟೆಲ್ ತಾಜ್ ಮಾನ್ಸಿಂಗ್
ಹೋಟೆಲ್ ತಾಜ್ ಮಾನ್ಸಿಂಗ್
ನವದೆಹಲಿ: ದೆಹಲಿಯ ಪ್ರತಿಷ್ಠಿತ ಹೋಟೆಲ್ ತಾಜ್ ಮಾನ್ಸಿಂಗ್ ಹೋಟೆಲ್ ಮಾಲಿಕತ್ವವನ್ನು ಟಾಟಾ ಗ್ರೂಪ್ ಇಂಡಿಯನ್ ಹೊಟೇಲ್ ಕಂಪನಿ ಲಿಮಿಟೆಡ್ (ಐಎಚ್ಸಿಎಲ್) ಹರಾಜಿನಲ್ಲಿ ತನ್ನದಾಗಿಸಿಕೊಂಡಿದೆ. 
ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಶುಕ್ರವಾರ ನಡೆಸಿದ್ದ ಹರಾಜಿನಲ್ಲಿ   ತಾಜ್ ಗ್ರೂಪ್ಇ-ಹರಾಜಿನಲ್ಲಿ ಮಾನ್ಸಿಂಗ್ ಆಸ್ತಿಯನ್ನು 3.2% ರಷ್ಟು ಒಟ್ಟು ವಹಿವಾಟಿನಿಂದ ಗೆದ್ದಿದೆ ಎಂದು ಪಿಟಿಐ ವರದಿ ಮಾಡಿದೆ. ಇಂಡಿಯನ್ ಹೊಟೇಲ್ ಕಂಪನಿ ಮತ್ತು ಐಟಿಸಿ ಹೊಟೆಲ್ ಗಳು ಇಂದಿನ ಹರಾಜಿನಲ್ಲಿ ಭಾಗವಹಿಸಿದ್ದವು.
ರಾಷ್ಟ್ರ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿರುವ 292 ಕೋಣೆಗಳ ಐಷಾರಾಮಿ ಹೋಟೆಲ್ ಇದಾಗಿದೆ.ಇ-ಹರಾಜು  ಬೆಳಗ್ಗೆ 11 ಗಂಟೆಗೆ ಆರಂಭಗೊಂಡು, ಇಂದು 4 ಗಂಟೆಗೆ ಮುಕ್ತಾಯವಾದ್ದು  7.03 ಕೋಟಿ ರೂಪಾಯಿಗಳ ಪರವಾನಗಿ ಶುಲ್ಕದೊಡನೆ ಕೊನೆಗೊಂಡಿದೆ.
ಟಾಟಾ ಸಮೂಹದ ಇಂಡಿಯನ್ ಹೊಟೇಲ್ ಕಂಪನಿ ಲಿಮಿಟೆಡ್ (ಐಹೆಚ್ಸಿಎಲ್) ಜಿಎಸ್ಟಿ ಸೇರಿದಂತೆ ಪ್ರತಿ ತಿಂಗಳು 7.03 ಕೋಟಿ ರೂಪಾಯಿಗಳ ಪರವಾನಗಿ ಶುಲ್ಕದೊಡನೆ ತನ್ನದಾಗಿಸಿಕೊಂಡಿದೆ.
ಈ ಹೋಟೆಲ್ ಅನ್ನು 1978 ರಲ್ಲಿ 33 ವರ್ಷಗಳ ಲೀಸ್ ಗಾಗಿ ಟಾಟಾ ಸಮೂಹಕ್ಕೆ ನೀಡಲಾಗಿತ್ತು. ಈ ಲೀಸ್ ಅವಧಿಯು  2011 ರಲ್ಲಿ ಕೊನೆಗೊಂಡಿತು. ಆದರೆ ಅವಧಿ ಪೂರ್ಣಗೊಂಡು ಏಳು ವರ್ಷಗಳಾದರೂ ಹರಾಜು ಪ್ರಕ್ರಿಯೆ ಂಆತ್ರ ಬಾಕಿ ಉಳಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com