ಧೋನಿ ಪಾವತಿ ದಾಖಲೆ ನೀಡುವಂತೆ ಅಮ್ರಪಾಲಿ ಸಮೂಹಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಧೋನಿ ಜೊತೆಗಿನ ಪೂರ್ಣ ವಹಿವಾಟು ದಾಖಲೆಯನ್ನು ನಾಳೆಯೊಳಗೆ ನ್ಯಾಯಾಲಯಕ್ಕೆ ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್‌ ಮಂಗಳವಾರ ಅಮ್ರಪಾಲಿ ಸಮೂಹ ಸಂಸ್ಥೆಗೆ ಆದೇಶಿಸಿದೆ.
ಎಂಎಸ್ ಧೋನಿ
ಎಂಎಸ್ ಧೋನಿ
ನವದೆಹಲಿ: ಸಂಸ್ಥೆಯ ಬ್ರ್ಯಾಂಡ್‌ ರಾಯಭಾರಿಯಾಗಿ 2009 ರಿಂದ 2016 ರವರೆಗೆ ಕಾರ್ಯ ನಿರ್ವಹಿಸಿದ್ದ ಕ್ರಿಕೆಟಿಗ ಎಂಎಸ್‌ ಧೋನಿ ಜೊತೆಗಿನ ಪೂರ್ಣ ವಹಿವಾಟು ದಾಖಲೆಯನ್ನು ನಾಳೆಯೊಳಗೆ ನ್ಯಾಯಾಲಯಕ್ಕೆ ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್‌ ಮಂಗಳವಾರ ಅಮ್ರಪಾಲಿ ಸಮೂಹ ಸಂಸ್ಥೆಗೆ ಆದೇಶಿಸಿದೆ.
ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠ, ಬ್ರ್ಯಾಂಡ್‌ ರಾಯಭಾರಿಯಾಗಿದ್ದಾಗ ಭಾರತ ತಂಡದ ಮಾಜಿ ನಾಯಕನಿಗೆ ತನ್ನ ವಿವಿಧ ಸಂಸ್ಥೆಗಳ ಮೂಲಕ ಮಾಡಿದ್ದ ಪಾವತಿ ಮಾಹಿತಿ ನೀಡುವಂತೆ ರಿಯಲ್‌ ಎಸ್ಟೇಟ್‌ ದಿಗ್ಗಜ ಅಮ್ರಪಲ್ಲಿಗೆ ಸೂಚಿಸಿದೆ.
ಗೃಹ ಖರೀದಿದಾರ ಪರ ವಕೀಲರಾದ ಎಂ.ಎಲ್‌. ಲಹೋತಿ ಮತ್ತು ರಿಯಲ್‌ ಎಸ್ಟೇಟ್‌ ಕಂಪನಿ ಪರ ವಕೀಲರಾದ ಗೀತಾ ಲುತ್ರಾ ನಡುವಿನ ವಾದ-ಪ್ರತಿ ವಾದ ಆಲಿಸುವ ವೇಳೆ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ. 
ಮಂಗಳವಾರ ನ್ಯಾಯಾಲಯ ಲೆಕ್ಕಪರಿಶೋಧನಾ ವರದಿಯನ್ನು ಸ್ವೀಕರಿಸಲು ಮತ್ತು ಅದನ್ನು ದಾಖಲೆಯಾಗಿ ಪರಿಗಣಿಸಲು ಸರ್ವೋಚ್ಛ ನ್ಯಾಯಾಲಯ ಸಮ್ಮತಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com