ವಿಡಿಯೋಕಾನ್ ಪ್ರಕರಣ: ಐಸಿಐಸಿಐ ಮಾಜಿ ಸಿಇಒ ಚಂದಾ ಕೋಚಾರ್ ವಿರುದ್ಧ ಸಿಬಿಐನಿಂದ ಲುಕೌಟ್ ನೋಟೀಸ್

ಮಾಜಿ ಐಸಿಐಸಿಐ ಬ್ಯಾಂಕ್ ಸಿಇಒ ಮತ್ತು ಎಂ.ಡಿ.ಚಂದಾ ಕೋಚಾರ್, ಪತಿ ದೀಪಕ್ ಕೋಚಾರ್, ಮತ್ತು ವಿಡಿಯೋಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ವಿರುದ್ಧ ಸಿಬಿಐ ಲುಕೌಟ್ ನೋಟೀಸ್ ಹೊರಡಿಸಿದೆ.
ಚಂದಾ ಕೋಚಾರ್
ಚಂದಾ ಕೋಚಾರ್
ನವದೆಹಲಿ: ಮಾಜಿ ಐಸಿಐಸಿಐ ಬ್ಯಾಂಕ್ ಸಿಇಒ ಮತ್ತು ಎಂ.ಡಿ.ಚಂದಾ ಕೋಚಾರ್, ಪತಿ ದೀಪಕ್ ಕೋಚಾರ್, ಮತ್ತು ವಿಡಿಯೋಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ವಿರುದ್ಧ ಸಿಬಿಐ ಲುಕೌಟ್ ನೋಟೀಸ್ ಹೊರಡಿಸಿದೆ.
ಈ ತಿಂಗಳ ಪ್ರಾರಂಭದಲ್ಲಿ ಜಾರಿ ನಿರ್ದೇಸನಾಲಯ ಮೂವರು ವಿರುದ್ಧ ಆರ್ಥಿಕ ಅಪರಾಧ ಪ್ರಕರಣ ದಾಖಲಿಸಿತ್ತು.1,875 ಕೋಟಿ ರೂ. ಅಕ್ರಮ ವಹಿವಾಟಿನ ಬಗೆಗೆ ಇಡಿ ತನಿಖೆ ಸಹ ಪ್ರಾರಂಭಿಸಿದೆ.
ಒಂದು ವರದಿ ಪ್ರಕಾರ ಇದೇ ಮೊದಲ ಬಾರಿಗೆ ಚಂದಾ ಕೋಚಾರ್ ವಿರುದ್ಧ ಲುಕೌಟ್ ನೋತೀಸ್ ಜಾರಿಯಾಗಿದೆ. ಕಳೆದ ವರ್ಷ ಇವರ ಪತಿ ದೀಪಕ್ ವಿರುದ್ಧ ಸಿಬಿಐ ಆದೇಶದ ಮೇಲೆ ಲುಇಕೌಟ್ ನೋಟೀಸ್ ಹೊರಡಿಸಲಾಗಿತ್ತು.
"ಆರ್ಥಿಕ ಅಪರಾಧಗಳನ್ನೆಸಗಿದವರ ವಿರುದ್ಧ ಎಫ್ಐಆರ್ ದಾಖಲಾಗಿ ಕೆಲ ದಿನಗಳ ನಂತ ಈ ರೀತಿಯ ನೋಟೀಸ್ ಹೊರಡಿಸುವುದು ಹಿಂದಿನಿಂದ ನಡೆದು ಬಂದಿದೆ" ಎಂದು ಸಿಬಿಐನ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ಇದಾಗಲೇ ಚಂದಾ ಕೋಚಾರ್ ವಿರುದ್ಧ ಎನ್ಫೋರ್ಸ್ಮೆಂಟ್ ಕೇಸ್ ಮಾಹಿತಿ ವರದಿ(ಇಸಿಐಆರ್)  ಸಲ್ಲಿಕೆಯಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ದೂರು ದಾಖಲಿಸಲಾಗಿದೆಎಂದು ಇಡಿ ತಿಳಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com