ಅಮೆಜಾನ್ ಗಾಗಿ ಪಾರ್ಟ್ ಟೈಂ ಕೆಲಸ ಮಾಡಲು ಆಸಕ್ತಿ ಇದೆಯೇ? ಇಲ್ಲಿದೆ ಅವಕಾಶ!

ಇ- ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್ ಇಂಡಿಯಾದಲ್ಲಿ ಪಾರ್ಟ್ ಟೈಂ ಕೆಲಸ ಮಾಡಲು ಆಸಕ್ತಿ ಇದೆಯೇ? ಇಲ್ಲಿದೆ ಒಂದು ಸುವರ್ಣಾವಕಾಶ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಇ- ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್  ಇಂಡಿಯಾದಲ್ಲಿ ಪಾರ್ಟ್ ಟೈಂ ಕೆಲಸ ಮಾಡಲು ಆಸಕ್ತಿ ಇದೆಯೇ? ಇಲ್ಲಿದೆ ಒಂದು ಸುವರ್ಣಾವಕಾಶ.  
ದೇಶದಲ್ಲಿ ತನ್ನ ವಿತರಣಾ ಕಾರ್ಯಾಚರಣೆಯನ್ನು ವಿಸ್ತರಿಸುವ ಕಾರ್ಯಕ್ರಮವೊಂದನ್ನು ಅಮೆಜಾನ್ ಇಂಡಿಯಾ  ಇಂದು ಪ್ರಾರಂಭಿಸಿದೆ.
ಅಮೆಜಾನ್ ಫ್ಲೆಕ್ಸ್  ಎಂಬ ಹೆಸರಿನ ಈ  ಕಾರ್ಯಕ್ರಮದಡಿಯಲ್ಲಿ ಬಿಡುವಿನ ಸಮಯದಲ್ಲಿ ಅಮೆಜಾನ್  ವಸ್ತುಗಳನ್ನು   ವಿತರಣೆ ಮಾಡಿ ಗಂಟೆಗೆ 120ರಿಂದ 140 ರೂಪಾಯಿ ಸಂಪಾದಿಸಬಹುದಾಗಿದೆ. 
ಬೆಂಗಳೂರು, ಮುಂಬೈ ಮತ್ತು ದೆಹಲಿಯಲ್ಲಿ ಅಮೆಜಾನ್ ಫ್ಲೆಕ್ಸ್  ಕಾರ್ಯಕ್ರಮವನ್ನು ಜಾರಿಗೆ ಬರುತ್ತಿದೆ. ಈ ವರ್ಷದ ನಂತರ  ಉಳಿದ ನಗರಗಳಲ್ಲಿ ವಿಸ್ತರಿಸಲಾಗುವುದು ಎಂದು ಅಮೆಜಾನ್ ಇಂಡಿಯಾ ಕಂಪನಿ ತಿಳಿಸಿದೆ. 
ಆಪ್ ಮೂಲಕ ಕೆಲಸ ಮಾಡುವಂತಹದ್ದಾಗಿದ್ದು, ಆಸಕ್ತರು ಬಿಡುವಿನ ವೇಳೆಯಲ್ಲಿ ಅಮೆಜಾನ್ ಪ್ಯಾಕೇಜ್ ಗಳನ್ನು ವಿತರಣೆ ಮಾಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ 10 ಸಾವಿರ ಪಾರ್ಟ್ ಟೈಂ ಉದ್ಯೋಗವನ್ನು ಸೃಷ್ಟಿಸಲಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ಯಾಕೇಜ್ ಗಳನ್ನು ವಿತರಣೆ ಮಾಡುವ ಮುನ್ನ ಎಲ್ಲಾ ಡೆಲಿವರಿ ಪಾಲುದಾರರಿಗೆ  ಸಮಗ್ರ ಹಿನ್ನೆಲೆ ಪರಿಶೀಲನೆ ಮಾಡಿ ನಂತರ ತರಬೇತಿ ನೀಡಲಾಗುತ್ತದೆ. ಕಂಪನಿ ವತಿಯಿಂದ ಅಪಘಾತ ವಿಮೆ ಒದಗಿಸಲಾಗುತ್ತಿದೆ.
 ಅಮೆಜಾನ್ ಫ್ಲೆಕ್ಸ್ ನಿಂದ  ವಸ್ತುಗಳನ್ನು ವೇಗವಾಗಿ ಗ್ರಾಹಕರಿಗೆ  ರವಾನಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲಾಗುವುದು ಎಂದು ಅಮೆಜಾನ್ ಏಷ್ಯಾ  ಗ್ರಾಹಕರ ವಿಭಾಗದ ಉಪಾಧ್ಯಕ್ಷ ಅಖಿಲ್ ಸಕ್ಸೆನಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com