ಮತ್ತೆ ಇಳಿಕೆಯಾದ ತೈಲೋತ್ಪನ್ನಗಳ ದರ, ಇಂದಿನ ದರ ಪಟ್ಟಿ ಇಂತಿದೆ..!

ತೈಲೋತ್ಪನ್ನಗಳ ದರಗಳು ಸತತ 2ನೇ ದಿನವೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 9 ಪೈಸೆ ಹಾಗೂ ಡೀಸೆಲ್ ದರದಲ್ಲಿ 8 ಪೈಸೆ ಇಳಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ತೈಲೋತ್ಪನ್ನಗಳ ದರಗಳು ಸತತ 2ನೇ ದಿನವೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 9 ಪೈಸೆ ಹಾಗೂ ಡೀಸೆಲ್ ದರದಲ್ಲಿ 8 ಪೈಸೆ ಇಳಿಕೆಯಾಗಿದೆ.
ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ ಗೆ ರೂ. 74.82ಗಳಾಗಿದ್ದು, ಡೀಸೆಲ್‌ ದರ 69.60 ರೂ. ಗಳಾಗಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 72.41 ರೂ. ಮತ್ತು ಡೀಸೆಲ್‌ ದರ 67.37 ರೂ. ಇದೆ. ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್‌ ದರ 75.20 ರೂ. ಮತ್ತು ಡೀಸೆಲ್‌ ದರ 71.20 ರೂ. ಇದ್ದು, ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಪೆಟ್ರೋಲ್‌ ದರ 74.49 ರೂ. ಮತ್ತು ಡೀಸೆಲ್‌ ದರ 69.16 ರೂ. ಇದೆ. ವಾಣಿಜ್ಯ ನಗರಿ ಮುಂಬೈ ನಲ್ಲಿ ಪೆಟ್ರೋಲ್‌ ದರ 78.04 ರೂ. ಮತ್ತು ಡೀಸೆಲ್‌ ದರ70.58 ರೂ. ಇದೆ. 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ ಗೆ ರೂ. 3963 ಕ್ಕೆ ತಲುಪಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com