ವಿಜಯ್ ಮಲ್ಯಯು ಬಿಎಚ್ಎಲ್ ಷೇರುಗಳ ಮಾರಾಟದಿಂದ 1,008 ಕೋಟಿ ರೂ ಸಂಗ್ರಹ: ಇಡಿ

ಸಾಲ ಹಿಂಪಡೆತ ಆಯೋಗ (ಡೆಟ್ ರಿಕವರಿ ಟ್ರಿಬ್ಯೂನಲ್ ) ಮೂಲಕ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ (ಯುಬಿಎಚ್ಎಲ್) ಲಿಮಿಟೆಡ್ ಷೇರುಗಳ.....
ವಿಜಯ್ ಮಲ್ಯ
ವಿಜಯ್ ಮಲ್ಯ
ನವದೆಹಲಿ: ಸಾಲ ಹಿಂಪಡೆತ ಆಯೋಗ (ಡೆಟ್ ರಿಕವರಿ ಟ್ರಿಬ್ಯೂನಲ್ ) ಮೂಲಕ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ (ಯುಬಿಎಚ್ಎಲ್) ಲಿಮಿಟೆಡ್ ಷೇರುಗಳ ಮಾರಾಟದಿಂಡ 1,008 ಕೋಟಿ ರೂ.ಸಂಗ್ರಹವಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಮದ್ಯದ ದೊರೆ ವಿಜಯ್ ಮಲ್ಯ ಬ್ಯಾಂಕ್ ವಂಚನೆ ಪ್ರಕರಣದ ವಿರುದ್ಧ ದಾಖಲಾದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದ್ದ ಷೇರುಗಳನ್ನು ಇಂದು ಮಾರಾಟ ಮಾಡಿದೆ.. ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಯಸ್ ಬ್ಯಾಂಕ್ ವಶದಲ್ಲಿದ್ದ ಷೇರುಗಳನ್ನು ಡೆಟ್ ರಿಕವರಿ ಟ್ರಿಬ್ಯೂನಲ್ ಗೆ ನೀಡುವುದಕ್ಕೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಇಡಿ ಈ ಷೇರುಗಳನ್ನು ವಶಪಡಿಸಿಕೊಂಡು ಮಾರಾಟ ನಡೆಸಿತ್ತು.
ಇದರಂತೆ ಈ ತಿಂಗಳ ಪ್ರಾರಂಭದಲ್ಲಿ ಡಿಆರ್ಟಿ ಅಧಿಕಾರಿಗಳು ಯುಬಿಎಚ್ ಎಲ್ ಗೆ ಸೇರಿದ್ದ ಎಲ್ಲಾ 74,04,932 ಷೇರುಗಳನ್ನು ಮಾರಾಟ ಮಾಡುವ ಪ್ರಕಟಣೆ ಹೊರಡಿಸಿದ್ದರು.
ಮಲ್ಯ ಸಾಲಗಳ ವಸೂಲಾತಿಗಾಗಿ ವಿಶೇಷ ಪಿಎಂಎಲ್ಎ ನ್ಯಾಯಾಲಯವು ಮಾರ್ಚ್ 26 (ಮಂಗಳವಾರ) ದಂದು ಷೇರುಗಳನ್ನು ಮಾರಾಟ ಮಾಡಲು ಅನುಮತಿ ನೀಡಿತು.ಅದರಂತೆ ಬುಧವಾರ ಅಧಿಕಾರಿಗಳು ಷೇರುಗಳನ್ನು ಮಾರಾಟ ಮಾಡಿದರು ಮತ್ತು 1,008 ಕೋಟಿ ರೂ. ಮೊತ್ತವನ್ನು ಸಾಧಿಸಲಾಗಿದೆ" ಎಂದು ಸಂಸ್ಥೆ ತಿಳಿಸಿದೆ.
ಯುಬಿಎಲ್ (ಯುನಿಟ್ ಬ್ರೂವರೀಸ್ ಲಿಮಿಟೆಡ್) ಯ ಈ ಷೇರುಗಳನ್ನು ಯುಬಿಎಚ್ಎಲ್ ವಹಿಸಿಕೊಂಡಿತ್ತು ಮತ್ತು ಕಿಂಗ್ಫಿಶರ್ ಏರ್ಲೈನ್ಸ್ ತೆಗೆದುಕೊಂಡ ಸಾಲಕ್ಕೆ ಬದಲಾಗಿ ಬ್ಯಾಂಕಿನ ಭದ್ರತೆಯನ್ನು ಉಳಿಸಿಕೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com