ಮುಂಬೈಯ ಚೆಂಬೂರಿನಲ್ಲಿರುವ ಆರ್ ಕೆ ಸ್ಟುಡಿಯೊ
ವಾಣಿಜ್ಯ
ಮುಂಬೈಯ ಆರ್ ಕೆ ಸ್ಟುಡಿಯೊ ಇನ್ನು ನೆನಪು ಮಾತ್ರ; ತಲೆಯೆತ್ತಲಿವೆ ಐಷಾರಾಮಿ ಫ್ಲ್ಯಾಟ್ ಗಳು!
ವಾಣಿಜ್ಯ ನಗರಿ ಮುಂಬೈಯ ಕೇಂದ್ರ ಭಾಗದ ಚೆಂಬೂರಿನಲ್ಲಿರುವ ಬಾಲಿವುಡ್ ಚಿತ್ರರಂಗದ ಬಹಳ ಹಳೆಯ...
ನವದೆಹಲಿ: ವಾಣಿಜ್ಯ ನಗರಿ ಮುಂಬೈಯ ಕೇಂದ್ರ ಭಾಗದ ಚೆಂಬೂರಿನಲ್ಲಿರುವ ಬಾಲಿವುಡ್ ಚಿತ್ರರಂಗದ ಬಹಳ ಹಳೆಯ ಆರ್ ಕೆ ಸ್ಟುಡಿಯೊ ಚಿತ್ರಪ್ರೇಮಿಗಳಿಗೆ ಇನ್ನು ನೆನಪು ಮಾತ್ರ. ಈ ಜಾಗದಲ್ಲಿ ಇನ್ನು ಮುಂದೆ ಐಷಾರಾಮಿ ದುಬಾರಿ ಫ್ಲಾಟ್ ಗಳು ಮತ್ತು ರಿಟೈಲ್ ವಾಣಿಜ್ಯ ಮಳಿಗೆಗಳು ತಲೆಯೆತ್ತಲಿವೆ. ಈ ಜಾಗವನ್ನು ರಿಯಾಲ್ಟಿ ಸಂಸ್ಥೆ ಗೋದ್ರೆಜ್ ಪ್ರಾಪರ್ಟೀಸ್ ಖರೀದಿಸಿದೆ.
ಸುಮಾರು 2.2 ಎಕರೆ ಪ್ರದೇಶವನ್ನು ಹೊಂದಿರುವ ಆರ್ ಕೆ ಸ್ಟುಡಿಯೊಸ್ ಜಾಗದಲ್ಲಿ ಅತ್ಯಾಧುನಿಕ ವಸತಿ ಅಪಾರ್ಟ್ ಮೆಂಟ್ ಗಳು ಮತ್ತು ದುಬಾರಿ ರಿಟೈಲ್ ಮಳಿಗೆಗಳು ನಿರ್ಮಾಣಗೊಳ್ಳಲಿವೆ ಎಂದು ಗೋದ್ರೆಜ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಎಷ್ಟು ಮೊತ್ತಕ್ಕೆ ಭೂಮಿ ಮಾರಾಟವಾಗಿದೆ ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಜಾಗವನ್ನು ಬಳಸಿಕೊಳ್ಳಲಾಗುವುದು ಎಂದು ಗೋದ್ರೆಜ್ ಪ್ರಾಪರ್ಟಿಸ್ ಕಾರ್ಯನಿರ್ವಾಹಕ ಅಧ್ಯಕ್ಷ ಪಿರೊಜ್ಷಾ ಗೋದ್ರೆಜ್ ತಿಳಿಸಿದ್ದಾರೆ.
ಆರ್ ಕೆ ಸ್ಟುಡಿಯೊದ ಪರಂಪರೆಯನ್ನು ಗಮನದಲ್ಲಿಟ್ಟು ಕೊಂಡು ಜನತೆಗೆ ಉತ್ತಮ ವಾಸದ ಮನೆಗಳನ್ನು ನೀಡಲು ಸಂಸ್ಥೆ ಶ್ರಮಿಸುತ್ತದೆ ಎಂದು ಹೇಳಿದೆ.
ಮುಂಬೈಯ ಚೆಂಬೂರ್ ನಲ್ಲಿರುವ ಆರ್ ಕೆ ಸ್ಟುಡಿಯೊಸ್ ಇಷ್ಟು ದಿನ ಕಪೂರ್ ಮನೆತನದ ಸ್ವತ್ತಾಗಿತ್ತು. ಹಲವು ದಶಕಗಳ ಕಾಲ ಇಲ್ಲಿ ಬಾಲಿವುಡ್ ಮತ್ತು ಬೇರೆ ಭಾಷೆಯ ಚಿತ್ರರಂಗದ ಚಟುವಟಿಕೆಗಳಿಗೆ ತಾಣವಾಗಿತ್ತು. ಶ್ರೀಮಂತ ಇತಿಹಾಸ ಹೊಂದಿರುವ ಈ ಸ್ಥಳವನ್ನು ನೆನಪಿನಲ್ಲುಳಿಯುವಂತೆ ಹೊಸ ಅಧ್ಯಾಯ ಬರೆಯಲು ಗೋದ್ರೆಜ್ ಪ್ರಾಪರ್ಟಿಸ್ ಗೆ ನೀಡಿದ್ದೇವೆ ಎನ್ನುತ್ತಾರೆ ರಣದೀರ್ ಕಪೂರ್. ಇವರು ಬಾಲಿವುಡ್ ದಂತಕಥೆ ರಾಜ್ ಕಪೂರ್ ಅವರ ಹಿರಿಯ ಪುತ್ರ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ