ಪೇಟಿಎಂ ಕ್ಯಾಶ್ ಬ್ಯಾಕ್ ನಲ್ಲಿ 10 ಕೋಟಿ ರೂ. ವರೆಗೆ ವಂಚನೆ, ತನಿಖೆಯಿಂದ ಬಹಿರಂಗ!

ಸಣ್ಣ ವ್ಯಾಪಾರಿಗಳು ಮತ್ತು ನೂರಾರು ಮಾರಾಟಗಾರರಿಂದ ಬಂದ ಕ್ಯಾಶ್ ಬ್ಯಾಕ್ ನ ಬಗ್ಗೆ ತನಿಖೆ ನಡೆಸಿದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಸಣ್ಣ ವ್ಯಾಪಾರಿಗಳು ಮತ್ತು ನೂರಾರು ಮಾರಾಟಗಾರರಿಂದ ಬಂದ ಕ್ಯಾಶ್ ಬ್ಯಾಕ್ ನ ಬಗ್ಗೆ ತನಿಖೆ ನಡೆಸಿದ ಪೇಟಿಎಂನಲ್ಲಿ ಸುಮಾರು 10 ಕೋಟಿ ರೂಪಾಯಿಗಳವರೆಗೆ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು ಹಲವಾರು ನೌಕರರನ್ನು ವಜಾಗೊಳಿಸಲಾಗಿದೆ.
ಈ ಘಟನೆಯ ಬಳಿಕ ಕ್ಯಾಶ್ ಬ್ಯಾಕ್ ವಹಿವಾಟು ಮೇಲೆ ಯಾವುದೇ ಧಕ್ಕೆಯಿಲ್ಲ, ಎಂದಿನಂತೆ ವಹಿವಾಟು ನಡೆಯಲಿದೆ ಎಂದು ಪೇಟಿಎಂ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ವಿಜಯ್ ಶೇಖರ್ ಶರ್ಮ ತಿಳಿಸಿದ್ದಾರೆ.
ಕಳೆದ ದೀಪಾವಳಿ ಹಬ್ಬದ ನಂತರ ಕೆಲವು ಸಣ್ಣ ವ್ಯಾಪಾರಿಗಳು ಕ್ಯಾಶ್ ಬ್ಯಾಕ್ ನಿಂದ ಬಹುದೊಡ್ಡ ಮೊತ್ತದಲ್ಲಿ ಕಮಿಷನ್ ಪಡೆದಿರುವುದು ಪತ್ತೆಯಾಗಿದ್ದು ಈ ಬಗ್ಗೆ ನಮ್ಮ ಲೆಕ್ಕಪರಿಶೋಧನೆ ತಂಡಕ್ಕೆ ತನಿಖೆ ನಡೆಸುವಂತೆ ಹೇಳಿದ್ದೇವೆ ಎಂದು ಶರ್ಮ ಸುದ್ದಿಗಾರರಿಗೆ ತಿಳಿಸಿದರು.
ಕಂಪೆನಿಯ ಲೆಕ್ಕಪರಿಶೋಧನೆ ನಡೆಸುವ ಸಮಾಲೋಚನಾ ಸಂಸ್ಥೆ ಇವೈ ಜೊತೆಗೆ ಮಾತುಕತೆಯಲ್ಲಿ ಕಂಪೆನಿ ನಿರತವಾಗಿದೆ. ಕ್ಯಾಶ್ ಬ್ಯಾಕ್ ನ ಕಮಿಷನ್ ಪಡೆಯಲು ಕೆಲವು ಸಣ್ಣ ವ್ಯಾಪಾರಿಗಳು ಕಂಪೆನಿಯ ಜ್ಯೂನಿಯರ್ ನೌಕರರ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com