• Tag results for fraud

ಸಿಇಒ ಹೆಸರಿನಲ್ಲಿ ಹಣ ವರ್ಗಾವಣೆ; ಸೆರಂ ಇನ್ಸ್ಟಿಟ್ಯೂಟ್ ಗೆ 1 ಕೋಟಿ ರೂ. ವಂಚಿಸಿದ ವಂಚಕರು!

ಕೊರೋನಾ ಲಸಿಕೆ ತಯಾರಿಕಾ ಕಂಪನಿ ಸೆರಂ ಇನ್ಸ್ಟಿಟ್ಯೂಟ್  ಆಫ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದರ್ ಪೂನವಾಲ್ಲಾ ಹೆಸರಿನಲ್ಲಿ ಹಣ ವರ್ಗಾವಣೆ ಮಾಡುವ ಸಂದೇಶ ಕಳುಹಿಸುವ ಮೂಲಕ ವಂಚಕರು 1 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎಂದು ಪುಣೆ ಪೊಲೀಸರು ಶನಿವಾರ ತಿಳಿಸಿದ್ದಾರೆ.

published on : 10th September 2022

ಲೋನ್ ಆ್ಯಪ್ ವಂಚನೆಗೆ ಸಿಲುಕಿದ ಬೆಂಗಳೂರಿನ ವ್ಯಕ್ತಿ; ಸಾಲಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿದರೂ ಬಿಡದ ಆರೋಪಿಗಳು!

ಯಾವುದೋ ರಹಸ್ಯ ಆ್ಯಪ್‌ಗಳ ಮೂಲಕ ಸಾಲ ಪಡೆಯುವ ಮುನ್ನ ಎರಡು ಬಾರಿ ಯೋಚಿಸಿ. ಸಾಲ ಪಡೆಯುವುದಕ್ಕಾಗಿ ಹತಾಶಗೊಂಡು ಅಜ್ಞಾತ ಅಪ್ಲಿಕೇಶನ್‌ಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ಸಂತ್ರಸ್ತನ ಮೊಬೈಲ್ ಫೋನ್‌ ಮತ್ತು ಕಂಪ್ಯೂಟರ್‌ ಅನ್ನು ವಶಕ್ಕೆ ಪಡೆದುಕೊಂಡು ಹ್ಯಾಕರ್‌ಗಳು ಡೇಟಾ ಮತ್ತು ವೈಯಕ್ತಿಕ ವಿವರಗಳನ್ನು ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

published on : 31st August 2022

ಕರ್ನಾಟಕ: ವಿದ್ಯುತ್ ಬಿಲ್ ಪಾವತಿ ನೆಪದಲ್ಲಿ ಗ್ರಾಹಕರಿಗೆ ವಂಚನೆ, ಬೆಸ್ಕಾಂನಿಂದ ಪೊಲೀಸ್ ದೂರು

ಆನ್ಲೈನ್‌ ಮೂಲಕ ಬೆಸ್ಕಾಂ ಗ್ರಾಹಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವ ಸೈಬರ್‌ ವಂಚಕರ ಜಾಲದ ವಿರುದ್ದ ಕ್ರಮ ಜರಗಿಸುವಂತೆ ಕೋರಿ ಸೈಬರ್‌ ಕ್ರೈಂ ಠಾಣೆಗೆ ಬೆಸ್ಕಾಂ ದೂರು ನೀಡಿದೆ.   

published on : 26th August 2022

ಅತಿದೊಡ್ಡ ಬ್ಯಾಂಕ್ ವಂಚನೆ ಕೇಸ್: ಇಬ್ಬರು ಬಿಲ್ಡರ್‌ಗಳ 415 ಕೋಟಿ ರೂ. ಮೌಲ್ಯದ ಆಸ್ತಿ ವಶ

ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ ವಂಚನೆ ಪ್ರಕರಣದಲ್ಲಿ ಉದ್ಯಮಿಗಳಾದ ಸಂಜಯ್ ಛಾಬ್ರಿಯಾ ಮತ್ತು ಅವಿನಾಶ್ ಭೋಸಲೆ ಅವರಿಗೆ ಸೇರಿದ 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

published on : 3rd August 2022

ಬೆಂಗಳೂರು: 75 ಲಕ್ಷ ರೂಪಾಯಿ ಆಸೆಗಾಗಿ 35 ಲಕ್ಷ ರೂಪಾಯಿ ಕಳೆದುಕೊಂಡ ಟೆಕ್ಕಿ!

ಬೆಂಗಳೂರಿನಲ್ಲಿರುವ ಕೇರಳದ 36 ವರ್ಷದ ಮಹಿಳಾ ಸಾಫ್ಟ್ ವೇರ್ ಇಂಜಿನಿಯರ್ 75 ಲಕ್ಷ ರೂಪಾಯಿ ಆಸೆಗಾಗಿ 35 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

published on : 6th July 2022

ಬೆಂಗಳೂರು: ಎಟಿಎಂ ನಲ್ಲಿ ಸಹಾಯ ಮಾಡಿದ ವ್ಯಕ್ತಿಯಿಂದ ನಿವೃತ್ತ ಸರ್ಕಾರಿ ನೌಕರನಿಗೆ 8.5 ಲಕ್ಷ ರೂಪಾಯಿ ವಂಚನೆ!

ನಿವೃತ್ತ ಸರ್ಕಾರಿ ನೌಕರರೊಬ್ಬರಿಗೆ ಎಟಿಎಂ ನಲ್ಲಿ ಹಣ ತೆಗೆಯಲು ಸಹಾಯ ಮಾಡಿದ್ದ ವ್ಯಕ್ತಿಯೋರ್ವ ಡೆಬಿಟ್ ಕಾರ್ಡ್ ನ್ನು ಬದಲು ಮಾಡಿ ವೃದ್ಧರ ಖಾತೆಯಿಂದ 8.5 ಲಕ್ಷ ರೂಪಾಯಿ ವಂಚಿಸಿದ್ದಾನೆ. 

published on : 3rd July 2022

ಉದ್ಯೋಗಾಕಾಂಕ್ಷಿಗಳೇ ಎಚ್ಚರ: ಸರ್ವ ಶಿಕ್ಷಾ ಅಭಿಯಾನದ ನಕಲಿ ವೆಬ್ ಸೈಟ್ ಪತ್ತೆ, ಉದ್ಯೋಗದ ನೆಪದಲ್ಲಿ ಹಣ ವಸೂಲಿ!

ಇತ್ತೀಚಿನ ದಿನಗಳಲ್ಲಿ ವೆಬ್ ಸೈಟ್, ಯುಟ್ಯೂಬ್ ಗಳು ಸೇರಿದಂತೆ ಹತ್ತಾರು ನಕಲಿ ತಾಣಗಳು ತಪ್ಪು ಮಾಹಿತಿ ನೀಡುವ ಮೂಲಕ ಜನರನ್ನು ಹಾದಿ ತಪ್ಪಿಸುತ್ತಿವೆ. ಮತ್ತೆ ಕೆಲವರು ಇದನ್ನೇ ಅಸ್ತ್ರ ಮಾಡಿಕೊಂಡು ಜನರ ಸುಲಿಗೆಗೂ ಇಳಿದಿವೆ.

published on : 1st July 2022

ಫಾಸ್ಟ್ ಟ್ಯಾಗ್ ಬಳಸಿ ಹಣ ದೋಚುವ ವಂಚಕರ ಕುರಿತು ವೈರಲ್ ವಿಡಿಯೋ: NCPI ಸ್ಪಷ್ಟನೆ ಹೀಗಿದೆ...

ಹೆದ್ದಾರಿಗಳಲ್ಲಿ ಕಾರಿನ ಗಾಜು ಒರೆಸುವ ಸೋಗಿನಲ್ಲಿ ಬರುವ ಮಂದಿ ಫಾಸ್ಟ್ ಟ್ಯಾಗ್ ಹಣವನ್ನು ದೋಚುತ್ತಾರೆ ಎಂಬ ಅಂಶ ವಿಡಿಯೋ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡಿತ್ತು.

published on : 27th June 2022

ಜಿಎಸ್ ಟಿ, ತೆರಿಗೆದಾರರಿಗೆ ವಂಚನೆ ಆರೋಪ: ಲೆಕ್ಕ ಪರಿಶೋಧಕ ಬಂಧನ

ತೆರಿಗೆ ಲೆಕ್ಕ ಪರಿಶೋಧಕರ ಕಚೇರಿ ಮತ್ತು ಮನೆಯ ಆವರಣದ ಮೇಲೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಜಾರಿ ವಿಭಾಗ ಅಧಿಕಾರಿಗಳು ಲೆಕ್ಕ ಪರಿಶೋಧಕನನ್ನು ಬಂಧಿಸಿದ್ದಾರೆ, ಲೆಕ್ಕ ಪರಿಶೋಧಕರು ನಕಲಿ ‘ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್’ ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.

published on : 6th May 2022

ನೀರವ್ ಮೋದಿ ಬ್ಯಾಂಕ್ ವಂಚನೆ ಕೇಸ್: ಪ್ರಮುಖ ಆರೋಪಿ ಈಜಿಪ್ಟ್ ನಿಂದ ಭಾರತಕ್ಕೆ ಹಸ್ತಾಂತರ 

ಮಹತ್ವದ ಕಾರ್ಯಾಚರಣೆಯೊಂದರಲ್ಲಿ ನೀರವ್ ಮೋದಿ ಬ್ಯಾಂಕ್ ಗೆ ರೂ. 7000 ಕೋಟಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯೊಬ್ಬನನ್ನು ಈಜಿಪ್ಟ್ ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ.

published on : 12th April 2022

ಬೆಂಗಳೂರು: ನಕಲಿ ಇಂಜಿನ್ ಆಯಿಲ್ ದಂಧೆ, ಇಬ್ಬರು ವಂಚಕರ ಬಂಧನ

ಅಶೋಕ ನಗರ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್(ಎಎಸ್ ಐ) ಒಬ್ಬರು, ಟೈಲರ್ ಸೇರಿದಂತೆ ಇಬ್ಬರು ವಂಚಕರನ್ನು ಬಂಧಿಸುವುದರೊಂದಿಗೆ ನಗರದಲ್ಲಿನ ನಕಲಿ ಇಂಜಿನ್ ಆಯಿಲ್ ದಂಧೆಯನ್ನು ಬೇಧಿಸಿದ್ದಾರೆ.

published on : 6th April 2022

ಇವಿಎಂ ತಿರುಚುವಿಕೆ ಸಾಧ್ಯ; ಮತ ಎಣಿಕೆ ವೇಳೆ ಕ್ಯಾಮರಾದೊಂದಿಗೆ ಸಿದ್ಧರಾಗಿ: ಅಖಿಲೇಶ್ ಯಾದವ್

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮಾತನಾಡಿ, ವಾರಣಾಸಿಯಲ್ಲಿ ಇವಿಎಂ ಸಿಕ್ಕಿಬಿದ್ದಿರುವ ಸುದ್ದಿ ರಾಜ್ಯದ ಪ್ರತಿಯೊಂದು ವಿಧಾನಸಭೆಗೂ ಎಚ್ಚರವಾಗಿರುವಂತೆ ಸಂದೇಶ ನೀಡುತ್ತಿದೆ. ಅಯೋಧ್ಯೆ ಮತ್ತು ವಾರಣಾಸಿ ಚುನಾವಣೆಗಳಲ್ಲಿ ಎಸ್‌ಪಿ ಗೆಲುವು ಸಾಧಿಸುತ್ತಿರುವುದರಿಂದ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ ಎಂದು ಹೇಳಿದ್ದಾರೆ.

published on : 8th March 2022

18,000 ಕೋಟಿ ರೂ. ಕ್ರಿಪ್ಟೊ ಕರೆನ್ಸಿ ವಂಚನೆ: ಭಾರತೀಯ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಿದ FBI

ಆರೋಪ ಸಾಬೀತಾದಲ್ಲಿ ಆರೋಪಿ ಸತೀಶ್ ಕುಂಭಾನಿ ಅವರಿಗೆ ಗರಿಷ್ಠ 70 ವರ್ಷ ಜೈಲುಶಿಕ್ಷೆ ಪಕ್ಕಾ.

published on : 28th February 2022

300 ಕೋಟಿ ವಂಚನೆ ಪ್ರಕರಣ: ಯೆಸ್ ಬ್ಯಾಂಕ್‌ ಮಾಜಿ ಎಂಡಿ ರಾಣಾ ಕಪೂರ್ ಗೆ ಷರತ್ತುಬದ್ಧ ಜಾಮೀನು

300 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್‌ನ ಮಾಜಿ ಎಂಡಿ ಮತ್ತು ಸಿಇಒ ರಾಣಾ ಕಪೂರ್ ಗೆ ಮುಂಬೈ ಸೆಷನ್ಸ್ ನ್ಯಾಯಾಲಯವು ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

published on : 16th February 2022

ಕೋವಿಡ್ ಲಸಿಕೆಯಲ್ಲಿ ವಂಚನೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರ, ಹಾದಿತಪ್ಪಿಸುವ ಯತ್ನ: ಕೇಂದ್ರ ಸರ್ಕಾರ

ಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದುಕೊಳ್ಳದ ಫಲಾನುಭವಿಗಳನ್ನು ಸಂಪೂರ್ಣ ಲಸಿಕೆ ಪಡೆದಿರುವುದಾಗಿ ನೋಂದಾಯಿಸಲಾಗುತ್ತಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದು, ಹಾದಿ ತಪ್ಪಿಸುವಂತಹದ್ದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.

published on : 3rd February 2022
1 2 > 

ರಾಶಿ ಭವಿಷ್ಯ