

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಗೆ ಮೋಸ ಮಾಡಿದ್ದಲ್ಲದೆ ಆಕೆಯ ಸಂಬಂಧಿಕರು, ಸ್ನೇಹಿತರಿಂದ 1.75 ಕೋಟಿ ರೂಪಾಯಿ ಪಡೆದಿರುವ ಆರೋಪ ಸಾಫ್ಟ್‌ವೇರ್ ಎಂಜಿನಿಯರ್ ವಿರುದ್ಧ ಕೇಳಿಬಂದಿದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಆರೋಪಿಗೆ 2024 ಮಾರ್ಚ್ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಗೆ ತಾನು ದೊಡ್ಡ ಉದ್ಯಮಿ ಎಂದು ಹೇಳಿಕೊಂಡಿದ್ದು 715 ಕೋಟಿ ಆಸ್ತಿ ಇದೆ ಎಂದು ಹೇಳಿದ್ದನು. ಮದುವೆ ಆದರೆ ನಿನ್ನನ್ನೇ ಆಗುತ್ತೇನೆ ಎಂದು ಯುವತಿಗೆ ಹೇಳಿದ್ದಲ್ಲದೆ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಪರಿಚಯ ಮಾಡಿಸಿದ್ದನು. ನಂತರ ಆಸ್ತಿ ಸಂಬಂಧ ಇಡಿಯಲ್ಲಿ ಪ್ರಕರಣ ದಾಖಲಾಗಿದ್ದು ಅಕೌಂಟ್ ಸೀಜ್ ಆಗಿದೆ. ಸ್ವಲ್ಪ ಹಣದ ಅವಶ್ಯಕತೆ ಇದೆ ಎಂದು ಮೊದಲು 15 ಸಾವಿರ ಹಣ ಪಡೆದು, ನಂತರ ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಅಂತಾ ಯುವತಿ ಹೆಸರಲ್ಲಿ ಲೋನ್ ಮಾಡಿಸಿದ್ದನು. ಜೊತೆಗೆ ಯುವತಿ ಸ್ನೇಹಿತರ ಬಳಿಯೂ ಸಾಲ ಪಡೆದಿದ್ದನು. ಹಂತ ಹಂತವಾಗಿ ಒಟ್ಟು 1.75 ಕೋಟಿ ಹಣ ಪಡೆದಿದ್ದ ಎಂದು ದೂರಲಾಗಿದೆ.
Advertisement