• Tag results for bengaluru

ಮೇಕೆದಾಟು ಯೋಜನೆಯಲ್ಲಿ ಕರ್ನಾಟಕಕ್ಕೆ ಮಹತ್ವದ ಮುನ್ನಡೆ!

ಕರ್ನಾಟಕಕ್ಕೆ ಮೇಕೆದಾಟು ಯೋಜನೆಯಲ್ಲಿ ಮಹತ್ವದ ಮುನ್ನಡೆಯಾಗಿದೆ. ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ರಾಷ್ಟ್ರೀಯ ಹಸಿರು ಪೀಠ ವಜಾಗೊಳಿಸಿದೆ. 

published on : 18th June 2021

148 ದೈಹಿಕ ಶಿಕ್ಷಕರ ಮುಂಬಡ್ತಿಗೆ ಅಸ್ತು: ಸುರೇಶ್ ಕುಮಾರ್

ಸರ್ಕಾರಿ ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಬಹುಕಾಲದ ಬೇಡಿಕೆಯಾಗಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

published on : 18th June 2021

ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ 2 ತಿಂಗಳ ಕಾಲಾವಕಾಶ: ಪ್ರಭು ಚವ್ಹಾಣ್

ಕೋವಿಡ್ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪಶುಸಂಗೋಪನೆ ಇಲಾಖೆಯ ಪಶುವೈದ್ಯಕೀಯ ಸಹಾಯಕ ಮತ್ತು ಪರೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಇನ್ನೂ 2 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್  ತಿಳಿಸಿದ್ದಾರೆ.

published on : 18th June 2021

ಮೇಕೆದಾಟು ಯೋಜನೆ ಕಾನೂನು ವ್ಯಾಪ್ತಿ ಮೀರಿ ಹೋಗಿಲ್ಲ: ಬಸವರಾಜ ಬೊಮ್ಮಾಯಿ

ಮೇಕೆದಾಟು ಯೋಜನೆ ಕಾನೂನು ವ್ಯಾಪ್ತಿ ಮೀರಿ ಹೋಗಿಲ್ಲ ಎಂದು ಗೃಹಸಚಿವರೂ ಆಗಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

published on : 18th June 2021

ರಾಜ ಭವನದಲ್ಲಿ ಉದ್ಯಾನವನ ನಿರ್ವಹಣೆಗೆ 3 ವರ್ಷಗಳಲ್ಲಿ ಮಾಡಿರುವ ಖರ್ಚು ಬರೋಬ್ಬರಿ 3.2 ಕೋಟಿ ರೂ!

ಮೂರು ವರ್ಷಗಳಲ್ಲಿ (2014ರಿಂದ 2017ರವರೆಗೆ) ರಾಜ ಭವನದ ಉದ್ಯಾನವನವನ್ನು ನಿರ್ವಹಿಸಲು ಬರೋಬ್ಬರಿ 3.27 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ ಎಂದು ಆರ್ ಟಿಐ ನಿಂದ ಬಹಿರಂಗವಾಗಿದೆ.

published on : 18th June 2021

ಲಾಕ್ಡೌನ್ ನಿಯಮ ಉಲ್ಲಂಘನೆ: ಬೆಂಗಳೂರು ಪೊಲೀಸರಿಂದ 3 ದಿನದಲ್ಲಿ 10 ಲಕ್ಷ ರೂ. ದಂಡ ಸಂಗ್ರಹ!

ನಗರದಲ್ಲಿ ಅನ್'ಲಾಕ್ ಪ್ರಕ್ರಿಯೆ ಹಂತ ಹಂತವಾಗಿ ಆರಂಭವಾಗುತ್ತಿದ್ದು, ಈ ನಡುವಲ್ಲೇ ನಗರ ಪೊಲೀಸರು ಲಾಕ್ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದರಂತೆ ಕೇವಲ ಮೂರು ದಿನಗಳಲ್ಲಿ 10 ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ. 

published on : 18th June 2021

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೂ.100 ಗಡಿ ದಾಟಿದ ಪೆಟ್ರೋಲ್ ದರ; ಇಲ್ಲಿದೆ ಹೊಸ ದರ ಪಟ್ಟಿ!

ರಾಜಧಾನಿಯಲ್ಲಿ ತೈಲ ದರ ಗಗನಕ್ಕೇರಿದ್ದು, ಲೀಟರ್ ಪೆಟ್ರೋಲ್ ಸಾರ್ವಕಾಲಿಕ ದಾಖಲೆ ಬರೆದಿದೆ. ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ಪೆಟ್ರೋಲ್ ದರ ರೂ.100ರ ಗಡಿ ದಾಟಿದೆ.

published on : 18th June 2021

ಕೊರೋನಾ: ರಾಜ್ಯದಲ್ಲಿ ಇಂದು 5,983 ಹೊಸ ಪ್ರಕರಣ, 138 ಸಾವು, 10,685 ಮಂದಿ ಡಿಸ್ಚಾರ್ಜ್

ರಾಜ್ಯದಲ್ಲಿ ಇಂದು ಹೊಸದಾಗಿ 5,983 ಮಂದಿಗೆ ಕೊರೋನಾ ಕಾಣಿಸಿಕೊಂಡಿದ್ದು, 10,685 ಮಂದಿ ಡಿಸ್ಚಾರ್ಜ್ ಆಗಿದ್ದರೆ, 138 ಮಂದಿ ಸಾವನ್ನಪ್ಪಿದ್ದಾರೆ.

published on : 17th June 2021

ನಾಯಕತ್ವ ಬದಲಾವಣೆ ಕುರಿತು ಪಾರ್ಲಿಮೆಂಟರಿ ಬೋರ್ಡ್ ತೀರ್ಮಾನವೇ ಅಂತಿಮ: ಸಿ.ಟಿ. ರವಿ

ನಾಯಕತ್ವ ಬದಲಾವಣೆ ಬಗ್ಗೆ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ನಮ್ಮ ಪಾರ್ಟಿಯಲ್ಲಿ ಪಾರ್ಲಿಮೆಂಟರಿ ಬೋರ್ಡ್ ಇದ್ದು, ಪಾರ್ಲಿಮೆಂಟರಿ ಬೋರ್ಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಅವರು ನಿರ್ಧಾರ ಮಾಡಿದರೆ ಮುಗಿಯಿತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

published on : 17th June 2021

ಶಾಸಕ ಅರವಿಂದ್ ಬೆಲ್ಲದ್ ಫೋನ್ ಕದ್ಧಾಲಿಕೆ ಆರೋಪ

ಶಾಸಕ ಅರವಿಂದ್​ ಬೆಲ್ಲದ್​ ಇದೀಗ ಫೋನ್ ಕದ್ಧಾಲಿಕೆಯ ಆರೋಪ ಮಾಡಿದ್ದಾರೆ. ನನ್ನ ಫೋನ್ ಟ್ಯಾಪ್ ಆಗಿದೆ. ನನ್ನನ್ನ ಫಾಲೋ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ.

published on : 17th June 2021

ರೈಲ್ವೇ ಹಳಿಗಳಿಂದ ತಾಮ್ರ ಕದಿಯುತ್ತಿದ್ದ ಕಳ್ಳರ ಬಂಧನ

ನೈಋತ್ಯ ರೈಲ್ವೆ ವಲಯದ ರೈಲ್ವೆ ಹಳಿಗಳಲ್ಲಿ ಓವರ್ಹೆಡ್ ವಿದ್ಯುತ್ ತಂತಿಗಳಿಂದ ತಾಮ್ರವನ್ನು ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ರೆಡ್ ಹ್ಯಾಂಡ್ ಆಗಿ ಬುಧವಾರ ಬಂಧಿಸಿದ್ದಾರೆ,

published on : 17th June 2021

ಷರತ್ತುಗಳೊಂದಿಗೆ ಜೂನ್​​ 21ರಿಂದ ಬಿಎಂಟಿಸಿ ಸಂಚಾರ ಆರಂಭಕ್ಕೆ ಬಿಬಿಎಂಪಿ ಒಪ್ಪಿಗೆ

ಸಾರ್ವಜನಿಕರಿಂದ ತೀವ್ರ ಒತ್ತಡ ಮನವಿ ಕೇಳಿಬಂದ ಹಿನ್ನಲೆಯಲ್ಲಿ ಬಿಬಿಎಂಪಿ ಇದೇ ಸೋಮವಾರ ಜೂ.21ರಿಂದ ಷರತ್ತುಗಳೊಂದಿಗೆ ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸಲು ಬಿಬಿಎಂಪಿ ಒಪ್ಪಿಗೆ ಸೂಚಿಸಿದೆ.

published on : 17th June 2021

ರೈಲ್ವೆ ಇಲಾಖೆಗೆ ಸೇರಿದ ಭೂಮಿಯಲ್ಲಿ ಬಿಬಿಎಂಪಿ ರಸ್ತೆ ನಿರ್ಮಾಣ: ರೋಡ್ ಸೀಲ್ ಮಾಡಿದ ಅಧಿಕಾರಿಗಳು!

ಅನುಮತಿಯಿಲ್ಲದೇ ತನ್ನ ಇಲಾಖೆಗೆ ಸೇರಿದ್ದ ಜಾಗದಲ್ಲಿ ನಿರ್ಮಿಸಿದ್ದ ರಸ್ತೆಯನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಮುಚ್ಚಿರುವ ವಿಲಕ್ಷಣ ಘಟನೆ ನಡೆದಿದೆ.

published on : 17th June 2021

ಸ್ಪುಟ್ನಿಕ್ ವಿ ಲಸಿಕೆ ಶೀಘ್ರದಲ್ಲೇ ಬೆಂಗಳೂರಿಗೆ 

ಕೊರೋನಾ ಸೋಂಕಿನ ವಿರುದ್ಧ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ ಭಾರತದಲ್ಲಿ ನಡೆಯುತ್ತಿರುವ ಟೆಸ್ಟಿಂಗ್ ಅಂತಿಮ ಹಂತದಲ್ಲಿದ್ದು ದೇಶದ ಮಾರ್ಕೆಟ್​ಗಳಿಗೆ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಭಾರತದಲ್ಲಿ ಅದರ ಹಂಚಿಕೆಯನ್ನು ಮಾಡಲಿರುವ ಡಾ. ರೆಡ್ಡೀಸ್ ಲ್ಯಾಬೊರೇಟೊರೀಸ್ ಸಂಸ್ಥೆ ಬುಧವಾರದಂದು ಹೇಳಿದೆ. 

published on : 17th June 2021

ಕೆಲ ನಿರ್ಬಂಧಗಳೊಂದಿಗೆ ನಗರದಲ್ಲಿ ಬಸ್, ಮೆಟ್ರೋ ಸಂಚಾರ ಆರಂಭಕ್ಕೆ ಚಿಂತನೆ: ಬಿಬಿಎಂಪಿ

ಎರಡನೇ ಹಂತದ ಅನ್'ಲಾಕ್ ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ಸಲುವಾಗಿ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ರೈಲು ಸಂಚಾರವನ್ನು ಆರಂಭಿಸಲು ಹಾಗೂ ಧಾರ್ಮಿಕ ಕ್ಷೇತ್ರಗಳ ತೆರೆಯಲು ಚಿಂತನೆಗಳು ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.

published on : 17th June 2021
1 2 3 4 5 6 >