Relationship'ನಲ್ಲಿರುವಂತೆ ಯುವತಿಗೆ ಕಿರುಕುಳ; ನಿರಾಕರಿಸಿದ್ದಕ್ಕೆ ಹಾಸ್ಟೆಲ್‌'ಗೆ ನುಗ್ಗಿ ಹಲ್ಲೆಗೆ ಯತ್ನ, ಆರೋಪಿ ಬಂಧನ- Video

ಅದೇ ಹಾಸ್ಟೆಲ್‌ನಲ್ಲಿ ತಂಗಿದ್ದ ಮನು ಶರ್ಮಾ ಎಂಬ ವ್ಯಕ್ತಿ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ. ಒಟ್ಟಿಗೆ ಇರಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದ. ನಿರಾಕರಿಸಿದರೂ, ಆರೋಪಿ ಕಿರುಕುಳ ನೀಡುತ್ತಲೇ ಇದ್ದ. ನನ್ನ ಸ್ನೇಹಿತೆ ಪ್ರಿಯಾಂಕಾ ಪ್ರಸಾದ್ ಮೂಲಕ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ.
Accused
ಮಹಿಳೆ ಮೇಲೆ ಕೂಗಾಡುತ್ತಿರುವ ವ್ಯಕ್ತಿ
Updated on

ಬೆಂಗಳೂರು: ‘ರಿಲೇಶನ್‌ಶಿಪ್’ ಒತ್ತಾಯವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿಗೆ ವ್ಯಕ್ತಿಯೊಬ್ಬ ಕಿರುಕುಳ, ದೌರ್ಜನ್ಯ ಹಾಗೂ ಹಲ್ಲೆಗೆ ಯತ್ನಿಸಿರುವ ಘಟನೆಯೊಂದು ಇಂದಿರಾನಗರ ಪ್ರದೇಶದಲ್ಲಿರುವ ಜನಪ್ರಿಯ ಹಾಸ್ಟೆಲ್‌ನಲ್ಲಿ ನಡೆದಿದೆ.

ಮಹಿಳೆ ಸಲ್ಲಿಸಿದ ದೂರಿನ ಪ್ರಕಾರ, ಅದೇ ಹಾಸ್ಟೆಲ್‌ನಲ್ಲಿ ತಂಗಿದ್ದ ಮನು ಶರ್ಮಾ ಎಂಬ ವ್ಯಕ್ತಿ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ. ಒಟ್ಟಿಗೆ ಇರಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದ. ನಿರಾಕರಿಸಿದರೂ, ಆರೋಪಿ ಕಿರುಕುಳ ನೀಡುತ್ತಲೇ ಇದ್ದ. ನನ್ನ ಸ್ನೇಹಿತೆ ಪ್ರಿಯಾಂಕಾ ಪ್ರಸಾದ್ ಮೂಲಕ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ.

ಮಾರ್ಚ್ 11ರ ರಾತ್ರಿ ಹಾಸ್ಟೆಲ್ ಆವರಣದಲ್ಲಿ ಕೂಗಾಡಲು ಪ್ರಾರಂಭಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ತಿಳಿಸಲಾಗಿದೆ.

ನನ್ನ ಮತ್ತು ನನ್ನ ಸ್ನೇಹಿತನ ವಿರುದ್ಧ ಮನು ಶರ್ಮಾ ಅಸಭ್ಯ ಮತ್ತು ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾನೆ. ಅಲ್ಲದೆ, ಹಾಸ್ಟೆಲ್‌ನಲ್ಲಿ ತಂಗಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರನ್ನು ನಿಂದಿಸಿದ್ದಾನೆ ಮತ್ತು ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.

Accused
ಬೆಂಗಳೂರು: ಹಫ್ತಾ ಕೊಡದಿದ್ದಕ್ಕೆ ಬ್ಯಾಟ್‌ನಿಂದ ಹಲ್ಲೆ; ಮಕ್ಕಳ ಎದುರೇ ನರಳಿ ಪ್ರಾಣಬಿಟ್ಟ Muslim ವ್ಯಕ್ತಿ, Video

ವಾಗ್ವಾದದ ಸಮಯದಲ್ಲಿ ಆರೋಪಿ ನನ್ನ ಮತ್ತು ನನ್ನ ಸ್ನೇಹಿತನ ಮೇಲೆ ದೈಹಿಕವಾಗಿ ಹಲ್ಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಮನು ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೊಳಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com