ಚುನಾವಣೋತ್ತರ ಸಮೀಕ್ಷೆ ಎಫೆಕ್ಟ್‌: ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಬಂಪರ್, 5.33 ಲಕ್ಷ ಕೋಟಿ ರೂ. ಲಾಭ

ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ದೇಶಿಯ ಹಣಕಾಸು ಮಾರುಕಟ್ಟೆ ವಹಿವಾಟಿನ ಮೇಲೂ ಭಾರಿ ಪ್ರಭಾವ ಬೀರಿದ್ದು, ಷೇರು ಮಾರುಕಟ್ಟೆಯಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ದೇಶಿಯ ಹಣಕಾಸು ಮಾರುಕಟ್ಟೆ ವಹಿವಾಟಿನ ಮೇಲೂ ಭಾರಿ ಪ್ರಭಾವ ಬೀರಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಂಪರ್ ಲಾಭ ಗಳಿಸಿದ್ದಾರೆ.
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕೇಂದ್ರ ಮತ್ತೆ ಎನ್‌ಡಿಎ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದು, ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತಕ್ಕೆ ಕಾರಣವಾಗಿದೆ. 
ಎಕ್ಸಿಟ್ ಪೋಲ್ ಫಲಿತಾಂಶದಿಂದಾಗಿ ಸೆನ್ಸೆಕ್ಸ್ 1422 ಪಾಯಿಂಟ್ ಏರಿಕೆ ಕಂಡಿದ್ದರೆ, ರೂಪಾಯಿ ಮೌಲ್ಯ ಸಹ 79 ಪೈಸೆ ಏರಿಕೆ ದಾಖಲಿಸಿದೆ. ಇದರಿಂದ ಹೂಡಿಕೆದಾರರಿಗೆ 5.33 ಲಕ್ಷ ಕೋಟಿ ರೂ. ಲಾಭ ಆಗಿದೆ.
ಸೆನ್ಸೆಕ್ಸ್‌ ಇಂದಿನ ವಹಿವಾಟನ್ನು 39,352.67 ಅಂಕಗಳ ಮಟ್ಟದಲ್ಲಿ ಅದ್ಭುತವಾಗಿ ಕೊನೆಗೊಳಿಸಿದರೆ, ನಿಫ್ಟಿ 11,828.25 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿತು.
ಇಂದು ಮುಂಬೈ ಷೇರು  ಮಾರುಕಟ್ಟೆಯಲ್ಲಿ ಒಟ್ಟು 2,813 ಕಂಪೆನಿಗಳ ಷೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 2,019 ಷೇರುಗಳು ಮುನ್ನಡೆ ಸಾಧಿಸಿದವು. 609 ಷೇರುಗಳು ಹಿನ್ನಡೆಗೆ ಗುರಿಯಾದವು. 185 ಷೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com