ಸೂಚ್ಯಂಕ 250 ಅಂಕ ಜಿಗಿತ; ಏರಿಕೆ ಕಂಡ ನಿಫ್ಟಿ 

ದೀಪಾವಳಿ ಕಳೆದು ಬುಧವಾರ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 250 ಅಂಕಗಳಷ್ಟು ಏರಿಕೆ ಕಂಡುಬಂದಿದ್ದು ವಿದೇಶಿ ನಿಧಿಗಳ ಒಳಹರಿವು ಹೆಚ್ಚಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ದೀಪಾವಳಿ ಕಳೆದು ಬುಧವಾರ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 250 ಅಂಕಗಳಷ್ಟು ಏರಿಕೆ ಕಂಡುಬಂದಿದ್ದು ವಿದೇಶಿ ನಿಧಿಗಳ ಒಳಹರಿವು ಹೆಚ್ಚಾಗಿದೆ. ಹೂಡಿಕೆದಾರರ ಮೇಲೆ ತೆರಿಗೆ ಕೂಡ ಸರಳವಾಗಿರುವುದು ಇದಕ್ಕೆ ಕಾರಣವಾಗಿದೆ. 

40 ಸಾವಿರದವರೆಗೆ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಏರಿಕೆ ಕಂಡುಬಂದ ನಂತರ 30 ಷೇರುಗಳ ಸೂಚ್ಯಂಕ ಇಂದು ಬೆಳಗ್ಗೆ ವಹಿವಾಟು ಆರಂಭವಾದಾಗ 128.48 ಅಂಕಗಳಷ್ಟು ಏರಿಕೆಯಾಗಿ 39 ಸಾವಿರದ 960.32 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 38.85 ಅಂಕಗಳಷ್ಟು ಏರಿಕೆಯಾಗಿ 11 ಸಾವಿರದ 823ರಲ್ಲಿ ವಹಿವಾಟು ನಡೆಸಿತು.


ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್ ಟೆಲ್, ಎಲ್ ಅಂಡ್ ಟಿ, ಇನ್ಫೊಸಿಸ್, ಐಟಿಸಿ, ವೇದಾಂತ, ಹೆಚ್ ಡಿಎಫ್ ಸಿ ಬ್ಯಾಂಕು, ಬಜಾಜ್ ಆಟೊ, ಕೊಟಾಕ್ ಬ್ಯಾಂಕ್ ಮತ್ತು ಸನ್ ಫಾರ್ಮಾ ಕಂಪೆನಿಗಳ ಷೇರುಗಳ ಸೂಚ್ಯಂಕ ಶೇಕಡಾ 2ರಷ್ಟು ಹೆಚ್ಚಾದವು.


ಇನ್ನೊಂದೆಡೆ ಟಾಟಾ ಮೋಟಾರ್ಸ್, ಯಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕು ಮತ್ತು ಟಿಸಿಎಸ್ ಕಂಪೆನಿಗಳ ಷೇರುಗಳ ವಹಿವಾಟು ಶೇಕಡಾ 3ರಷ್ಟು ಕುಸಿತ ಕಂಡುಬಂತು.

ಇತ್ತೀಚಿನ ವರದಿಯಂತೆ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ 155 ಅಂಕ ಏರಿಕೆ ಕಂಡು 39 ಸಾವಿರದ 986ರಲ್ಲಿ ವಹಿವಾಟು ನಡೆಸಿದರೆ ನಿಫ್ಟಿ, 42 ಅಂಕ ಏರಿಕೆಯಾಗಿ 11,823ರಲ್ಲಿ ವಹಿವಾಟು ನಡೆಸುತ್ತಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com