ದಿವಾಳಿತನದ ಪ್ರಕ್ರಿಯೆಗಳ ಕುರಿತು ಆರ್ ಬಿಐ ಆದೇಶ ಅದರ ಅಧಿಕಾರ ವ್ಯಾಪ್ತಿಗೆ ಮೀರಿದ್ದು: ಸುಪ್ರೀಂ ಕೋರ್ಟ್

ದಿನಕ್ಕೆ 2 ಸಾವಿರ ಕೋಟಿ ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ ದಿವಾಳಿತನದ ಪ್ರಕ್ರಿಯೆಗಳ ಆದೇಶ ಹೊರಡಿಸಬೇಕೆಂಬ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸುತ್ತೋಲೆ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ದಿನಕ್ಕೆ 2 ಸಾವಿರ ಕೋಟಿ ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ  ದಿವಾಳಿತನದ ಪ್ರಕ್ರಿಯೆಗಳ ಆದೇಶ ಹೊರಡಿಸಬೇಕೆಂಬ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸುತ್ತೋಲೆ ಕಾನೂನು ಮತ್ತು ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಅದನ್ನು ತಳ್ಳಿ ಹಾಕಿದೆ.
ಇದರಿಂದ ಮಾರುಕಟ್ಟೆಯಲ್ಲಿನ ನಿಯಂತ್ರಣ ವಲಯಕ್ಕೆ ನಿರಾಳತೆ ಸಿಕ್ಕಂತಾಗಿದೆ. ಆರ್ ಬಿಐ ಸುತ್ತೋಲೆ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಕೈಗಾರಿಕೆ, ವಿದ್ಯುತ್, ರಸಗೊಬ್ಬರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ರೊಹಿಂಟನ್ ಫಾಲಿ ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠ, ಆರ್ ಬಿಐಯ ಸುತ್ತೋಲೆ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಘೋಷಿಸಿದ್ದಾರೆ. ಆರ್ ಬಿಐಯ ಸುತ್ತೋಲೆಯನ್ನು ಪ್ರಶ್ನಿಸಿ ಕಳೆದ ವರ್ಷ ಫೆಬ್ರವರಿ 12ರಂದು ಈ ವಲಯಗಳ ಮುಖ್ಯಸ್ಥರು ಕೋರ್ಟ್ ಮೊರೆ ಹೋಗಿದ್ದರು.
ಉದ್ಯಮ ವಲಯದಲ್ಲಿ ಸುಮಾರು 2.2 ಲಕ್ಷ ಕೋಟಿ ಸಾಲ ಬ್ಯಾಂಕಿಗೆ ಹಿಂತಿರುಗಿಸದೆ ಬಾಕಿಯಾಗಿದ್ದ ಬಗ್ಗೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಪೂರ್ವ-ದಿವಾಳಿತನ ಮತ್ತು ದಿವಾಳಿತನ ಸಂಹಿತೆ (IBC) ಹಂತದಲ್ಲಿ ವಾಣಿಜ್ಯ ಸಂಸ್ಥೆಯೊಂದು ದಿನಕ್ಕೆ 2 ಸಾವಿರ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ ಅವಧಿ ಮುಗಿದ ಒಂದು ದಿನದ ನಂತರವೂ ಕೂಡ ಬಡ್ಡಿ ಪಾವತಿಸದಿದ್ದರೆ ಅವುಗಳನ್ನು ವಸೂಲಿ ಮಾಡಲು ಆರ್ ಬಿಐ ಕ್ರಮ ತೆಗೆದುಕೊಳ್ಳಬಹುದೆಂದು ಸುತ್ತೋಲೆಯಲ್ಲಿ ಆದೇಶ ಹೊರಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com