ಜೆಟ್ ಏರ್ ವೇಸ್ ಸರ್ಕಾರದ ಸ್ವಾಧೀನಕ್ಕೆ ಒತ್ತಾಯಿಸಿ ಮೋದಿಗೆ ಬ್ಯಾಂಕುಗಳ ಒಕ್ಕೂಟ ಪತ್ರ

22 ಸಾವಿರ ಉದ್ಯೋಗಿಗಳ ಭವಿಷ್ಯ ಕಾಪಾಡುವ ನಿಟ್ಟಿನಲ್ಲಿ ಜೆಟ್ ಏರ್ ವೇಸ್ ನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ಯಾಂಕು ಒಕ್ಕೂಟಗಳು ಆಗ್ರಹಿಸಿವೆ.
ಜೆಟ್ ಏರ್ ವೇಸ್
ಜೆಟ್ ಏರ್ ವೇಸ್

ನವದೆಹಲಿ: 22 ಸಾವಿರ ಉದ್ಯೋಗಿಗಳ ಭವಿಷ್ಯ ಕಾಪಾಡುವ ನಿಟ್ಟಿನಲ್ಲಿ ಜೆಟ್ ಏರ್ ವೇಸ್ ನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ಯಾಂಕು ಒಕ್ಕೂಟಗಳು ಆಗ್ರಹಿಸಿವೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಏರ್ ಲೈನ್ಸ್ ಗೆ ಬ್ಯಾಂಕುಗಳು ಸಾಲ ನೀಡದಿರುವಂತೆ  ಸರ್ಕಾರ ಖಾತ್ರಿಪಡಿಸಿಕೊಳ್ಳಬೇಕು ಎಂದು ಅಖಿಲ ಭಾರತೀಯ ಬ್ಯಾಂಕು ನೌಕರರ ಅಸೋಸಿಯೇಷನ್ ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

 400 ಕೋಟಿ ಮಧ್ಯಂತರ ಹಣಕ್ಕೆ ಸಾಲದಾತರು ನಿರಾಕರಿಸಿದ ನಂತರ 25 ವರ್ಷಗಳ ಕಾಲ ಸೇವೆ ಒದಗಿಸಿದ್ದ ಜೆಟ್ ಏರ್ ವೇಸ್ ಬುಧವಾರದಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆಯ

ಜೆಟ್ ಏರ್ ಲೈನ್ಸ್ ಸ್ವಾಧೀನಕ್ಕೆ ಹೂಡಿಕೆದಾರರಿಗೆ ಬ್ಯಾಂಕುಗಳು ಬಿಡ್ ಕರೆದಿವೆ ಎಂಬುದು ತಿಳಿಯಿತು. ಒಂದು ವೇಳೆ ಆ ರೀತಿ ನಡೆದರೆ, ಜೆಟ್ ಏರ್ ವೇಸ್ ನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದರಿಂದ 22 ಸಾವಿರ ನೌಕರರ ಉದ್ಯೋಗ ಸುರಕ್ಷಿತವಾಗಿರುತ್ತದೆ ಎಂದು ಅಸೋಸಿಯೇಷನ್ ಹೇಳಿದೆ.
ಇದೇ ವೇಳೆ ಬ್ಯಾಂಕುಗಳು ಜೆಟ್ ಏರ್ ವೇಸ್ ಕಂಪನಿಗೆ  ಹೆಚ್ಚಿನ ರೀತಿಯ ಸಾಲ ನೀಡುವಂತೆ ಒತ್ತಾಯಿಸುವಂತಿಲ್ಲ ಎಂದು ಒಕ್ಕೂಟ ತಿಳಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com