ಬಾಕಿ ವೇತನಕ್ಕಾಗಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಜೆಟ್ ಏರ್ ವೇಸ್ ಸಿಬ್ಬಂದಿ

ತೀವ್ರ ಆರ್ಥಿಕ ಆರ್ಥಿಕ ಸಂಕಷ್ಟದಿಂದ ತಾತ್ಕಾಲಿಕವಾಗಿ ಹಾರಾಟ ಸ್ಥಗಿತಗೊಳಿಸಿದ ಜೆಟ್ ಏರ್ ವೇಸ್ ನ ಸಿಬ್ಬಂದಿ, ತಮ್ಮ ಬಾಕಿ ವೇತನ ಬಿಡುಗಡೆ....
ಜೆಟ್ ಏರ್ ವೇಸ್ ಸಿಬ್ಬಂದಿ
ಜೆಟ್ ಏರ್ ವೇಸ್ ಸಿಬ್ಬಂದಿ
ನವದೆಹಲಿ: ತೀವ್ರ ಆರ್ಥಿಕ ಆರ್ಥಿಕ ಸಂಕಷ್ಟದಿಂದ ತಾತ್ಕಾಲಿಕವಾಗಿ ಹಾರಾಟ ಸ್ಥಗಿತಗೊಳಿಸಿದ ಜೆಟ್ ಏರ್ ವೇಸ್ ನ ಸಿಬ್ಬಂದಿ, ತಮ್ಮ ಬಾಕಿ ವೇತನ ಬಿಡುಗಡೆ ಸಂಬಂಧ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಜೆಟ್ ಏರ್ ವೇಸ್ 23 ಸಾವಿರ ಉದ್ಯೋಗಿಗಳನ್ನು ಹೊಂದಿದ್ದು, ಪೈಲಟ್ ಸೇರಿದಂತೆ ಬಹುತೇಕ ಎಲ್ಲಾ ಸಿಬ್ಬಂದಿಯ ಮೂರು ನಾಲ್ಕು ತಿಂಗಳ ವೇತನ ಬಾಕಿ ಉಳಿಸಿಕೊಂಡಿದೆ.
ಜೆಟ್ ಏರ್ ವೇಸ್ ಹಾರಾಟ ಸ್ಥಗಿತಗೊಳಿಸಿದ ನಂತರ ಸಿಬ್ಬಂದಿ ಭವಿಷ್ಯ ಅತಂತ್ರವಾಗಿದ್ದು, ಆತಂಕಗೊಂಡ ಇಬ್ಬರು ಉದ್ಯೋಗಿಗಳು ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
'ಇದನ್ನು ಒಂದು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಎಲ್ಲಾ ನೌಕರರ ಬಾಕಿ ವೇತನ ಬಿಡುಗಡೆ ಮಾಡುವಂತೆ ಜೆಟ್ ಏರ್ ವೇಸ್ ಆಡಳಿತ ಮಂಡಳಿಗೆ ಸೂಚಿಸಬೇಕು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗೆ ತುರ್ತು ಹಣಕಾಸಿನ ನೆರವು ಘೋಷಿಸಬೇಕು' ಎಂದು ಮನವಿ ಮಾಡಿದ್ದಾರೆ.
ಜೆಟ್ ಏರ್ ವೇಸ್ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಪೈಲಟ್‌ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರಿಗೆ ಕೆಲ ತಿಂಗಳಿಂದ ವೇತನ ಸಿಕ್ಕಿಲ್ಲ. ಭವಿಷ್ಯದ ಕುರಿತು ಯೋಚನೆ ಮಾಡುತ್ತಿದ್ದ ಈ ಉದ್ಯೋಗಿಗಳು, ಸರ್ಕಾರ ಆರ್ಥಿಕ ನೆರವಿನಿಂದ ಹಾರಾಟ ಮುಂದುವರಿಯುತ್ತದೆ ಎಂಬ ನಂಬಿಕೆಯಲ್ಲೇ ಇದ್ದರು. ಆದರೆ, ಎರಡು ದಿನಗಳ ಹಿಂದೆ ಏಕಾಏಕಿ ಸಂಪೂರ್ಣ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಎಲ್ಲರಲ್ಲೂ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com