ಹೊಸ ವಿನ್ಯಾಸದ 20 ರು. ಮುಖಬೆಲೆಯ ನೋಟು ಬಿಡುಗಡೆಗೆ ಆರ್ ಬಿಐ ಸಿದ್ದತೆ

ತಾನು ಸಧ್ಯದಲ್ಲಿಯೇ ಮಹಾತ್ಮಾ ಗಾಂಧಿ ಸರಣಿಯ 20 ರೂ. ಮುಖಬೆಲೆಯ ಹೊಸ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಘೋಷಿಸಿದೆ.

Published: 27th April 2019 12:00 PM  |   Last Updated: 27th April 2019 12:19 PM   |  A+A-


RBI to issue new Rs 20 denomination banknotes

ಹೊಸ ವಿನ್ಯಾಸದ 20 ರು. ನೋಟು ಬಿಡುಗಡೆಗೆ ಆರ್ಬಿಐ ಸಿದ್ದತೆ

Posted By : RHN RHN
Source : ANI
ನವದೆಹಲಿ: ತಾನು ಸಧ್ಯದಲ್ಲಿಯೇ ಮಹಾತ್ಮಾ ಗಾಂಧಿ ಸರಣಿಯ  20 ರೂ. ಮುಖಬೆಲೆಯ ಹೊಸ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಘೋಷಿಸಿದೆ.

"ರೂ 20 ನೋಟಿನ ಬಣ್ಣ ಹಸಿರು ಮಿಶ್ರಿತ ಹಳದಿಯಾಗಿರಲಿದ್ದು ನೋಟಿನ ಹಿಂಬಾಗದಲ್ಲಿ ಎಲ್ಲೋರಾ ಗುಹೆಗಳ ಚಿತ್ರವಿರಲಿದೆ. ಇದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಚಿತ್ರಿಸುತ್ತದೆ" ಎಂದು ಆರ್ಬಿಐ ಹೇಳಿದೆ.

ಇನ್ನು ಈ ಹೊಸ ನೋಟು ಚಲಾವಣೆಗೆ ಬಂದ ನಂತರ ಸಹ ಹಳೆಯ 20 ರು. ನೋಟುಗಳು ಹಾಗೆಯೇ ಚಲಾವಣೆಯಲ್ಲಿರಲಿದ್ದು ಇದಕ್ಕೆ ಯಾವ ಕಾನೂನಿನ ಅಡ್ಡಿ ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ಹೊಸ ನೋಟಿನಲ್ಲಿ ಜ್ಯಾಮಿತಿಯ ವಿನ್ಯಾಸಗಳನ್ನು ಚಿತ್ರಿಸಲಾಗಿದ್ದು ನೋಟಿನ ಎರಡೂ ಭಾಗಗಳಲ್ಲಿ ಬೇರೆ ಬೇಈ ಮಾದರಿಯ ಚಿತ್ತಾರವಿರಲಿದೆ .ಹೊಸ ನೋಟು 63 ಎಂಎಂ x 129 ಎಂಎಂ  ಅಳತೆ ಹೊಂದಿರಲಿದೆ ಎಂದು ಹೇಳಿಕೆ ತಿಳಿಸಿದೆ. 

ಇದು ಮಧ್ಯದಲ್ಲಿ ಮಹಾತ್ಮ ಗಾಂಧಿಯ ಭಾವಚಿತ್ರವನ್ನು ಹೊಂದಿ ಸೂಕ್ಷ್ಮ ಅಕ್ಷರಗಳಲ್ಲಿ 'ಆರ್ಬಿಐ', 'ಭಾರತ್', 'ಇಂಡಿಯಾ' ಮತ್ತು '20 ' ಎಂದು ಬರೆಯಲಾಗಿದೆ. ಆರ್ಬಿಐ ಲಾಂಛನದೊಂದಿಗೆ ಗವರ್ನರ್ ಸಹಿ, ಸಹ ನೋಟಿನಲ್ಲಿ ಇರಲಿದೆ. ಗಾಂಧಿ ಭಾವಚಿತ್ರದ  ಬಲಭಾಗದಲ್ಲಿ - ಅಶೋಕ ಸ್ಥಂಭ, ಮತ್ತು ಎಲೆಕ್ಟ್ರಾಟೈಪ್ ನಲ್ಲಿ 20 ಎಂದು ಮುದ್ರಿಸಲಾಗಿದೆ.. 
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp