
ಆರ್‌ಬಿಐ ಕಚೇರಿ
ಮುಂಬೈ: ಕೇಂದ್ರ ಸರ್ಕಾರಕ್ಕೆ 1.76 ಲಕ್ಷ ಕೋಟಿ ಮೊತ್ತವನ್ನು ವರ್ಗಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಮ್ಮತಿಸಿದೆ.
ಆರ್‌ಬಿಐ ತನ್ನ ಬಳಿ ಇರುವ ಹೆಚ್ಚುವರಿ ಬಂಡವಾಳದಲ್ಲಿನ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಿದೆ. ಆರ್‌ಬಿಐ ಮಾಜಿ ಗವರ್ನರ್ ಬಿಮಲ್ ಜಲನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಮಾಡಿದ್ದ ಶಿಫಾರಸುಗಳನ್ನು ಕೇಂದ್ರೀಯ ಬ್ಯಾಂಕ್ ನ ನಿರ್ದೇಶನ ಮಂಡಳಿಯು ಒಪ್ಪಿಕೊಂಡಿದೆ. ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
2018-19ನೇ ಹಣಕಾಸು ವರ್ಷಕ್ಕೆ 1,23,414 ಕೋಟಿ ಮೊತ್ತವನ್ನು ಹೆಚ್ಚುವರಿ ನಿಧಿ ರೂಪದಲ್ಲಿ ಮತ್ತು 52,637 ಕೋಟಿಯು ಬ್ಯಾಂಕ್ ನ ಪರಿಷ್ಕೃತ ನಿಧಿಯಲ್ಲಿನ ಹೆಚ್ಚುವರಿ ಮೊತ್ತದ ರೂಪದಲ್ಲಿ ಇರಲಿದೆ.