ಕಳೆದ ನವೆಂಬರ್‌ನಲ್ಲಿ ಒಟ್ಟು 1,03,492 ಕೋಟಿ ರೂ ಜಿಎಸ್‌ಟಿ ಆದಾಯ ಸಂಗ್ರಹ

2019 ರ ನವೆಂಬರ್‌ನಲ್ಲಿ ಒಟ್ಟು 1,03,492 ಕೋಟಿ ರೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವಾಗಿದೆ.

Published: 01st December 2019 03:28 PM  |   Last Updated: 01st December 2019 03:28 PM   |  A+A-


GST revenue crosses Rs 1 Lakh crore in Novermber

ಕಳೆದ ನವೆಂಬರ್‌ನಲ್ಲಿ ಒಟ್ಟು 1,03,492 ಕೋಟಿ ರೂ ಜಿಎಸ್‌ಟಿ ಆದಾಯ ಸಂಗ್ರಹ

Posted By : Srinivas Rao BV
Source : UNI

ನವದೆಹಲಿ: 2019 ರ ನವೆಂಬರ್‌ನಲ್ಲಿ ಒಟ್ಟು 1,03,492 ಕೋಟಿ ರೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವಾಗಿದ್ದು, ಇದರಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) 19,592 ಕೋಟಿ ರೂ, ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) 27,144 ಕೋಟಿ ರೂ, ಮತ್ತು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) 49,028 ಕೋಟಿ ರೂ ಸೇರಿದೆ. 

ಐಜಿಎಸ್‌ಟಿಯಡಿ ಆಮದು ಮೇಲೆ ಸಂಗ್ರಹಿಸಿದ 20,948 ಕೋಟಿ ರೂ ಪೈಕಿ, 7,727 ಕೋಟಿ ರೂ. ಹೆಚ್ಚುವರಿ ಕರ(ಆಮದಿನ ಮೇಲೆ ಸಂಗ್ರಹಿಸಿದ 869 ಕೋಟಿ ರೂ. ಸೇರಿದಂತೆ) ಸೇರಿದೆ.  2017 ರ  ಜುಲೈನಲ್ಲಿ ಜಿಎಸ್‌ಟಿ ಜಾರಿಗೊಳಿಸದಾಗಿನಿಂದ ಇದು ಎಂಟನೇ ಬಾರಿಗೆ ಮಾಸಿಕ ಸಂಗ್ರಹ ಒಂದು ಲಕ್ಷ ಕೋಟಿ ರೂ. ದಾಟಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp