ದೇಶದಲ್ಲಿ ಬೆಂಕಿಯ ಜ್ವಾಲೆ: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಒಟ್ಟಾರೆ 35,298 ಕೋಟಿ ರು. ಬಿಡುಗಡೆ ಮಾಡಿದ ಕೇಂದ್ರ!

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರವನ್ನು ಪಾವತಿಸುವಲ್ಲಿನ ವಿಳಂಬವನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಆದಾಯದ ನಷ್ಟವನ್ನು ಸರಿದೂಗಿಸಲು ಒಟ್ಟಾರೆ 35,298 ಕೋಟಿ ರೂಪಾಯಿಯನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ. 
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರವನ್ನು ಪಾವತಿಸುವಲ್ಲಿನ ವಿಳಂಬವನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಆದಾಯದ ನಷ್ಟವನ್ನು ಸರಿದೂಗಿಸಲು ಒಟ್ಟಾರೆ 35,298 ಕೋಟಿ ರೂಪಾಯಿಯನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ.

ಜುಲೈ 1, 2017ರಂದು ಜಿಎಸ್‌ಟಿ ಜಾರಿಗೆ ಬಂದಾಗ, ಆದಾಯದ ನಷ್ಟಕ್ಕೆ ಸರಿದೂಗಿಸುವುದಾಗಿ ರಾಜ್ಯಗಳು ಶಾಸನಗಳ ಮೂಲಕ ನೀಡಲಾಗುತ್ತಿತ್ತು. ಏಕೆಂದರೆ ವ್ಯಾಟ್ ನಂತಹ ತೆರಿಗೆಗಳನ್ನು ಹೊಸ ತೆರಿಗೆಯಲ್ಲಿ ಪಡೆಯಲಾಗುತ್ತದೆಯೇ ಹೊರತು ತೆರಿಗೆ ವಿಧಿಸುವ ಹಕ್ಕನ್ನು ಕಸಿದುಕೊಳ್ಳಲಾಗಿತ್ತು.

2016-17ರ ಮೂಲ ವರ್ಷದಲ್ಲಿ ಪರಿಹಾರ ಮೊತ್ತವನ್ನು ಆದಾಯದ ಮೇಲೆ ಶೇಕಡ 14ಕ್ಕೆ ನಿಗದಿಪಡಿಸಲಾಗಿದೆ.

ಕೇಂದ್ರ ಸರ್ಕಾರವು ಇಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟಾರೆ 35,298 ಕೋಟಿ ರೂ. ಜಿಎಸ್ಟಿ ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಟ್ವಿಟರ್ ಪೋಸ್ಟ್ ನಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com