ಹಿರಿಯ ನಾಗರಿಕರ ಪಿಂಚಣಿ ಯೋಜನೆ ಪಿಎಂವಿವಿವೈಗೆ ಆಧಾರ್ ಕಡ್ಡಾಯ: ಕೇಂದ್ರ

 ಹಿರಿಯ ನಾಗರಿಕರ ಪಿಂಚಣಿ ಯೋಜನೆಯಾದ ಪ್ರಧಾನ್ ಮಂತ್ರಿ ವಾಯ ವಂದನ ಯೋಜನೆಗೆ ಇನ್ನು ಮುಂದೆ ಆಧಾರ್ ಕಡ್ಡಾಯವಾಗಲಿದೆ. ಪಿಎಂವಿವಿವೈ ಯೋಜನೆಗೆ ಆಧಾರ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಹಿರಿಯ ನಾಗರಿಕರ ಪಿಂಚಣಿ ಯೋಜನೆಯಾದ ಪ್ರಧಾನ್ ಮಂತ್ರಿ ವಾಯ ವಂದನ ಯೋಜನೆಗೆ ಇನ್ನು ಮುಂದೆ ಆಧಾರ್ ಕಡ್ಡಾಯವಾಗಲಿದೆ. ಪಿಎಂವಿವಿವೈ ಯೋಜನೆಗೆ ಆಧಾರ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.

ವಾರ್ಷಿಕವಾಗಿ ಶೇಕಡಾ 8 ರಷ್ಟು ಬಡ್ಡಿ ನೀಡಲಾಗುವ ಈ ಯೋಜನೆಯನ್ನು ಜೀವ ವಿಮಾ ನಿಗಮದ ಮೂಲಕ ಜಾರಿಗೊಳಿಸಲಾಗಿದೆ.ಈ ಯೋಜನೆಯನ್ನು 2017-18 ಮತ್ತು 2018-19ರ ಕೇಂದ್ರ ಬಜೆಟ್‌ಗಳಲ್ಲಿ ಘೋಷಿಸಲಾಗಿದೆ.

"ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆಯಲು ಅರ್ಹರಾದ ವ್ಯಕ್ತಿಯು ಆಧಾರ್ ಸಂಖ್ಯೆ (ಅನನ್ಯ 12-ಅಂಕಿಯ ಬಯೋಮೆಟ್ರಿಕ್ ಗುರುತಿನ ಸಂಖ್ಯೆ) ಹೊಂದಿರುವ ಪುರಾವೆಗಳನ್ನು ಒದಗಿಸಬೇಕು ಇಲ್ಲವೇ ಆಧಾರ್ ದೃಢೀಕರಣಕ್ಕೆ ಒಳಪಡಬೇಕಾಗುವುದು" ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ಹೇಳಿದೆ.

ಡಿಸೆಂಬರ್ 23 ರ ಅಧಿಸೂಚನೆಯಂತೆ ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಲಾಭಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ 2016 ರ ಅಡಿಯಲ್ಲಿ ಈ ಯೋಜನೆ ಸೇರ್ಪಡೆ ಮಾಡಲಾಗಿದೆ.ಆಧಾರ್ ಸಂಖ್ಯೆಯನ್ನು ಹೊಂದಿರದ ಅಥವಾ ಇನ್ನೂ ಆಧಾರ್‌ಗೆ ಸೇರ್ಪಡೆಗೊಳ್ಳದ ಈ ಯೋಜನೆಯಡಿ ಲಾಭ ಪಡೆಯಲು ಬಯಸುವ ಯಾವುದೇ ವ್ಯಕ್ತಿ, "ಯೋಜನೆಗೆ ನೋಂದಾಯಿಸುವ ಮೊದಲು ಆಧಾರ್ ದಾಖಲಾತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ" ಎಂದು ಅದು ಹೇಳಿದೆ

ಕಳಪೆ ಬಯೋಮೆಟ್ರಿಕ್ಸ್‌ನಿಂದಾಗಿ ಆಧಾರ್ ದೃಢೀಕರಣ ವಿಫಲವಾದರೆ, ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯು ಅದರ ಅನುಷ್ಠಾನ ಸಂಸ್ಥೆಯ ಮೂಲಕ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಬಯೋಮೆಟ್ರಿಕ್ ಅಥವಾ ಆಧಾರ್ ಒನ್-ಟೈಮ್ ಪಾಸ್ವರ್ಡ್ ಅಥವಾ ಸಮಯ-ಆಧಾರಿತ ಒಟಿಪಿ ದೃಢೀಕರಣ ಸಾಧ್ಯವಾಗದಿದ್ದಲ್ಲಿ, ಭೌತಿಕ ಆಧಾರ್ ಪತ್ರದ ಆಧಾರದ ಮೇಲೆ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಹೊಂದಬಹುದು. ತ್ವರಿತ ಪ್ರತಿಕ್ರಿಯೆ (ಕ್ಯೂಆರ್) ಕೋಡ್ ಮೂಲಕ ದೃಢೀಕರಣ ಮಾಡಿಕೊಳ್ಳಬಹುದು. ಎಂದೂ ವಿವರಿಸಲಾಗಿದೆ.

2018-19ರ ಬಜೆಟ್‌ನಲ್ಲಿ ಪಿಎಂವಿವಿವೈ ಅಡಿಯಲ್ಲಿ ಹಿರಿಯ ನಾಗರಿಕರಿಗೆ 15 ಲಕ್ಷ ರೂ. ಗರಿಷ್ಠ ಮಿತಿಯನ್ನು ಒದಗಿಸಲಾಗಿದೆ.ಯೋಜನೆ  ಮಾರ್ಚ್ 2020 ರವರೆಗೆ ಚಂದಾದಾರಿಕೆಗೆ ಲಭ್ಯವಿದೆ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com