ಈರುಳ್ಳಿ ಬೆಲೆ ಗಗನಮುಖಿ: ಕೆ.ಜಿ.ಗೆ 150 ರೂ. ಆಮದು ಪ್ರಗತಿಯಲ್ಲಿ

ದೇಶಿಯ ಮಾರುಕಟೆಯಲ್ಲಿ ಲಭ್ಯತೆ ಹೆಚ್ಚಿಸಲು ಹಾಗೂ ಬೆಲೆ ನಿಯಂತ್ರಿಸಲು ಆಮದು ಈರುಳ್ಳಿ ಬರುತ್ತಿದ್ದರೂ ಕೂಡಾ  ಬೆಲೆ  ಮಾತ್ರ  ಗಗನ ಮುಖಿಯಾಗಿಯೇ ಸಾಗಿದ್ದು, ಕೆಜಿ ಈರುಳ್ಳಿ ಬೆಲೆ ಕೆಜಿಗೆ 150 ರೂಪಾಯಿ ಆಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶಿಯ ಮಾರುಕಟೆಯಲ್ಲಿ ಲಭ್ಯತೆ ಹೆಚ್ಚಿಸಲು ಹಾಗೂ ಬೆಲೆ ನಿಯಂತ್ರಿಸಲು ಆಮದು ಈರುಳ್ಳಿ ಬರುತ್ತಿದ್ದರೂ ಕೂಡಾ  ಬೆಲೆ  ಮಾತ್ರ  ಗಗನ ಮುಖಿಯಾಗಿಯೇ ಸಾಗಿದ್ದು, ಕೆಜಿ ಈರುಳ್ಳಿ ಬೆಲೆ ಕೆಜಿಗೆ 150 ರೂಪಾಯಿ ಆಗಿದೆ. 

ಗ್ರಾಹಕ ವ್ಯವಹಾರಗಳ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಕೊಲ್ಕತ್ತಾದಲ್ಲಿ ಕೆಜಿ ಈರುಳ್ಳಿ 120 ರೂ. ದೆಹಲಿ, ಮುಂಬೈಯಲ್ಲಿ 102 ಹಾಗೂ ಚೆನ್ನೈನಲ್ಲಿ 80 ರೂಪಾಯಿ ಆಗಿದೆ. 

ಆಮದು ಮಾಡಿದ ಈರುಳ್ಳಿ ಬರಲು ಪ್ರಾರಂಭಿಸಿದ್ದು, ಸುಮಾರು 1, 160 ಟನ್ ಈರುಳ್ಳಿ ಭಾರತ ತಲುಪಿಸಿದೆ. ಹೆಚ್ಚುವರಿಯಾಗಿ 10, 560 ಟನ್ ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಬರುವ ಸಾಧ್ಯತೆ ಇದೆ ಎಂದು  ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಕೆಂಪು ಮತ್ತು ಹಳದಿ ಈರುಳ್ಳಿಯನ್ನು ಟರ್ಕಿ, ಈಜಿಫ್ಟ್ ಮತ್ತು ಅಪ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಮುಂಬೈ ಬಂದರಿನಲ್ಲಿ ಸಾಗಣೆದಾರರು ಲ್ಯಾಂಡಿಂಗ್ ಆಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಈರುಳ್ಳಿ ಬೆಳೆ ಬೆಳೆಯುವ ರಾಜ್ಯಗಳಲ್ಲಿ ಹೆಚ್ಚಿಗೆ ಮಳೆ ಹಾಗೂ ವಿಳಂಬ ಮುಂಗಾರು ಕಾರಣದಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈರುಳ್ಳಿ ಇಳುವರಿ ಕುಂಠಿತಗೊಂಡಿದ್ದು, ಬೆಲೆ ಗಗನಮುಖಿಯಾಗಿದೆ. ಸರ್ಕಾರ ಈಗಾಗಲೇ ಈರುಳ್ಳಿ ರಪ್ತುನ್ನು ನಿಷೇಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com