ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ: ಇಂದಿನ ದರ ಹೀಗಿದೆ

ಶನಿವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಶನಿವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 17 ಪೈಸೆ ಹೆಚ್ಚಾಗಿ 70 ರೂಪಾಯಿ 72 ಪೈಸೆಯಾಗಿದೆ. ಡೀಸೆಲ್ ಬೆಲೆ 19 ಪೈಸೆ ಏರಿಕೆ ಕಂಡುಬಂದು 65 ರೂಪಾಯಿ 16 ಪೈಸೆಯಷ್ಟಾಗಿದೆ.

ಮುಂಬೈಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 76 ರೂಪಾಯಿ 35 ಪೈಸೆ,ಡೀಸೆಲ್ ಗೆ 68 ರೂಪಾಯಿ 22 ಪೈಸೆಯಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ 73 ರೂಪಾಯಿ5 ಪೈಸೆ, ಡೀಸೆಲ್ 67 ರೂಪಾಯಿ 30 ಪೈಸೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಿಂದ ತೈಲಗಳ ಬೆಲೆ ಹೆಚ್ಚಳವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com