ಶೇ.12-18 ತೆರಿಗೆ ಸ್ಲ್ಯಾಬ್ ವಿಲೀನ, ಶೀಘ್ರದಲ್ಲೇ ಜಿಎಸ್ ಟಿ ಎರಡೇ ಶ್ರೇಣಿಯ ತೆರಿಗೆ ವ್ಯವಸ್ಥೆ: ಅರುಣ್ ಜೇಟ್ಲಿ ವಿಶ್ವಾಸ

ಜಿಎಸ್ ಟಿ ತೆರಿಗೆ ವ್ಯವಸ್ಥೆ ಜಾರಿಯಾಗಿ ಇಂದಿಗೆ 2 ವರ್ಷ. ಈ ಹಿನ್ನೆಲೆಯಲ್ಲಿ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಫೇಸ್ ಬುಕ್ ನಲ್ಲಿ ಕಿರು ಲೇಖನ ಪ್ರಕಟಿಸಿದ್ದಾರೆ.
ಶೇ.12-18 ತೆರಿಗೆ ಸ್ಲ್ಯಾಬ್ ವಿಲೀನ, ಶೀಘ್ರದಲ್ಲೇ ಜಿಎಸ್ ಟಿ ಎರಡೇ ಶ್ರೇಣಿಯ ತೆರಿಗೆ ವ್ಯವಸ್ಥೆ- ಅರುಣ್ ಜೇಟ್ಲಿ
ಶೇ.12-18 ತೆರಿಗೆ ಸ್ಲ್ಯಾಬ್ ವಿಲೀನ, ಶೀಘ್ರದಲ್ಲೇ ಜಿಎಸ್ ಟಿ ಎರಡೇ ಶ್ರೇಣಿಯ ತೆರಿಗೆ ವ್ಯವಸ್ಥೆ- ಅರುಣ್ ಜೇಟ್ಲಿ
ನವದೆಹಲಿ: ಜಿಎಸ್ ಟಿ ತೆರಿಗೆ ವ್ಯವಸ್ಥೆ ಜಾರಿಯಾಗಿ ಇಂದಿಗೆ 2 ವರ್ಷ. ಈ ಹಿನ್ನೆಲೆಯಲ್ಲಿ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಫೇಸ್ ಬುಕ್ ನಲ್ಲಿ ಕಿರು ಲೇಖನ ಪ್ರಕಟಿಸಿದ್ದಾರೆ. 
ಜಿಎಸ್ ಟಿ ಜಾರಿಯಾಗಿ 2 ವರ್ಷಗಳು ಪೂರ್ಣಗೊಂಡಿದ್ದು, ಆದಾಯ ಹೆಚ್ಚಾದಂತೆಲ್ಲಾ ಶೇ.12-18 ತೆರಿಗೆ ಸ್ಲ್ಯಾಬ್ ವಿಲೀನಗೊಳ್ಳುತ್ತದೆ. ಈ ಮೂಲಕ ಜಿಎಸ್ ಟಿ ಎರಡೇ ಶ್ರೇಣಿಯ ತೆರಿಗೆ ಇರುವ ವ್ಯವಸ್ಥೆಯಾಗಲಿದೆ ಎಂದು ಹೇಳಿದ್ದಾರೆ. 
ಜಿಎಸ್ ಟಿ ಜಾರಿಯಾದ ನಂತರ ನಷ್ಟ ಎದುರಿಸುತ್ತಿದ್ದ ರಾಜ್ಯಗಳ ಪೈಕಿ 20 ರಾಜ್ಯಗಳು ಈಗ ಶೇ.14 ಕ್ಕಿಂತ ಹೆಚ್ಚು ಆದಾಯ ಗಳಿಸುತ್ತಿದ್ದು, ಕೇಂದ್ರ ಸರ್ಕಾರ ನೀಡುತ್ತಿದ್ದ ಪರಿಹಾರದ ಮೇಲೆ ಅವಲಂಬಿತವಾಗಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
ಗ್ರಾಹಕ ಬಳಕೆಯ ಬಹುತೇಕ ವಸ್ತುಗಳನ್ನು ಶೇ.18-12-5  ರ ತೆರಿಗೆ ಸ್ಲ್ಯಾಬ್ ಅಡಿಯಲ್ಲಿ ತರಲಾಗಿದೆ. ಮುಂದಿನ ದಿನಗಳಲ್ಲಿ ಶೇ. 12-18 ತೆರಿಗೆ ಸ್ಲ್ಯಾಬ್ ನ್ನು ವಿಲೀನಗೊಳಿಸಿದರೆ ಜಿಎಸ್ ಟಿ 2 ಶ್ರೇಣಿ ತೆರಿಗೆ ವ್ಯವಸ್ಥೆಯಾಗಲಿದೆ. ಕಳೆದ 2 ವರ್ಷಗಳಿಂದ ಇಳಿಕೆ ಮಾಡಲಾಗಿರುವ ತೆರಿಗೆಯೊಂದಾಗಿ ಸುಮಾರು 90,000 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com