ಆರ್ಥಿಕ ಬಿಕ್ಕಟ್ಟು: ಬ್ಯಾಂಕ್ ನ 18,000 ಉದ್ಯೋಗಗಳಿಗೆ ಕತ್ತರಿ!

ಆರ್ಥಿಕ ಬಿಕ್ಕಟ್ಟು ಹಾಗೂ ಜಾಗತಿಕ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ಡಾಯ್ಚ ಬ್ಯಾಂಕ್ (ಜರ್ಮನ್ ಬ್ಯಾಂಕ್)18,000 ಉದ್ಯೋಗಗಳಿಗೆ ಕತ್ತರಿ ಹಾಕಿದೆ.

Published: 09th July 2019 12:00 PM  |   Last Updated: 09th July 2019 09:20 AM   |  A+A-


18,000 job cuts begin at Deutsche Bank

ಆರ್ಥಿಕ ಬಿಕ್ಕಟ್ಟು: ಬ್ಯಾಂಕ್ ನ 18,000 ಉದ್ಯೋಗಗಳಿಗೆ ಕತ್ತರಿ!

Posted By : SBV SBV
Source : PTI
ಲಂಡನ್: ಆರ್ಥಿಕ ಬಿಕ್ಕಟ್ಟು ಹಾಗೂ ಜಾಗತಿಕ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ಡಾಯ್ಚ ಬ್ಯಾಂಕ್ (ಜರ್ಮನ್ ಬ್ಯಾಂಕ್)18,000 ಉದ್ಯೋಗಗಳಿಗೆ ಕತ್ತರಿ ಹಾಕಿದೆ. 

ಜಾಗತಿಕ ಮಟ್ಟದಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಡಾಯ್ಚ ಬ್ಯಾಂಕ್ ಜಗತ್ತಿನಾದ್ಯಂತ ತನ್ನ ಬ್ಯಾಂಕ್ ಶಾಖೆಗಳಲ್ಲಿ ಒಟ್ಟಾರೆ 18,000 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಹೇಳಿತ್ತು. ಈ ಬೆನ್ನಲ್ಲೇ  ಲಂಡನ್ ಹಾಗೂ ನ್ಯೂಯಾರ್ಕ್ ಗಳಲ್ಲಿ ಸಾವಿರಾರು ಉದ್ಯೋಗಳನ್ನು ಕಡಿಮೆ ಮಾಡಿದೆ. 

ಬ್ರಿಟನ್ ನಲ್ಲಿ 8,000 ಜನರಿಗೆ ಡಾಯ್ಚ ಬ್ಯಾಂಕ್ ನೌಕರಿ ನೀಡಿತ್ತು. ಲಂಡನ್ ನಲ್ಲಿ ಈ ಸಂಸ್ಥೆಯ 7,000 ಉದ್ಯೋಗಿಗಳಿದ್ದರು. ಈ ಎರಡೂ ಪ್ರದೇಶಗಳಲ್ಲಿ ಡಾಯ್ಚ ಬ್ಯಾಂಕ್ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದೆ. 

2008 ರ ಆರ್ಥಿಕ ಬಿಕ್ಕಟ್ಟಿನಿಂದ ಸುಧಾರಿಸಿಕೊಳ್ಳುವುದಕ್ಕೆ ಡಾಯ್ಚ ಬ್ಯಾಂಕ್ ಗೆ ಇನ್ನೂ ಸಾಧ್ಯವಾಗಿಲ್ಲ. ಏರುತ್ತಿರುವ ಬೆಲೆ ಹಾಗೂ ಕುಸಿಯುತ್ತಿರುವ ತನ್ನ ಷೇರುಗಳ ಮೌಲ್ಯ/ ಬೆಲೆಯಿಂದಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಡಾಯ್ಚ ಬೃಹತ್ ಪ್ರಮಾಣದಲ್ಲಿ ತನ್ನ ಬ್ಯಾಂಕ್ ನ ಉದ್ಯೋಗಗಳನ್ನು ಕಡಿತಗೊಳಿಸಲು ಮುಂದಾಗಿದೆ. 
Stay up to date on all the latest ವಾಣಿಜ್ಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp