ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು

ಭಾರತದಿಂದ ವಸ್ತುಪ್ರದರ್ಶನಕ್ಕಾಗಿ ಅಥವಾ ಇತರ ಉತ್ಪನ್ನ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಒಯ್ಯುವ ವಸ್ತುಗಳ ಮೇಲೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಇಂಟಿಗ್ರೇಟೆಡ್ ಜಿಎಸ್‌ಟಿ)

Published: 22nd July 2019 12:00 PM  |   Last Updated: 22nd July 2019 09:00 AM   |  A+A-


No GST invoice required if goods taken abroad for exhibition are brought back in 6 months

ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು

Posted By : SBV SBV
Source : Online Desk
ನವದೆಹಲಿ: ಭಾರತದಿಂದ ವಸ್ತುಪ್ರದರ್ಶನಕ್ಕಾಗಿ ಅಥವಾ ಇತರ ಉತ್ಪನ್ನ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಒಯ್ಯುವ ವಸ್ತುಗಳ ಮೇಲೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಇಂಟಿಗ್ರೇಟೆಡ್ ಜಿಎಸ್‌ಟಿ) ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.

ವಸ್ತುಪ್ರದರ್ಶನ ಅಥವಾ ಉತ್ಪನ್ನ ಪ್ರೋತ್ಸಾಹಕ್ಕೆಂದು ಸರಕುಗಳನ್ನು ವಿದೇಶಗಳಿಗೆ ಕೊಂಡೊಯ್ಯುವುದರಿಂದ ಅದನ್ನು ಜಿಎಸ್‌ಟಿ ಅಡಿ ಮಾರಾಟ ಎಂದು ಪರಿಗಣಿಸಲಾಗುವುದು, ಆ ಹಂತದಲ್ಲಿ ಅದು ಮಾರಾಟಕ್ಕಿಟ್ಟ ವಸ್ತುವಾಗಿರುತ್ತದೆಯೇ ಹೊರತು ಅದರ ಖರೀದಿಯಾಗಿರುವುದಿಲ್ಲ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಅಬಕಾರಿ ಸುಂಕ ಮಂಡಳಿ (ಸಿಬಿಐಸಿ) ನೀಡಿರುವ ಹೇಳಿಕೆ ತಿಳಿಸಿದೆ. 

ರತ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ಪ್ರದರ್ಶನಕ್ಕಾಗಿ ವಿದೇಶಗಳಿಗೆ ಕೊಂಡೊಯ್ದು ವಾಪಸ್ ಆಮದಾಗುವಾಗ ಐಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕೈಗಾರಿಕೆಗಳು ಮತ್ತು ವ್ಯಾಪಾರ ಸಂಘಟನೆಗಳು ಹಣಕಾಸು ಸಚಿವಾಲಯವನ್ನು ಕೋರಿದ್ದವು.
Stay up to date on all the latest ವಾಣಿಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp