ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!

ಆರ್ ಬಿ ಐ ಗೆ ಹೆಚ್ಚಿನ ಸ್ವಾಯತ್ತತೆಗೆ ಹೆಚ್ಚಿನ ಬೇಡಿಕೆ ಇಡುತ್ತಿದ್ದ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಧಿಕಾರಾವಧಿ ಕೊನೆಗೊಳ್ಳುವುದಕ್ಕೂ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!
ಅಧಿಕಾರಾವಧಿ ಕೊನೆಗೊಳ್ಳುವುದಕ್ಕೂ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!
ಮುಂಬೈ: ಆರ್ ಬಿ ಐ ಗೆ ಹೆಚ್ಚಿನ ಸ್ವಾಯತ್ತತೆಗೆ ಹೆಚ್ಚಿನ ಬೇಡಿಕೆ ಇಡುತ್ತಿದ್ದ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 
ವಿರಳ್ ಆಚಾರ್ಯ ತಮ್ಮ ಅಧಿಕಾರಾವಧಿ ಕೊನೆಗೊಳ್ಳುವುದಕ್ಕೂ 6 ತಿಂಗಳ ಮುನ್ನವೇ ಆರ್ ಬಿಐ ಡೆಪ್ಯುಟಿ ಗೌರ್ನರ್ ಹುದ್ದೆಯಿಂದ ಹೊರನಡೆದಿದ್ದಾರೆ. 
2017, ಜ.23 ರಂದು ಆರ್ ಬಿಐ ಗೆ ಸೇರಿದ್ದ ವಿರಳ್ ಆಚಾರ್ಯ, ಆರ್ಥಿಕ ಉದಾರೀಕರಣದ ನಂತರ ಆರ್ ಬಿಐ ನ ಅತಿ ಕಿರಿಯ ಡೆಪ್ಯುಟಿ ಗೌರ್ನರ್ ಎಂಬ ಹೆಗ್ಗಳಿಕೆ ಹೊಂದಿದ್ದರು. 
ವಿರಳ್ ಆಚಾರ್ಯ ಅವರ ರಾಜೀನಾಮೆಯ ಬಗ್ಗೆ ವರದಿ ಪ್ರಕಟಿಸಿರುವ ಎಕನಾಮಿಕ್ ಟೈಮ್ಸ್ ಈ ವಿಷಯವನ್ನು ಖಚಿತಪಡಿಸಿದ್ದು ವಿರಳ್ ಆಚಾರ್ಯ ನ್ಯೂಯಾರ್ಕ್ ವಿವಿಯಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದೆ. 
ಆರ್ ಬಿಐ ಗೌರ್ನರ್ ಆಗಿದ್ದ ಉರ್ಜಿತ್ ಪಟೇಲ್ ರಾಜೀನಾಮೆ ನಂತರ ವಿರಳ್ ಆಚಾರ್ಯಗೆ ಆರ್ ಬಿಐ ಅಹಿತಕರವಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. 
ಕಳೆದ ಎರಡು ವಿತ್ತೀಯ ನೀತಿ ಸಭೆಗಳಲ್ಲಿ ಆರ್ ಬಿಐ ನ ಹಾಲಿ ಗೌರ್ನರ್ ಗೂ ಡಾ. ಆಚಾರ್ಯಾಗೂ ಭಿನ್ನಾಭಿಪ್ರಾಯ ಮೂಡಿತ್ತು.  ಇತ್ತೀಚಿನ ವಿತ್ತೀಯ ನೀತಿ ಸಭೆಯಲ್ಲಿ ವಿತ್ತೀಯ ಕೊರತೆ ವಿಷಯವಾಗಿ ಗೌರ್ನರ್ ದಾಸ್ ಹಾಗೂ  ವಿರಳ್ ಆಚಾರ್ಯ ನಡುವೆ ತಿಕ್ಕಾಟ ಪ್ರಾರಂಭವಾಗಿತ್ತು. ಇದಕ್ಕೂ ಮುನ್ನ ಕಳೆದ ಅಕ್ಟೋಬರ್ ನಲ್ಲಿ ವಿರಳ್ ಆಚಾರ್ಯ ಆರ್ ಬಿಐ ನ ಸ್ವಾಯತ್ತತೆಯನ್ನು ಉಳಿಸುವ ಅಗತ್ಯತೆ ಕುರಿತು ಮಾತನಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com