ಗ್ರಾಹಕರ ಜೇಬಿಗೆ ಕತ್ತರಿ: ಅಡುಗೆ ಅನಿಲ ಸಿಲೆಂಡರ್ ಬೆಲೆಯಲ್ಲಿ ಹೆಚ್ಚಳ!

ಕೆಲ ತಿಂಗಳುಗಳಿಂದ ಇಳಿಕೆಯಾಗುತ್ತಿದ್ದ ಅಡುಗೆ ಅನಿಲದ ಬೆಲೆಈಗ ಮತ್ತೆ ಏರಿಕೆಯತ್ತ ಸಾಗಿದೆ. ಸಬ್ಸಿಡಿ ಸಹಿತ, ಸಬ್ಸಿಡಿ ರಹಿತ ಸಿಲೆಂಡರ್ ಗಳ ಬೆಲೆಯಲ್ಲಿ ಏರಿಕೆ ಕಂಡಿದೆ.
ಗ್ರಾಹಕರ ಜೇಬಿಗೆ ಕತ್ತರಿ: ಅಡುಗೆ ಅನಿಲ ಸಿಲೆಂಡರ್ ಬೆಲೆಯಲ್ಲಿ ಹೆಚ್ಚಳ!
ಗ್ರಾಹಕರ ಜೇಬಿಗೆ ಕತ್ತರಿ: ಅಡುಗೆ ಅನಿಲ ಸಿಲೆಂಡರ್ ಬೆಲೆಯಲ್ಲಿ ಹೆಚ್ಚಳ!
ನವದೆಹಲಿ: ಕೆಲ ತಿಂಗಳುಗಳಿಂದ ಇಳಿಕೆಯಾಗುತ್ತಿದ್ದ ಅಡುಗೆ ಅನಿಲದ ಬೆಲೆಈಗ ಮತ್ತೆ ಏರಿಕೆಯತ್ತ ಸಾಗಿದೆ. ಸಬ್ಸಿಡಿ ಸಹಿತ, ಸಬ್ಸಿಡಿ ರಹಿತ ಸಿಲೆಂಡರ್ ಗಳ ಬೆಲೆಯಲ್ಲಿ ಏರಿಕೆ ಕಂಡಿದೆ.
ಸಬ್ಸಿಡಿ ಸಹಿತ ಸಿಲೆಂಡರ್ ನ ಬೆಲೆಯಲಿ  2.8ರೂ ಏರಿಕಾದರೆ ಸಬ್ಸಿಡಿ ರಹಿತ ಸಿಲೆಂಡರ್ ಗಳ ಬೆಲೆ 42.50 ರೂ ಏರಿಕೆಯಾಗಿದೆ. ಬೆಲೆ ಏರಿಕೆ ಬಳಿಕ ರಾಷ್ಟ್ರ ರಾಜಧಾನಿ ದೆಹ;ಲಿಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ  14.2 ಕೆ.ಜಿ ತೂಕದ ಅಡುಗೆ ಅನಿಲ ಸಿಲೆಂಡರ್ ಒಂದರ ಬೆಲೆ 495.61 ರೂ.(ಸಬ್ಸಿಡಿ ಸಹಿತ) ಹಾಗೂ  701.50 ರೂ (ಸಬ್ಸಿಡಿ ರಹಿತ) ಆಗಿರಲಿದೆ.
ಈ ಹೊಸ ದರ ಮಾರ್ಚ್ 1 ಎಂದರೆ ಶುಕ್ರವಾರದಿಂದಲೇ ಜಾರಿಗೆ ಬರಲಿದೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರಗಳು ಏರಿಕೆ ಕಂಡ ಪರಿಣಾಮ ದೇಶದಲ್ಲಿ ಸಹ ತೆರಿಗೆ ಮೇಲೆ ಪ್ರಭಾವ ಬೀರಿದೆ. ಆ ಕಾರಣಕ್ಕೆ ಸಿಲೆಂಡರ್ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳಿದೆ.
ಕಳೆದ ವರ್ಷ ಜೂನ್ ನಿಂದ ಡಿಸೆಂಬರ್ ಅವಧಿಯಲ್ಲಿ ಸತತ ಆರು ತಿಂಗಳು ಕಾಲ ದರ ಏರಿಕೆಯಾಗಿದ್ದು ಕಳೆದ ತಿಂಗಳಿನಲ್ಲಿ ಸಿಲೆಂಡರ್ ದರ ಕಡಿಮೆಯಾದಾಗ ಗ್ರಾಹಕರು ಸಂತಸದಿಂದ ನಿಟ್ಟುಸಿರು ಬಿಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com