ಫೋರ್ಬ್ಸ್ ಪಟ್ಟಿ: ಅಮೆಜಾನ್ ಸಂಸ್ಥಾಪಕ ಬೆಜೊಸ್‌ ನಂ 1 ಶ್ರೀಮಂತ, ಮುಖೇಶ್ ಅಂಬಾನಿಗೆ 13ನೇ ಸ್ಥಾನ

ಪ್ರಸಿದ್ಧ ಫೋರ್ಬ್ಸ್ ನಿಯತಕಾಲಿಕವು ವಿಶ್ವದ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದ್ದು ಭಾರತದ ಉದ್ಯಮಿ, ರಿಲಯನ್ಸ್ ಸಮೂಹದ ಒಡೆಯ ಮುಖೇಶ್ ಅಂಬಾನಿ ಆರು ಸ್ಥಾನ ಮೇಲೇರಿ 13ನೇ ಸ್ಥಾನ ಪಡೆದಿದ್ದಾರೆ.
ಬೆಜೊಸ್‌ , ಅಂಬಾನಿ
ಬೆಜೊಸ್‌ , ಅಂಬಾನಿ
ನ್ಯೂಯಾರ್ಕ್/ನವದೆಹಲಿ: ಪ್ರಸಿದ್ಧ ಫೋರ್ಬ್ಸ್ ನಿಯತಕಾಲಿಕವು ವಿಶ್ವದ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದ್ದು ಭಾರತದ ಉದ್ಯಮಿ, ರಿಲಯನ್ಸ್ ಸಮೂಹದ ಒಡೆಯ ಮುಖೇಶ್ ಅಂಬಾನಿ ಆರು ಸ್ಥಾನ ಮೇಲೇರಿ 13ನೇ ಸ್ಥಾನ ಪಡೆದಿದ್ದಾರೆ. ಇ-ಕಾಮರ್ಸ್ ದೈತ್ಯ ಅಮೇಜಾನ್ ಸಂಸ್ಥೆಯ ಮುಖ್ಯಸ್ಥ ಜೆಫ್‌ ಬೆಜೊಸ್‌ ವಿಶ್ವದಲ್ಲೇ ನಂ.1 ಶ್ರೀಮಂತರಾಗಿ ಮುಂದುವರಿದಿದ್ದಾರೆ.
ಅಮೆಝಾನ್ ಸಂಸ್ಥಾಪಕ ಬೆಜೊಸ್‌ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ, ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಅವರಿಗಿಂತಲೂ ಇವರ ಆಸ್ತಿ ಮೌಲ್ಯ ಅಧಿಕವಾಗಿದೆ.ಇನ್ನು ಗೇಟ್ಸ್ ಹಾಗೂ ಬಫೆಟ್  ಆಸ್ತಿಯಲ್ಲಿ ಕಳೆದೊಂದು ವರ್ಷದಲ್ಲಿ 19 ಶತಕೋಟಿ ಅಮೆರಿಕನ್ ಡಾಲರ್ ನಷ್ಟು ಹೆಚ್ಚಳವಾಗಿದೆ.ಈಗ ಅದು 131 ಬಿಲಿಯನ್ ಯುಎಸ್  ಡಾಲರ್ ಗೇರಿದೆ ಎಂದು ಫೋರ್ಬ್ಸ್ ಹೇಳಿದೆ.
2018ರಲ್ಲಿ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದರೆ ಇದೀಗ 50 ಶತಕೋಟಿ  ಡಾಲರ್ ಮೌಲ್ಯದ ಸಂಪತ್ತಿನೊಡನೆ 13ನೇ ಸ್ಥಾನಕ್ಕೇರಿದ್ದಾರೆ."ಭಾರತದ ಅತ್ಯಂತ ಮೌಲ್ಯಯುತ ಕಂಪೆನಿಗಳ ಪೈಕಿ 60 ಶತಕೋಟಿ (ಆದಾಯ) ಹೊಂದಿರುವ ತೈಲ, ಅನಿಲ ದೈತ್ಯ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಅಂಬಾನಿಯನ್ನು ಈ ಎತ್ತರಕ್ಕೆ ಏರಿಸಿದೆ"ಫೋರ್ಬ್ಸ್ ಹೇಳಿದೆ.
ವಿಪ್ರೋ ಚೇರ್ಮನ್ ಅಜೀಮ್ ಪ್ರೇಮ್ ಜಿ 36.ನೇ ಸ್ಥಾನದಲ್ಲಿದ್ದರೆ ಎಚ್.ಸಿ.ಎಲ್. ಸಹ-ಸಂಸ್ಥಾಪಕ ಶಿವ ನಾದರ್ 82 ನೇ ಸ್ಥಾನ ಆರ್ಸೆಲರ್ ಮಿತ್ತಲ್ ಅಧ್ಯಕ್ಷ ಮತ್ತು ಸಿಇಒ ಲಕ್ಷ್ಮಿ ಮಿತ್ತಲ್ 91 ನೇ ಶ್ರೇಯಾಂಕದಲ್ಲಿದ್ದಾರೆ.
ಬಿರ್ಲಾ ಗ್ರೂಪ್ ಅಧ್ಯಕ್ಷ ಚೇರ್ಮರ್ ಕುಮಾರ್ ಬಿರ್ಲಾ (122), ಅದಾನಿ ಗ್ರೂಪ್ಸ್ ನ ಗೌತಮ್ ಅದಾನಿ (167) ಮತ್ತು ಭಾರ್ತಿ ಏರ್ಟೆಲ್ ನ ಸುನಿಲ್ ಮಿತ್ತಲ್ (244) ಪತಂಜಲಿ ಆಯುರ್ವೇದ ಸಂಸ್ಥೆಯ  ಆಚಾರ್ಯ ಬಾಲಕೃಷ್ಣ (365), ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ (617), ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ (962) ಮತ್ತು ಆರ್.ಕಾಂ ಚೇರ್ಮನ್ ರಿಲಯನ್ಸ್ ಅನಿಲ್ ಅಂಬಾನಿ (1349). ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com