ಕೇಂದ್ರದಿಂದ 20 ರು. ಹೊಸ ನಾಣ್ಯ: ಏನಿದರ ವಿಶೇಷತೆ, ಇಲ್ಲಿದೆ ಮಾಹಿತಿ

ದ್ವಾದಶಭುಜಾಕೃತಿ (12ಬಹುಭುಜಾಕೃತಿ) ಆಕಾರದ ಹೊಸ ರೂ 20ರ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಘೋಷಿಸಿದೆ. ಹೊಸ ನಾಣ್ಯದ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.

Published: 07th March 2019 12:00 PM  |   Last Updated: 07th March 2019 02:54 AM   |  A+A-


For representational purposes.

ಸಂಗ್ರಹ ಚಿತ್ರ

Posted By : RHN
Source : The New Indian Express
ನವದೆಹಲಿ: ದ್ವಾದಶಭುಜಾಕೃತಿ (12 ಬಹುಭುಜಾಕೃತಿ) ಆಕಾರದ  ಹೊಸ ರೂ 20ರ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ  ಹಣಕಾಸು ಸಚಿವಾಲಯ ಘೋಷಿಸಿದೆ. ಹೊಸ ನಾಣ್ಯದ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.

ನಾಣ್ಯದ ವ್ಯಾಸವು 27 ಮಿ.ಮೀ ಆಗಿರುತ್ತದೆ ಮತ್ತು ಅದು ರೂ 10 ನಾಣ್ಯದಂತೆ ಎರಡು ವಲಯಗಳನ್ನು ಹೊಂದಿರಲಿದೆ.ಣ್ಯದ ಹೊರ ಉಂಗುರವನ್ನು 65 ಶೇಕಡ ತಾಮ್ರ, 15 ಶೇಕಡಾ ಸತು ಮತ್ತು 20 ಶೇಕಡಾ ನಿಕ್ಕಲ್ ಬಳಸಿ ತಯಾರಿಸಲಾಗುತ್ತದೆ.ಒಳ ಉಂಗುರವನ್ನು ಅಥವಾ ನಾಣ್ಯದ ಕೇಂದ್ರಭಾಗದಲ್ಲಿ 75 ಶೇಕಡಾ ತಾಮ್ರ, 20 ಶೇಕಡಾ ಸತು ಮತ್ತು ಐದು ಶೇಕಡಾ ನಿಕ್ಕಲ್ ಬಳಕೆಯಾಗುತ್ತದೆ.
ರೂ 10 ನಾಣ್ಯಕ್ಕಿಂತ ಭಿನ್ನವಾಗಿರುವ , ಹೊಸ ರೂ 20 ನಾಣ್ಯವು ಯಾವುದೇ ಸರಣಿಯನ್ನು ಹೊಂದಿರುವುದಿಲ್ಲ. ಹಾಗೆಯೇ ಒಂದು ನಾಣ್ಯ 8.54 ಗ್ರಾಂ ತೂಕ ಹೊಂದಿರಲಿದೆ.

ನಾಣ್ಯದ ಮುಂಭಾಗದಲ್ಲಿ ನಾಲ್ಕು ಸಿಂಹಗಳ ಲಾಂಛನ,ಹಾಗೂ ಅಶೋಕನ ಸಾರಾನಾಥ ಶಾಸನ ವಾಕ್ಯ "ಸತ್ಯಮೇವ ಜಯತೆ" ಎಂದಿರಲಿದೆ. ಅಲ್ಲದೆ ಇದರ ಎಡಬಾಗದಲ್ಲಿ ಭಾರತ್'  ಎನ್ನುವ ಹಿಂದಿ ಭಾಷಾ ಪದವಿದ್ದರೆ ಬಲಭಾಗದಲ್ಲಿ ”ಇಂಡಿಯಾ’ ಎಂದು ಇಂಗ್ಲೀಷ್ ನಲ್ಲಿ ಬರೆದಿರುವುದನ್ನು ಕಾಣಬಹುದು.

ನಾಣ್ಯದ ಹಿಂಭಾಗದಲ್ಲಿ, ರೂಪಾಯಿ ಚಿಹ್ನೆಯುಕೆಳಗಿನ ಭಾಗದಲ್ಲಿ ಕರೆನ್ಸಿ ಮೌಲ್ಯ ಬರೆಯಲ್ಪಡಲಿದೆ.ಅಲ್ಲದೆ ರಾಷ್ಟ್ರದಲ್ಲಿನ ಕೃಷಿ ಪ್ರಾಬಲ್ಯವನ್ನು ಸಾರುವುದಕ್ಕಾಗಿ ಎಡಭಾಗದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಧಾನ್ಯಗಳ ಚಿತ್ರವಿರಲಿದೆ. ಇನ್ನು ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ 20 ರೂಪಾಯಿಗಳು ಎಂದು ಅಕ್ಷರಗಳಲ್ಲಿ ಕೆತ್ತಲಾಗಿರುತ್ತದೆ. ಅಲ್ಲದೆ ಇದರ ನಡುವೆ ನಾಣ್ಯ ಬಿಡುಗಡೆಯಾಗಿರುವ ವರ್ಷವನ್ನು ಕೆತ್ತಲಾಗಿದೆ.

2009 ರ ಮಾರ್ಚ್ ನಲ್ಲಿ ಮೊದಲ ಬಾರಿಗೆ 10 ರು. ನಾಣ್ಯವನ್ನು  ಬಿಡುಗಡೆ ಮಾಡಿದ 10 ವರ್ಷಗಳ ನಂತರ ಹೊಸ 20 ರು. ನಾಣ್ಯ ಬಿಡುಗಡೆಯಾಗುತ್ತಿದೆ.ಅಲ್ಲಿಂದೀಚೆಗೆ, ರೂ 10 ನಾಣ್ಯಗಳ 13 ಹೊಸ ಆವೃತ್ತಿಗಳು ಬಂದಿವೆ.

ಇದಲ್ಲದೆ ದೃಷ್ಟಿ ವಿಕಲ ಚೇತನರ ಚಲಾವಣೆಗೆ ಅನುಕೂಲವಾಗುವಂತಹ ವಿನ್ಯಾಸಗೊಳಿಸಲಾಗಿರುವ ಹೊಸ ಸರಣಿಯ ರೂ 1, ರೂ 2,ರೂ 5, ರೂ 10 ಹಾಗೂ 20 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಗುರುವಾರ  ಬಿಡುಗಡೆಗೊಳಿಸಿದ್ದಾರೆ.
Stay up to date on all the latest ವಾಣಿಜ್ಯ news
Poll
farmers-Protest

ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ಸಮಯದಲ್ಲಿನ ಹಿಂಸಾಚಾರವು ರೈತರ ಆಂದೋಲನದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp