ರಿಲಯನ್ಸ್ ಕಮ್ಯುನಿಕೇಷನ್ಸ್ ನಿಂದ 700 ಕೋಟಿ ರೂ. ಬಾಕಿ: ಕಂಪನಿ ಲಾ ಟ್ರಿಬ್ಯೂನಲ್ ಮೊರೆ ಹೋಗಲು ಬಿಎಸ್ಎನ್ಎಲ್ ತೀರ್ಮಾನ

ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್ ಕಾಂ) ಬಾಕಿ ಉಳಿಸಿಕೊಂಡಿರುವ ಸುಮಾರು 700 ಕೋಟಿ ರು. ಹಣ ಹಿಂತಿರುಗಿಸಲುಕೋರಿ ಬಿಎಸ್ಎನ್ಎಲ್....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್ಕಾಂ) ಬಾಕಿ ಉಳಿಸಿಕೊಂಡಿರುವ ಸುಮಾರು 700  ಕೋಟಿ ರು. ಹಣ ಹಿಂತಿರುಗಿಸಲುಕೋರಿ ಬಿಎಸ್ಎನ್ಎಲ್  ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ ಎಂದು ವರದಿಗಳು ತಿಳಿಸಿವೆ.
ಬಿಎಸ್ಎನ್ಎಲ್ ಈಗಾಗಲೇ ಆರ್ಕಾಂ ಸಲ್ಲಿಸಿದ 100 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ಪಾವತಿಸುವಿಕೆಯ ಮೇಲೆ ಉಪಕ್ರಮಗಳನ್ನು ಜಾರಿಗೆ ತಂದಿದೆ. ಬಿಎಸ್ಎನ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ ಅವರು ಜನವರಿ 4 ರಂದು ಆರ್ಕಾಂ ವಿರುದ್ಧ 700 ಕೋಟಿ ರೂ. ಹಿಂಪಡೆಯುವ ಕುರಿತ ಕಾನೂನು ಹೋರಾಟಕ್ಕೆ ತೀರ್ಮಾನಿಸಿದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ವರ್ಷದ ಪ್ರಾರಂಬದಲ್ಲಿ ಆರ್ಕಾಂ ನ್ಯಾಶನಲ್ ಕಂಪೆನಿ ಲಾ ಟ್ರಿಬ್ಯೂನಲ್ ಗೆ ಸಂಪರ್ಕಿಸಿ ತಾನು ಸ್ವಯಂಪ್ರೇರಿಯ್ತವಾಗಿ ದಿವಾಳಿತನ ಪ್ರಕ್ರಿಯೆಯನ್ನು ಜಾರಿಗೆ ತರುತ್ತೇನೆಂದು ಹೇಳಿದೆ. ಇದರಿಂದ ತಮ್ಮ ಸಂಸ್ಥೆಯ ಆಸ್ತಿಗಳನ್ನು ಹಣವಾಗಿ ಮಾರ್ಪಡಿಸಲು ಸಂಸ್ಥೆಗೆ ನೆರವಾಗಲಿದೆ.
ಇಷ್ಟೇ ಅಲ್ಲದೆ ಎಸ್ ಬಿಐ ನೇತೃತ್ವದ 37 ಸಾಲದಾತರಿರುವ ಕುರಿತು ನ್ಯಾಯಮಂಡಳಿಗೆ ಎರಿಕ್ಸನ್ ಸಂಸ್ಥೆಗೆ ನೀಡಬೇಕಾದ 260 ಕೋಟಿ ರೂ ನೀಡುವ ಕುರಿತು ನಿಯಮಾವಳಿ ನೀಡಬೇಕೆಂದು ಕೋರಿತ್ತು. ಆರ್ಕಾಂ ಅಧ್ಯಕ್ಶ ಅನಿಲ್ ಅಂಬಾನಿ ಇತ್ತೀಚೆಗೆ ಎರಿಕ್ಸನ್ ಗೆ 458 ಕೋಟಿ ರೂ ಪಾವತಿಸಿ ಸಂಭವನೀಯ ಜೈಲು ಶಿಕ್ಷೆಯಿಂದ ಪಾರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com