ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ! ಕೊನೆ ಕ್ಷಣದ ಟಿಕೆಟ್ ಬುಕ್ಕಿಂಗ್‍ಗೆ ಏರ್ ಇಂಡಿಯಾದಲ್ಲಿ ಭಾರೀ ರಿಯಾಯಿತಿ

ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಶುಭ ಸುದ್ದಿ ನೀಡಿದೆ, ಕಡೇ ಕ್ಷಣದ ಟಿಕೆಟ್ ಬುಕ್ಕಿಂಗ್ ಗಳ ಮೇಲೆ ಭಾರೀ ಪ್ರಮಾಣದ ರಿಯಾಯಿತಿ ಘೋಷಣೆ ಮೂಲಕ ಪ್ರಯಾಣಿಕರಿಗೆ ಸರ್ಕಾರಿ ಸ್ವಾಮ್ಯದ ವೈಮಾನಿಕ ಸಂಸ್ಥೆ ದೊಡ್ಡ ಕೊಡುಗೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಶುಭ ಸುದ್ದಿ ನೀಡಿದೆ, ಕಡೇ ಕ್ಷಣದ ಟಿಕೆಟ್ ಬುಕ್ಕಿಂಗ್ ಗಳ ಮೇಲೆ ಭಾರೀ ಪ್ರಮಾಣದ ರಿಯಾಯಿತಿ ಘೋಷಣೆ ಮೂಲಕ ಪ್ರಯಾಣಿಕರಿಗೆ ಸರ್ಕಾರಿ ಸ್ವಾಮ್ಯದ ವೈಮಾನಿಕ ಸಂಸ್ಥೆ ದೊಡ್ಡ ಕೊಡುಗೆ ನೀಡಿದೆ.
ಜೆಟ್ ಏರ್ವೇಸ್ ವಿಮಾನ ಸ್ಥಗಿತದಿಂಡಾಗಿ ವಾಯುಯಾನ ಪ್ರಯಾಣಿಕರ ದೊಡ್ಡ ಪರಿಣಾಮವಾಗಿದೆ, ಪ್ರಯಾಣಿಕರು ದುಬಾರಿ ಟಿಕೆಟ್ ಖರೀದಿಸಿ ಸಂಚಾರ ಮಾಡುವ ಸ್ಥಿತಿಯುಂಟಾಗಿದೆ.  ಆದರ್ ಈಗ ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರಿ ವೈಮಾನಿಕ ಸಂಸ್ಥೆ ಏರ್ ಇಂಡಿಯಾ ತಾನು  ಕೊನೆಯ ನಿಮಿಷದ ಟಿಕೆಟ್ ಗಳನ್ನು "ಭಾರಿ ರಿಯಾಯಿತಿ" ಯಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದಾಗಿ ಶುಕ್ರವಾರ ಪ್ರಕಟಣೆ ಹೊರಡಿಸಿದೆ.
ಇದಕ್ಕೆ ಮುನ್ನ  ಏರ್ಲೈನ್ ಅಧಿಕಾರಿಯೊಬ್ಬರು ಏರ್ ಇಂಡಿಯಾ ಕಡೆ ಕ್ಷಣದ ಟಿಕೆಟ್ ಬುಕ್ಕಿಂಗ್ ಮೇಲೆ ಗರಿಷ್ಟ 50 ಶೇಕಡಾ ರಿಯಾಯಿತಿ ನೀಡುತ್ತದೆ ಎಂದು ಹೇಳಿದ್ದಾರೆ.
ವಿಮಾನ ಪ್ರಯಾಣಕ್ಕೆ ಕೇವಲ ಮೂರು ಗ್ಂಟೆಗಳ ಮುನ್ನ ಬುಕ್ ಮಾಡಲಾಗುವ ಟಿಕೆಟ್ ಗಳಿಗೆ ಸಹ ಈ ದೊಡ್ಡ ಪ್ರಮಾಣದ ರಿಯಾಯಿತಿ ಅನ್ವಯವಾಗಲಿದೆ. ಏರ್ ಇಂಡಿಯಾದ ಪ್ರಧಾನ ಕಛೇರಿಯಲ್ಲಿ ಶುಕ್ರವಾರ ನಡೆದ ವಾಣಿಯ  ವಿಮರ್ಶಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಾಮಾನ್ಯವಾಗಿ, ಗ್ರಾಹಕರು ಸರಾಸರಿ ದರಕ್ಕಿಂತ ಕೊನೆಯ ನಿಮಿಷದ ಬುಕಿಂಗ್ಗಾಗಿ ಶೇಕಡ 40 ಅಥವಾ ಅದಕ್ಕೂ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.ಆದಾಗ್ಯೂ, ಜೆಟ್ ಏರ್ವೇಸ್ ನಹಾರಾಟ ಸ್ಥಗಿತದಿಂದ ಉಂತಾಗಿರುವ ಪ್ರತಿಕೂಲ ಪರಿಸ್ಥಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವುದು ಹೆಚ್ಚು ಉತ್ತಮವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈಗ ಕೊನೆಯ ನಿಮಿಷದ ಪ್ರವಾಸಿಗರು, ವಿಶೇಷವಾಗಿ ತುರ್ತು ಪ್ರಯಾಣ ಮಾಡುವವರು ಕಡಿಮೆ ದರಕ್ಕೆ ಟಿಕೆಟ್ ಪಡೆಯಬಹುದಾಗಿದೆ. ಪ್ರಯಾಣಿಕರು ಮೊಬೈಲ್ ಗಳಿಂದ, ಏಜೆಂಟ್ ಗಳ ಊಲಕ, ಆನ್ ಲೈನ್ ವೆಬ್ ಸೈಟ್ ಮೂಲಕ ಅಥವಾ ಟಿಕೆಟ್ ಕೌಂಟರ್ ಗಳಲ್ಲಿ ಈ ಬಗೆಯ ಕಡಿಮೆ ದರ ನೀಡಿ ಟಿಕೆಟ್ ಪಡೆದುಕೊಳ್ಳುವ ಅವಕಾಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com