70,000 ಬಿಎಸ್‌ಎನ್‌ಎಲ್ ಉದ್ಯೋಗಿಗಳಿಂದ ವಿಆರ್‌ಎಸ್‌ ಆಯ್ಕೆ

ಕಳೆದ ವಾರ ಪ್ರಾರಂಭಿಸಲಾದ ವಿಆರ್‌ಎಸ್ ಯೋಜನೆಗೆ ಉತ್ತಮ ಪ್ರತಿಕಿಯೆ ವ್ಯಕ್ತವಾಗಿದ್ದು ಬಿಎಸ್‌ಎನ್‌ಎಲ್‌ನ 70,000 ಉದ್ಯೋಗಿಗಳು ಈಗಾಗಲೇ ಯೋಜನೆಗೆ ತಮ್ಮ ಆಯ್ಕೆಯನ್ನು ಸೂಚಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಟೆಲಿಕಾಂ ನಿಗಮದ ಅಧ್ಯಕ್ಷ ಮತ್ತು ಎಂಡಿ ಪಿ ಕೆ ಪುರ್ವಾರ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಳೆದ ವಾರ ಪ್ರಾರಂಭಿಸಲಾದ ವಿಆರ್‌ಎಸ್ ಯೋಜನೆಗೆ ಉತ್ತಮ ಪ್ರತಿಕಿಯೆ ವ್ಯಕ್ತವಾಗಿದ್ದು ಬಿಎಸ್‌ಎನ್‌ಎಲ್‌ನ 70,000 ಉದ್ಯೋಗಿಗಳು ಈಗಾಗಲೇ ಯೋಜನೆಗೆ ತಮ್ಮ ಆಯ್ಕೆಯನ್ನು ಸೂಚಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಟೆಲಿಕಾಂ ನಿಗಮದ ಅಧ್ಯಕ್ಷ ಮತ್ತು ಎಂಡಿ ಪಿ ಕೆ ಪುರ್ವಾರ್ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಸುಮಾರು ಒಂದು ಲಕ್ಷ ಬಿಎಸ್ಎನ್ಎಲ್ ಉದ್ಯೋಗಿಗಳು ಸ್ವಯಂಪ್ರೇರಿತ ನಿವೃತ್ತಿ ಯೋಜನೆಗೆ (ವಿಆರ್‌ಎಸ್) ಅರ್ಹರಾಗಿದ್ದಾರೆ. ಸಂಸ್ಥೆಯಲ್ಲಿ ಒಟ್ಟಾರೆ 1.50 ಲಕ್ಷ.ಉದ್ಯೋಗಿಗಳಿದ್ದಾರೆ.

ಬಿಎಸ್‌ಎನ್‌ಎಲ್ ಒಟ್ತಾರೆ  77,000 ಉದ್ಯೋಗಿಗಳಿಗಳಿಗೆ ವಿಆರ್‌ಎಸ್ ನಿಡಬೇಕೆಂದು ಆಂತರಿಕ ಗುರಿಹಾಕಿಕೊಂಡಿದ್ದು ಇದಕ್ಕಾಗಿ ಜನವರಿ 31, 2020 ದಿನವನ್ನು ಅಂತಿಮ ದಿನಾಂಕವಾಗಿ ಮಾಡಲಾಗಿದೆ.

"ವಿಆರ್‌ಎಸ್  ಆಯ್ಕೆ ಮಾಡಿಕೊಂಡಿರುವ ನೌಕರರ ಸಂಖ್ಯೆ ಇಲ್ಲಿಯವರೆಗೆ ಸುಮಾರು 70,000 ತಲುಪಿದೆ" ಎಂದು ಪುರ್ವಾರ್ ಪಿಟಿಐಗೆ ತಿಳಿಸಿದ್ದಾರೆ. ತನ್ನ ಸಿಬ್ಬಂದಿ ಬಲವನ್ನು ತಗ್ಗಿಸಲು ಸಜ್ಜಾಗಿರುವ ಸಂಸ್ಥೆ . ವಿಆರ್‌ಎಸ್  
ಯೋಜನೆ ಪ್ರಾರಂಭವಾದ ನಂತರ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ದೂರವಾಣಿ ವಿನಿಮಯಕ್ಕೆ ಸಂಬಂಧಿಸಿದಂತೆ, ಸುಗಮ ಕಾರ್ಯಾಚರಣೆ ಮತ್ತು ವ್ಯವಹಾರ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತುರ್ತಾಗಿ ಕಾರ್ಯರೂಪಕ್ಕೆ ತರುವಂತೆ ಟೆಲಿಕಾಂ ಇಲಾಖೆಗೆ ಮನವಿ ಮಾಡಿದೆ.

ಕಳೆದ ವಾರ ರೂಪಿಸಲಾಗಿದ್ದ 'ಬಿಎಸ್‌ಎನ್‌ಎಲ್ ಸ್ವಯಂಪ್ರೇರಿತ ನಿವೃತ್ತಿ ಯೋಜನೆ - 2019' ಡಿಸೆಂಬರ್ 3 ರವರೆಗೆ ತೆರೆದಿರಲಿದೆ.  70,000-80,000 ಸಿಬ್ಬಂದಿ ಈ ಯೋಜನೆಯನ್ನು ಆರಿಸಿಕೊಂಡರೆ ಸುಮಾರು 7,000 ಕೋಟಿ ರೂ.ಗಳ ವೇತನ ಉಳಿತಾಯವಾಗಲಿದೆ.ಯೋಜನೆಯ ಪ್ರಕಾರ, ಬಿಎಸ್‌ಎನ್‌ಎಲ್‌ನ ಎಲ್ಲಾ ನಿಯಮಿತ ಮತ್ತು ಖಾಯಂ ನೌಕರರು ಇತರ ಸಂಸ್ಥೆಗಳಿಗೆ ವರ್ಗಾವಣೆ ಆಗುವವರು ಅಥವಾ ನಿಗಮದ ಹೊರಗೆ ವರ್ಗವಾಗುವವರು ಎಂಬ ಆಧಾರದ ಮೇಲೆ ಹಾಗೆಯೇ 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಯೋಜನೆಯಡಿಯಲ್ಲಿ ಸ್ವಯಂಪ್ರೇರಿತ ನಿವೃತ್ತಿ ಪಡೆಯಲು ಅರ್ಹರಾಗಿದ್ದಾರೆ.

ಯಾವುದೇ ಅರ್ಹ ಉದ್ಯೋಗಿಗೆ ಎಕ್ಸ್-ಗ್ರೇಟಿಯಾ ಮೊತ್ತವು ಪೂರ್ಣಗೊಂಡ ಪ್ರತಿ ಸೇವೆಯ ವರ್ಷಕ್ಕೆ 35 ದಿನಗಳ ವೇತನ ಮತ್ತು ಮೇಲ್ವಿಚಾರಣೆಯವರೆಗೆ ಉಳಿದಿರುವ ಪ್ರತಿ ವರ್ಷದ ಸೇವೆಯ 25 ದಿನಗಳ ವೇತನ ಪಡೆದುಕೊಳ್ಳಲಿದ್ದಾರೆ.ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್ಎಲ್) ಕೂಡ ತನ್ನ ಉದ್ಯೋಗಿಗಳಿಗಾಗಿ ವಿಆರ್‌ಎಸ್ ಯೋಜನೆ ಪ್ರಾರಂಭಿಸಿದೆ.. ಗುಜರಾತ್ ಮಾದರಿಯನ್ನು ಆಧರಿಸಿದ ಈ ಯೋಜನೆ 2019 ರ ಡಿಸೆಂಬರ್ 3 ರವರೆಗೆ ಉದ್ಯೋಗಿಗಳಿಗೆ ಮುಕ್ತವಾಗಿರುತ್ತದೆ.

ಮುಂಬೈ ಮತ್ತು ನವದೆಹಲಿಯಲ್ಲಿ ಸೇವೆಗಳನ್ನು ಒದಗಿಸುವ ಎಂಟಿಎನ್ಎಲ್ ಅನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ನೊಂದಿಗೆ ಸಂಯೋಜಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ಅನುಮೋದನೆ ನೀಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com