ಆದಾಯದ ಮಾರುಕಟ್ಟೆ ಪಾಲು ಹೆಚ್ಚಿಸಿಕೊಂಡ ಜಿಯೋ

ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ತನ್ನ ಆದಾಯದ ಮಾರುಕಟ್ಟೆ ಪಾಲನ್ನು(ರೆವೆನ್ಯೂ ಮಾರ್ಕೆಟ್ ಶೇರ್, RMS) ಬಲಪಡಿಸಿಕೊಂಡಿದ್ದು, ಈ ಅಂಕದಲ್ಲಿ...
ಜಿಯೋ
ಜಿಯೋ

ಬೆಂಗಳೂರು: ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ತನ್ನ ಆದಾಯದ ಮಾರುಕಟ್ಟೆ ಪಾಲನ್ನು(ರೆವೆನ್ಯೂ ಮಾರ್ಕೆಟ್ ಶೇರ್, RMS) ಬಲಪಡಿಸಿಕೊಂಡಿದ್ದು, ಈ ಅಂಕದಲ್ಲಿ ಮೂರನೇ ಸ್ಥಾನದಲ್ಲಿರುವ ವೊಡಾಫೋನ್-ಐಡಿಯಾ ತುಲನೆಯಲ್ಲಿ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿದೆ.

ಪ್ರಮುಖ ಮಹಾನಗರಗಳು ಹಾಗೂ ಗ್ರಾಮೀಣ ಮಾರುಕಟ್ಟೆಯಾದ್ಯಂತ ಸದೃಢ ಬೆಳವಣಿಗೆ ಜಿಯೋದ ಈ ಸಾಧನೆಗೆ ನೆರವಾಗಿದ್ದು, ವೊಡಾಫೋನ್ ಐಡಿಯಾ ಬಹುತೇಕ ವೃತ್ತಗಳಲ್ಲಿ ತನ್ನ ನೆಲೆ ಕಳೆದುಕೊಳ್ಳುವುದನ್ನು ಮುಂದುವರೆಸಿದೆ.

ಸೆಪ್ಟೆಂಬರ್ ತ್ರೈಮಾಸಿಕದ ಹೊಂದಿಸಲಾದ ಒಟ್ಟು ಆದಾಯದಲ್ಲಿ (ಎಜಿಆರ್) 60 ಬೇಸಿಸ್ ಪಾಯಿಂಟುಗಳ (ಬಿಪಿಎಸ್) ಸದೃಢ ಕ್ರಮಾನುಗತ ಹೆಚ್ಚಳವನ್ನು ವರದಿಮಾಡಿದ ಜಿಯೋ ಆದಾಯದ ಮಾರುಕಟ್ಟೆ ಪಾಲು (ಆರ್ ಎಂ ಎಸ್) ಶೇ.29ರಷ್ಟು ತಲುಪಿದೆ.

ಹಿಂದಿನ ತ್ರೈಮಾಸಿಕದ ಹೋಲಿಕೆಯಲ್ಲಿ 40 ಬಿಪಿಎಸ್ ಇಳಿಕೆ ಕಂಡ ಭಾರ್ತಿ ಏರ್ ಟೆಲ್ ನ ಆರ್ ಎಂ ಎಸ್ (ಟಾಟಾ ಟೆಲಿಸರ್ವಿಸಸ್ ಸೇರಿ) ಶೇಕಡಾ 51.7ರಷ್ಟು ತಲುಪಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವೊಡಾಫೋನ್-ಐಡಿಯಾದ ಆರ್ ಎಂ ಎಸ್ ಕೂಡ 30 ಬೇಸಿಸ್ ಪಾಯಿಂಟುಗಳ (ಬಿಪಿಎಸ್) ಕ್ರಮಾನುಗತ ಇಳಿಕೆಯೊಂದಿಗೆ ಶೇ.15.6ರಷ್ಟು ತಲುಪಿದ್ದು, ಅದು ಮುಂಚೂಣಿ ಮಾರುಕಟ್ಟೆಗಳೂ ಸೇರಿದಂತೆ 22ರಲ್ಲಿ 20 ವೃತ್ತಗಳಲ್ಲಿ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದ್ದು ಇದಕ್ಕೆ ಕಾರಣವಾಗಿದೆ ಎಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಂಗ್ರಹಿಸಿದ ಆರ್ಥಿಕ ದತ್ತಾಂಶದಿಂದ ತಿಳಿದುಬಂದಿದೆ.

ಒಟ್ಟು ಆದಾಯದ ಆಧಾರದ ಮೇಲೆ ವೊಡಾಫೋನ್-ಐಡಿಯಾ ತುಲನೆಯಲ್ಲಿ (ಅವರು ತಮ್ಮ ಮೊಬಿಲಿಟಿ ವಹಿವಾಟನ್ನು ಕ್ರೋಢೀಕರಿಸಿದ ನಂತರವೂ) ಜಿಯೋ ಆರ್ ಎಂ ಎಸ್ ಮುನ್ನಡೆ ಎರಡನೇ ಆರ್ಥಿಕ ತ್ರೈಮಾಸಿಕದಲ್ಲಿ 640 ಬಿಪಿಎಸ್ ನಷ್ಟಿದೆ. ಜೂನ್ ತ್ರೈಮಾಸಿಕದಲ್ಲಿ, ಜಿಯೋ ಹಾಗೂ ವೊಡಾ-ಐಡಿಯಾಗಳ ಆರ್ ಎಂ ಎಸ್ ಅನುಕ್ರಮವಾಗಿ ಶೇ. 24.5 ಹಾಗೂ 19.5ರಷ್ಟು ಆಗಿತ್ತು ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com