ಕೇಂದ್ರದಿಂದ ರಫ್ತು, ಗೃಹ ನಿರ್ಮಾಣ ಕ್ಷೇತ್ರಗಳಿಗೆ ಭರ್ಜರಿ ಘೋಷಣೆ: ಯೋಜನೆಗಳ ವಿವರ ಹೀಗಿದೆ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೆ.14 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ತಮ್ಮ ಸಚಿವಾಲಯ ಕ್ರೆಡಿಟ್ ಔಟ್ ಫ್ಲೋ (ಸಾಲ ಕೊಡುವ ಪ್ರಕ್ರಿಯೆ) ಸುಧಾರಣೆ, ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವುದಕ್ಕೆ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ. 
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಆರ್ ಒಡಿಟಿಇಪಿ ಯೋಜನೆಯನ್ನು ಘೋಷಿಸಿದ್ದು, ರಫ್ತುದಾರರಿಗೆ ಈ ಯೋಜನೆಯಿಂದ ಲಾಭ ದೊರೆಯಲಿದೆ. 

ರಫ್ತು ಪ್ರೋತ್ಸಾಹಕ ಯೋಜನೆ ಇದಾಗಿದ್ದು, 50,000 ಕೋಟಿ ರೂಪಾಯಿ ಮೊತ್ತದ್ದಾಗಿದೆ. ದೇಶದ ವಾಣಿಜ್ಯ ರಫ್ತು ಪ್ರಮಾಣದಲ್ಲಿ ಕುಸಿತ ಕಂಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ರಫ್ತು ಮಾಡುವವರಿಗೆ ಸಹಕಾರಿಯಾಗುವ ಯೋಜನೆಯನ್ನು ಘೋಷಿಸಿದ್ದಾರೆ.

ಸೆ.14 ರಂದು ಸುದ್ದಿಗೋಷ್ಠಿಯಲ್ಲಿ ಇಲಾಖೆಗೆ ಸಂಬಂಧಿಸಿದ ಹಲವು ಕ್ರಮಗಳನ್ನು ಘೋಷಿಸಿರುವ ನಿರ್ಮಲಾ ಸೀತಾರಾಮನ್ ಜಿಎಸ್ ಟಿಯ ಇನ್ಪುಟ್ ತೆರಿಗೆ ಕ್ರೆಡಿಟ್ (ಐಟಿಸಿ) ನಲ್ಲಿ ಸಂಪೂರ್ಣ ಸ್ವಯಂಚಾಲಿತ ಎಲೆಕ್ಟ್ರಾನಿಕ್ ಮರುಪಾವತಿ ವ್ಯವಸ್ಥೆ ತಿಂಗಳಾಂತ್ಯಕ್ಕೆ ಜಾರಿಗೊಳ್ಳಲಿದೆ ಎಂದು ಹೇಳಿದ್ದಾರೆ. 

ಆರ್ ಒ ಡಿಟಿಇಪಿ ಈಗಿರುವ ಪ್ರೋತ್ಸಾಹ ಯೋಜನೆಗಳ ಬದಲಿಗೆ ಜಾರಿಗೆ ಬರಲಿದ್ದು, ಈಗಿರುವ ಎಲ್ಲಾ ಯೋಜನೆಗಳಿಗಿಂತಲೂ ಹೆಚ್ಚಿನ ಪ್ರೋತ್ಸಾಹ ಸಿಗುವಂತೆ ಮಾಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಬಡ್ಡಿ ದರ ಕಡಿತನ್ನು ಗ್ರಾಹಕರಿಗೆ ತಲುಪಿಸಲು ಬ್ಯಾಂಕ್ ಗಳಿಂದ ಕ್ರಮ ಕೈಗೊಳ್ಳಲಾಗಿದೆ,
ತಮ್ಮ ಸಚಿವಾಲಯ ಕ್ರೆಡಿಟ್ ಔಟ್ ಫ್ಲೋ (ಸಾಲ ಕೊಡುವ ಪ್ರಕ್ರಿಯೆ) ಸುಧಾರಣೆ, ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವುದಕ್ಕೆ ಕ್ರಮ ಕೈಗೊಂಡಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ. 

ಆರ್ಥಿಕತೆಗೆ ಸಂಬಂಧಿಸಿದಂತೆ ಆಗಸ್ಟ್ ನಲ್ಲಿಯೂ ನಿರ್ಮಲಾ ಸೀತಾರಾಮನ್ ಒಂದಷ್ಟು ಕ್ರಮಗಳನ್ನು ಘೋಷಿಸಿದ್ದರು. ನಿರ್ದಿಷ್ಟ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಮುಂದಿನ ಘೋಷಣೆಯಲ್ಲಿ ತಿಳಿಸುವುದಾಗಿ ಹೇಳಿದ್ದರು. 

ವಿತ್ತ ಸಚಿವರ ಸುದ್ದಿಗೋಷ್ಠಿಯ ಪ್ರಮುಖಾಂಶಗಳು 

  1. ಹಣದುಬ್ಬರ ನಿಯಂತ್ರಣದಲ್ಲಿದೆ ಹಾಗೂ ಕೈಗಾರಿಕಾ ಉತ್ಪಾದನೆ ಸುಧಾರಣೆಯ ಸೂಚಗಳು ಸ್ಪಷ್ಟವಾಗಿವೆ.
  2. ಎಫ್ ಪಿಐ ಹರಿವಿನಲ್ಲೂ ಸುಧಾರಣೆ ಸ್ಪಷ್ಟವಾಗಿದೆ. 
  3. ಹೂಡಿಕೆ ದರ ಏರಿಕೆಯಾಗುತ್ತಿದೆ. 
  4. ರಫ್ತು ಮಾಡುವುದಕ್ಕೆ ಸಹಾಯ ಮಾಡುವ ಬ್ಯಾಂಕ್ ಗಳಿಗೆ ಹೆಚ್ಚಿನ ಇನ್ಶ್ಯೂರೆನ್ಸ್ 
  5. ರಫ್ತು ಏರಿಕೆಗಾಗಿ ಭಾರತದಲ್ಲಿ ದುಬೈ ಶಾಪಿಂಗ್ ಫೆಸ್ಟಿವಲ್ ರೀತಿಯಲ್ಲಿ ವಾರ್ಷಿಕ ಮೆಗಾ ಶಾಪಿಂಗ್ ಫೆಸ್ಟಿವಲ್ ನ್ನು ಆಯೋಜಿಸಲಿದೆ. 
  6. ಆದ್ಯತಾ ವಲಯಗಳಲ್ಲಿ ರಫ್ತು ಮಾಡುವುದಕ್ಕೆ  36,000-68,000 ಕೋಟಿ ರೂಪಾಯಿ ಸಾಲ ಲಭ್ಯ 
  7. ಎನ್ ಪಿಎ ಯೇತರ ಹಾಗೂ ಎನ್ ಸಿಎಲ್ ಟಿ ವ್ಯಾಪ್ತಿಗೆ ಒಳಪಡದ, ಸ್ಥಗಿತಗೊಂಡಿರುವ ಗೃಹ ನಿರ್ಮಾಣ ಯೋಜನೆಗಳಿಗೆ ಹಣ ನೀಡುವುದಕ್ಕೆ ವಿಶೇಷ ಗವಾಕ್ಷಿ ಮೂಲಕ 10,000 ಕೋಟಿ ರೂಪಾಯಿ
  8.  
  9. ವಸತಿ ಕಟ್ಟಡಕ್ಕೆ ಮುಂಗಡವಾಗಿ ಪಾವತಿ ಮಾಡುವ ಮೊತ್ತಕ್ಕೆ ಬಡ್ಡಿ ದರ ಇಳಿಕೆ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com