ಕಾರ್ಪೊರೇಟ್ ತೆರಿಗೆ ಕಡಿತ ಬಳಿಕ ಚಿನ್ನಾಭರಣ, ಆಟೋಮೊಬೈಲ್, ಹೋಟೆಲ್ ಕೊಠಡಿ ಮೇಲಿನ ಜಿಎಸ್‍ಟಿ ದರ ಇಳಿಕೆ

ಕಾರ್ಪೊರೇಟ್ ತೆರಿಗೆ ಕಡಿತ ಬಳಿಕ ಚಿನ್ನಾಭರಣ, ಆಟೋಮೊಬೈಲ್ ಮತ್ತು ಹೋಟೆಲ್ ರೂಂಗಳ ಮೇಲಿನ ತೆರಿಗೆ ದರ ಇಳಿಸಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಮಂಡಳಿ ಘೋಷಿಸಿದೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ಪಣಜಿ: ಕಾರ್ಪೊರೇಟ್ ತೆರಿಗೆ ಕಡಿತ ಬಳಿಕ ಚಿನ್ನಾಭರಣ, ಆಟೋಮೊಬೈಲ್ ಮತ್ತು ಹೋಟೆಲ್ ರೂಂಗಳ ಮೇಲಿನ ತೆರಿಗೆ ದರ ಇಳಿಸಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಮಂಡಳಿ ಘೋಷಿಸಿದೆ.

37ನೇ ಜಿಎಸ್ ಟಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಸಾವಿರದ ಒಂದು ರೂಪಾಯಿಯಿಂದ ಏಳು ಸಾವಿರದ ಐದು ನೂರು ರೂಪಾಯಿಗಳವರೆಗಿನ ದರ ಪಟ್ಟಿಯ ಹೋಟೆಲ್ ಕೊಠಡಿಗಳ ಮೇಲಿನ ಜಿಎಸ್‍ಟಿ ಅನ್ನು ಶೇ. 12ಕ್ಕೆ ಇಳಿಸಲಾಗಿದೆ ಎಂದರು. ಪ್ರಸ್ತುತ  ಈ ದರ ಶೇ. 18ರಷ್ಟಿದೆ.

ಈ ಬದಲಾವಣೆಯಿಂದಾಗಿ ಒಂದು ಸಾವಿರ ರೂ ಒಳಗಿನ ದರವಿರುವ ಕೊಠಡಿಗಳ ಮೇಲೆ ಯಾವುದೇ ಜಿಎಸ್‍ಟಿ ಇರುವುದಿಲ್ಲ. 1001 ರೂ. ದ 7500 ರೂ.ವರೆಗಿನ ದರದ ಹೋಟೆಲ್ ಕೋಣೆಗಳಿಗೆ ಶೇ. 12ರಷ್ಟು ಮತ್ತು 7,501 ರೂ. ಮೇಲ್ಪಟ್ಟ ದರಗಳ ಕೊಠಡಿಗಳಿಗೆ ಶೇ. 18ರಷ್ಟು ಸೇವಾ ತೆರಿಗೆ ಇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com