ಪಿಎಂಸಿ ಬ್ಯಾಂಕ್ ಮೇಲೆ ಆರ್ ಬಿಐ ವಿಧಿಸಿದ ನಿರ್ಬಂಧಗಳ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳು

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧಗಳನ್ನು ವಿಧಿಸಿದ್ದು, ಆ ನಿರ್ಬಂಧಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ವಿಷಯಗಳು ಈ ಕೆಳಗಿನಂತಿವೆ...
ಪಿಎಂಸಿ ಬ್ಯಾಂಕ್
ಪಿಎಂಸಿ ಬ್ಯಾಂಕ್

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧಗಳನ್ನು ವಿಧಿಸಿದ್ದು, ಆ ನಿರ್ಬಂಧಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ವಿಷಯಗಳು ಈ ಕೆಳಗಿನಂತಿವೆ...

1. ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಆರ್ ಬಿಐ ಕಾರ್ಯಾಚರಣೆಯ ನಿರ್ಬಂಧ ವಿಧಿಸಿದೆ.
2. ಇಂದಿನಿಂದ ಆರು ತಿಂಗಳ ಕಾಲ ಈ ನಿರ್ಬಂಧಗಳು ಜಾರಿಯಲ್ಲಿರುತ್ತವೆ.
3. ಬ್ಯಾಂಕ್ ಗ್ರಾಹಕರು ಆರು ತಿಂಗಳ ಕಾಲ 1 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಡ್ರಾ ಮಾಡಲು ಸಾಧ್ಯವಿಲ್ಲ.
4. ಈ ಎಲ್ಲಾ ನಿರ್ಬಂಧಗಳ ನಡುವೆಯೂ ಸಹಕಾರಿ ಬ್ಯಾಂಕ್, ಆರ್ ಬಿಐ ಮುಂದಿನ ಆದೇಶದವರೆಗೆ ತನ್ನ ದೈನಂದಿನ ವ್ಯವಹಾರ ಮುಂದುವರೆಸಬೇಕು.
5. ಪಿಎಂಸಿ ದೇಶದ ಆರು ರಾಜ್ಯಗಳಲ್ಲಿ 137 ಶಾಖೆಗಳನ್ನು ಹೊಂದಿದ್ದು, ಯಾವುದೇ ಶಾಖೆಯಲ್ಲೂ ಸಾಲ ಮಂಜೂರು ಅಥವಾ ಸಾಲ ನವೀಕರಣಕ್ಕೆ ಅವಕಾಶ ಇಲ್ಲ.
6. ಮುಂಬೈ ಮೂಲದ ಈ ಸಹಕಾರಿ ಬ್ಯಾಂಕ್ ಹಣವನ್ನು ಎರವಲು ಪಡೆಯುವುದು ಮತ್ತು ಹೊಸ ಠೇವಣಿಗಳನ್ನು ಸ್ವೀಕರಿಸುವುದು ಸೇರಿದಂತೆ ಯಾವುದೇ ಹೊಣೆಗಾರಿಕೆಯನ್ನು ಹೊಂದುವಂತಿಲ್ಲ.
7. ಸಹಕಾರಿ ಬ್ಯಾಂಕ್ ತನ್ನ ಯಾವುದೇ ಆಸ್ತಿ ಅಥವಾ ಸ್ವತ್ತುಗಳನ್ನು ವರ್ಗಾಯಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ.
8. ಆರ್ ಬಿಐ ನಿರ್ದೇಶನದ ಪ್ರತಿಯನ್ನು ಪ್ರತಿ ಖಾತೆದಾರನಿಗೂ ಕುಳುಹಿಸಬೇಕು ಮತ್ತು ಅದನ್ನು ಬ್ಯಾಂಕ್ ಮತ್ತು ಬ್ಯಾಂಕ್ ವೆಬ್ ಸೈಟ್ ನಲ್ಲೂ ಪ್ರದರ್ಶಿಸಬೇಕು
9. ಸಂದರ್ಭಗಳಿಗೆ ಅನುಗುಣವಾಗಿ ಈ ನಿರ್ದೇಶನಗಳನ್ನು ಮಾರ್ಪಾಡು ಮಾಡುವುದನ್ನು ಪರಿಗಣಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
10. ಮಾರ್ಚ್ 2019ರ ವರೆಗೆ, ಪಿಎಂಸಿ ಬ್ಯಾಂಕ್ 11,617 ಕೋಟಿ ರೂಪಾಯಿ ಠೇವಣಿ ಹಾಗೂ 8,383 ಕೋಟಿ ರೂಪಾಯಿ ಮುಂಗಡ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com