ಖಾತೆದಾರರಿಗೆ ವಿಧಿಸಿದ್ದ 1000 ವಿತ್ ಡ್ರಾ ನಿರ್ಬಂಧವನ್ನು ದಿಢೀರ್ ಅಂತ ಆರ್‌ಬಿಐ ಹಿಂದಕ್ಕೆ ಪಡೆದಿದ್ದೇಕೆ?

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧಗಳನ್ನು ವಿಧಿಸಿದ್ದು ಅದರಲ್ಲಿ ಪ್ರಮುಖವಾಗಿದ್ದ 1000 ವಿತ್ ಡ್ರಾ ನಿರ್ಬಂಧವನ್ನು ವಾಪಸ್ ಪಡೆದುಕೊಂಡಿದೆ.

Published: 26th September 2019 06:23 PM  |   Last Updated: 26th September 2019 07:18 PM   |  A+A-


Bank Account Holder

ಸಂಗ್ರಹ ಚಿತ್ರ

Posted By : Vishwanath S
Source : The New Indian Express

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧಗಳನ್ನು ವಿಧಿಸಿದ್ದು ಅದರಲ್ಲಿ ಪ್ರಮುಖವಾಗಿದ್ದ 1000 ವಿತ್ ಡ್ರಾ ನಿರ್ಬಂಧವನ್ನು ವಾಪಸ್ ಪಡೆದುಕೊಂಡಿದೆ. 

ಪಿಎಂಸಿ ಖಾತೆದಾರರಿಗೆ 1000 ರುಪಾಯಿ ಮಾತ್ರ ವಿತ್ ಡ್ರಾ ಮಾಡಲು ಆರ್‌ಬಿಐ ನಿರ್ಬಂಧ ಹೇರಿತ್ತು. ಇದರಿಂದ ಗ್ರಾಹಕರಿಗೆ ತೊಂದರೆಯಾಗಿತ್ತು. ಇದನ್ನು ಮನಗಂಡ ಆರ್‌ಬಿಐ ಇದೀಗ ವಿತ್ ಡ್ರಾ ನಿರ್ಬಂಧವನ್ನು ವಾಪಸ್ ಪಡೆದು 10,000 ಡ್ರಾ ಮಾಡಲು 6 ತಿಂಗಳ ಕಾಲ ಅವಕಾಶ ನೀಡಿದೆ. ಇದರೊಂದಿಗೆ ಶೇಖಡ 60ರಷ್ಟು ಖಾತೆದಾರರು ಹಣವನ್ನು ವಿತ್ ಡ್ರಾ ಮಾಡುವ ಅವಕಾಶ ಸಿಕ್ಕಿದೆ.

ಈ ಹಿಂದೆ ಪಿಎಂಸಿ ಬ್ಯಾಂಕ್ ಸಂಬಂಧ ಆರ್‌ಬಿಐ ವಿಧಿಸಿದ್ದ ನಿರ್ಬಂಧಗಳು:
1. ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಆರ್ ಬಿಐ ಕಾರ್ಯಾಚರಣೆಯ ನಿರ್ಬಂಧ ವಿಧಿಸಿದೆ.
2. ಇಂದಿನಿಂದ ಆರು ತಿಂಗಳ ಕಾಲ ಈ ನಿರ್ಬಂಧಗಳು ಜಾರಿಯಲ್ಲಿರುತ್ತವೆ.
3. ಬ್ಯಾಂಕ್ ಗ್ರಾಹಕರು ಆರು ತಿಂಗಳ ಕಾಲ 1 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಡ್ರಾ ಮಾಡಲು ಸಾಧ್ಯವಿಲ್ಲ.
4. ಈ ಎಲ್ಲಾ ನಿರ್ಬಂಧಗಳ ನಡುವೆಯೂ ಸಹಕಾರಿ ಬ್ಯಾಂಕ್, ಆರ್ ಬಿಐ ಮುಂದಿನ ಆದೇಶದವರೆಗೆ ತನ್ನ ದೈನಂದಿನ ವ್ಯವಹಾರ ಮುಂದುವರೆಸಬೇಕು.
5. ಪಿಎಂಸಿ ದೇಶದ ಆರು ರಾಜ್ಯಗಳಲ್ಲಿ 137 ಶಾಖೆಗಳನ್ನು ಹೊಂದಿದ್ದು, ಯಾವುದೇ ಶಾಖೆಯಲ್ಲೂ ಸಾಲ ಮಂಜೂರು ಅಥವಾ ಸಾಲ ನವೀಕರಣಕ್ಕೆ ಅವಕಾಶ ಇಲ್ಲ.
6. ಮುಂಬೈ ಮೂಲದ ಈ ಸಹಕಾರಿ ಬ್ಯಾಂಕ್ ಹಣವನ್ನು ಎರವಲು ಪಡೆಯುವುದು ಮತ್ತು ಹೊಸ ಠೇವಣಿಗಳನ್ನು ಸ್ವೀಕರಿಸುವುದು ಸೇರಿದಂತೆ ಯಾವುದೇ ಹೊಣೆಗಾರಿಕೆಯನ್ನು ಹೊಂದುವಂತಿಲ್ಲ.
7. ಸಹಕಾರಿ ಬ್ಯಾಂಕ್ ತನ್ನ ಯಾವುದೇ ಆಸ್ತಿ ಅಥವಾ ಸ್ವತ್ತುಗಳನ್ನು ವರ್ಗಾಯಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ.
8. ಆರ್ ಬಿಐ ನಿರ್ದೇಶನದ ಪ್ರತಿಯನ್ನು ಪ್ರತಿ ಖಾತೆದಾರನಿಗೂ ಕುಳುಹಿಸಬೇಕು ಮತ್ತು ಅದನ್ನು ಬ್ಯಾಂಕ್ ಮತ್ತು ಬ್ಯಾಂಕ್ ವೆಬ್ ಸೈಟ್ ನಲ್ಲೂ ಪ್ರದರ್ಶಿಸಬೇಕು
9. ಸಂದರ್ಭಗಳಿಗೆ ಅನುಗುಣವಾಗಿ ಈ ನಿರ್ದೇಶನಗಳನ್ನು ಮಾರ್ಪಾಡು ಮಾಡುವುದನ್ನು ಪರಿಗಣಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
10. ಮಾರ್ಚ್ 2019ರ ವರೆಗೆ, ಪಿಎಂಸಿ ಬ್ಯಾಂಕ್ 11,617 ಕೋಟಿ ರೂಪಾಯಿ ಠೇವಣಿ ಹಾಗೂ 8,383 ಕೋಟಿ ರೂಪಾಯಿ ಮುಂಗಡ ಹೊಂದಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp