ವಿಮಾನಯಾನ ಸಂಸ್ಥೆಗಳಿಗೆ 1,122 ಕೋಟಿ ಡಾಲರ್ ನಷ್ಟ, 29 ಲಕ್ಷ ನಿರುದ್ಯೋಗ ಸಾಧ್ಯತೆ

ಕೊರೋನಾ ವೈರಸ್ 'ಕೋವಿಡ್ -19' ಹಿನ್ನೆಲೆಯಲ್ಲಿ ವಿಧಿಸಲಾದ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ವರ್ಷ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ 1,122 ಕೋಟಿ ಡಾಲರ್ ನಷ್ಟು ನಷ್ಟವಾಗಲಿದ್ದು, 29 ಲಕ್ಷಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾಗುತ್ತಾರೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ 'ಕೋವಿಡ್ -19' ಹಿನ್ನೆಲೆಯಲ್ಲಿ ವಿಧಿಸಲಾದ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ವರ್ಷ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ 1,122 ಕೋಟಿ ಡಾಲರ್ ನಷ್ಟು ನಷ್ಟವಾಗಲಿದ್ದು, 29 ಲಕ್ಷಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾಗುತ್ತಾರೆ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಎಐಟಿಎ) ಇಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ, ಪ್ರಯಾಣಿಕರ ವಿಮಾನಯಾನ ಸೇವೆಯ ಮೇಲೆ ಮೂರು ತಿಂಗಳ ನಿರ್ಬಂಧ ಹೇರಿದರೆ, ನಷ್ಟದ ಪ್ರಮಾಣ ಹೆಚ್ಚಾಗುತ್ತದೆ. 2019 ಕ್ಕೆ ಹೋಲಿಸಿದರೆ, ದೇಶದಲ್ಲಿ ಪ್ರಯಾಣಿಕರ ಸಂಖ್ಯೆ 8.98  ಕೋಟಿಗಳಷ್ಟು ಇಳಿಯುತ್ತದೆ. ಅಂದರೆ ಸುಮಾರು 47 ಪ್ರತಿಶತ ಕಡಿತವಾಗುತ್ತದೆ. ಇದರಿಂದ ವಿಮಾನಯಾನ ಕಂಪನಿಗಳಿಗೆ 1,122.1 ಕೋಟಿ ಡಾಲರ್ ನಷ್ಟವಾಗಲಿದ್ದು, 29,32,900 ಜನರ ಉದ್ಯೋಗಕ್ಕೆ ಕತ್ತರಿ ಬೀಳಲಿದೆ ಎಂದು ಹೇಳಿದೆ.

ಏಷ್ಯಾ-ಪೆಸಿಫಿಕ್ ಪ್ರದೇಶಕ್ಕಾಗಿ ಬಿಡುಗಡೆಯಾದ ವರದಿಯು ಭಾರತದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಉದ್ಯೋಗ ಕಡಿತವಾಗಲಿದೆ. ಆದಾಯ ನಷ್ಟದ ವಿಷಯದಲ್ಲಿ ಭಾರತವು ಜಪಾನ್ ಮತ್ತು ಆಸ್ಟ್ರೇಲಿಯಾದ ನಂತರ ಮೂರನೇ ಸ್ಥಾನದಲ್ಲಿದೆ. ವಿಮಾನಯಾನ ಆದಾಯವು 2,200 ಕೋಟಿ ಮತ್ತು  ಆಸ್ಟ್ರೇಲಿಯಾದಲ್ಲಿ 1,400 ಕೋಟಿ ಡಾಲರ್ ಗಿಂತಲೂ ಕಡಿಮೆಯಾಗುತ್ತದೆ ಎಂದು ಹೇಳಿದೆ.

ಎಐಟಿಎ ಈ ಹಿಂದೆ ಏಪ್ರಿಲ್ 14 ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದಲ್ಲಿ ಪ್ರಯಾಣಿಕರ ಸಂಖ್ಯೆ ಶೇಕಡಾ 36 ರಷ್ಟು ಕುಸಿಯುತ್ತದೆ, ಇದರಿಂದಾಗಿ 884 ಮಿಲಿಯನ್ ಡಾಲರ್ ಆದಾಯ ನಷ್ಟ ಮತ್ತು 22.47 ಲಕ್ಷ ಜನರ ಉದ್ಯೋಗ ನಷ್ಟವಾಗಲಿದೆ ಎಂದು ಸೂಚಿಸಿತ್ತು. ಹಿಂದಿನ  ವರದಿಯಿಂದ ಪರಿಸ್ಥಿತಿ ಹದಗೆಟ್ಟಿದೆ ಎಂದು ಏಷ್ಯಾ-ಪೆಸಿಫಿಕ್ ಪ್ರದೇಶದ ಐಟಾ ಉಪಾಧ್ಯಕ್ಷ ಕಾನ್ವರ್ಸ್ ಕ್ಲಿಫರ್ಡ್ ಹೇಳಿದ್ದಾರೆ. ವಿಮಾನಯಾನ ಕಂಪನಿಗಳು ತಮ್ಮ ಅಸ್ತಿತ್ವವನ್ನು ಉಳಿಸಲು ಹೆಣಗಾಡುತ್ತಿವೆ. ಸರ್ಕಾರಗಳು ಅವರಿಗೆ ಸಹಾಯ ಮಾಡದಿದ್ದರೆ ಮತ್ತು ಅನೇಕ ವಿಮಾನಯಾನ  ಸಂಸ್ಥೆಗಳು ನಿಲ್ಲಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com