ಜಾಗತಿಕ ಮಟ್ಟದಲ್ಲಿ ಹೆಚ್ಚಿದ ವರ್ಚ್ಯುಯಲ್ ಸಭೆಗಳು: ಜೂಮ್ ಆದಾಯ ಶೇ.367 ರಷ್ಟು ಏರಿಕೆ
ವಾಣಿಜ್ಯ
ಜಾಗತಿಕ ಮಟ್ಟದಲ್ಲಿ ಹೆಚ್ಚಿದ ವರ್ಚ್ಯುಯಲ್ ಸಭೆಗಳು: ಜೂಮ್ ಆದಾಯ ಶೇ.367 ರಷ್ಟು ಏರಿಕೆ
ವಿಡಿಯೋ ಕಾನ್ಫರೆನ್ಸಿಂಗ್ ವೇದಿಕೆ ಜೂಮ್ ನ ಆದಾಯ ಅಕ್ಟೋಬರ್ 2020 ರಲ್ಲಿ 777.2 ಡಾಲರ್ ಗಳಷ್ಟು ಏರಿಕೆ ಕಂಡಿದೆ.
ವಿಡಿಯೋ ಕಾನ್ಫರೆನ್ಸಿಂಗ್ ವೇದಿಕೆ ಜೂಮ್ ನ ಆದಾಯ ಅಕ್ಟೋಬರ್ 2020 ರಲ್ಲಿ 777.2 ಡಾಲರ್ ಗಳಷ್ಟು ಏರಿಕೆ ಕಂಡಿದೆ.
ಕೊರೋನಾ ಹಿನ್ನೆಲೆಯಲ್ಲಿ ವರ್ಚ್ಯುಯಲ್ ಸಭೆಗಳು ಹೆಚ್ಚಳವಾಗಿದ್ದು, ಜೂಮ್ ಆಪ್ ಆದಾಯ ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ ಶೇ.367 ರಷ್ಟು ಏರಿಕೆ ಕಂಡಿದೆ.
ಪ್ರಸ್ತುತ 433,700 ಮಂದಿ ಜೂಮ್ ಆಪ್ ಬಳಕೆ ಮಾಡುತ್ತಿದ್ದು, 100,000 ಡಾಲರ್ ನಷ್ಟು ಆದಾಯ ತರುತ್ತಿರುವವರ ಪ್ರಮಾಣ ಶೇ.136 ರಕ್ಕೆ ಏರಿಕೆ ಕಂಡಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೇಡಿಕೆ ಹಾಗೂ ಕಾರ್ಯ ಅನುಷ್ಠಾನದಿಂದಾಗಿ ಜೂಮ್ ಕಳೆದ ವರ್ಷಕ್ಕಿಂತ ಈ ವರ್ಷ ಶೇ.367 ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಜೂಮ್ ನ ಸ್ಥಾಪಕ ಹಾಗೂ ಸಿಇಒ ಎರಿಕ್ ಎಸ್ ಯುವಾನ್ ಹೇಳಿದ್ದಾರೆ.
ಕ್ಯಾಶ್ ಫ್ಲೋ ಲೆಕ್ಕದಲ್ಲಿ ಪ್ರಸ್ತುತ ನಡೆಯುತ್ತಿರುವ ತ್ರೈಮಾಸಿಕದಲ್ಲಿ 411.5 ಮಿಲಿಯನ್ ಡಾಲರ್ ಮೌಲ್ಯದಷ್ಟು ಕಾರ್ಯಚಟುವಟಿಕೆಗಳು ನಡೆದಿವೆ. ಇದು ಕಳೆದ ವರ್ಷ 61.9 ಮಿಲಿಯನ್ ಡಾಲರ್ ಇತ್ತು ಎಂದು ಎರಿಕ್ ತಿಳಿಸಿದ್ದಾರೆ.