ಕೊಯಮತ್ತೂರು ವೈದ್ಯ ಅರವಿಂದ್ ಚಂದರ್ ಅವರಿಂದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಾಧನೆ

ಐಶ್ವರ್ಯ ಫರ್ಟಿಲಿಟಿ ಸೆಂಟರ್ ನ ಡಾ. ಅರವಿಂದ್ ಚಂದರ್ (ಫರ್ಟಿಲಿಟಿ ಸೂಪರ್ ಸ್ಪೆಷಲಿಸ್ಟ್), 893 ಜನರಿಗೆ ವಿಶ್ವದ ಅತಿದೊಡ್ಡ ಪುರುಷರ ಫರ್ಟಿಲಿಟಿ ಜಾಗೃತಿ ಅಭಿಯಾನಕ್ಕಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತ ಸಾಧನೆ ಮಾಡಿದ್ದಾರೆ.
ಡಾ. ಅರವಿಂದ್ ಚಂದರ್
ಡಾ. ಅರವಿಂದ್ ಚಂದರ್
Updated on

ಐಶ್ವರ್ಯ ಫರ್ಟಿಲಿಟಿ ಸೆಂಟರ್ ನ ಡಾ. ಅರವಿಂದ್ ಚಂದರ್ (ಫರ್ಟಿಲಿಟಿ ಸೂಪರ್ ಸ್ಪೆಷಲಿಸ್ಟ್), 893 ಜನರಿಗೆ ವಿಶ್ವದ ಅತಿದೊಡ್ಡ ಪುರುಷರ ಫರ್ಟಿಲಿಟಿ ಜಾಗೃತಿ ಅಭಿಯಾನಕ್ಕಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತ ಸಾಧನೆ ಮಾಡಿದ್ದಾರೆ. ಈ ಜಾಗೃತಿ ಶೈಕ್ಷಣಿಕ ಕಾರ್ಯಕ್ರಮವು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಅಧಿಕೃತ ಪ್ರವೇಶ ಮಾಡಿತು. 'ಬಂಜೆತನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆದರೆ ಅದರ ಬಗ್ಗೆ ಜಾಗೃತಿ ಕೊರತೆಯಿದೆ. ಜನರು ಸಾಮಾನ್ಯವಾಗಿ ಬಂಜೆತನಕ್ಕೆ ಕಾರಣ ಮಹಿಳೆಯರಿಂದ ಮಾತ್ರ ಎಂದು ಭಾವಿಸುತ್ತಾರೆ. ಇದರ ಮೂಲಕ ಪುರುಷರು ಮತ್ತು ಮಹಿಳೆಯರು ಬಂಜೆತನಕ್ಕೆ ಸಮಾನವಾಗಿ ಜವಾಬ್ದಾರರು ಮತ್ತು ಪುರುಷರ ಆರೋಗ್ಯವೂ ಸಹ ಮುಖ್ಯವಾಗಿದೆ. ಆದ್ದರಿಂದ ನಾವು ಬಂಜೆತನದ ಬಗ್ಗೆ ಈ ಅಭಿಪ್ರಾಯವನ್ನು ಬದಲಾಯಿಸಲು ನಿರ್ಧರಿಸಿದ್ದೇವೆ ಮತ್ತು ಬಂಜೆತನದ ಬಗ್ಗೆ ಪುರುಷರಿಗೆ ಶಿಕ್ಷಣ ನೀಡಲು ಮುಂದಾಗಿದ್ದೇವೆ', ಇದು ಕೊಯಮತ್ತೂರಿನಲ್ಲಿ ನಡೆದ ಮೊದಲ ರೀತಿಯ ಘಟನೆಯಾಗಿದೆ ಎಂದು ಕೊಯಮತ್ತೂರಿನ ಐಶ್ವರ್ಯ ಫರ್ಟಿಲಿಟಿ ಸೆಂಟರ್ ನ ನಿರ್ದೇಶಕ ಡಾ. ಅರವಿಂದ್ ಚಂದರ್ ಹೇಳಿದರು.

ಡಾ. ಅರವಿಂದ ಚಂದರ್ ಗೆ ಬಂಜೆತನದ ಕ್ಷೇತ್ರದಲ್ಲಿನ ಪರಿಣತಿಗಾಗಿ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿದೆ. ನವದೆಹಲಿ ಮತ್ತು ಕೊಯಮತ್ತೂರು ನಗರ ಐಕಾನ್ ಪ್ರಶಸ್ತಿ 2019 ರಲ್ಲಿ, ಈಟಿ ನ್ಯಾಷನಲ್ ಫರ್ಟಿಲಿಟಿ ಅವಾರ್ಡ್ಸ್ 2019 ಈವೆಂಟ್‌ನಿಂದ ಅವರಿಗೆ ಐವಿಎಫ್ ಸ್ಪೆಷಿಯಲಿಸ್ಟ್ ಸೌತ್ 2019 ಪ್ರಶಸ್ತಿ ದೊರಕಿದೆ. ಸಿಂಗಾಪುರ ಮತ್ತು ಜರ್ಮನಿಯಲ್ಲಿ ಬಂಜೆತನದಲ್ಲಿ ಅವರು ತಮ್ಮ ಸೂಪರ್ ಸ್ಪೆಷಾಲಿಟಿಯನ್ನು ಪೂರ್ಣಗೊಳಿಸಿದ್ದಾರೆ.

ಐಶ್ವರ್ಯ ಫರ್ಟಿಲಿಟಿ ಸೆಂಟರ್, ದಕ್ಷಿಣ ಭಾರತದಾದ್ಯಂತ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ, ಶ್ರೀಲಂಕಾ ದಲ್ಲಿ 22 ಕೇಂದ್ರಗಳನ್ನು ಹೊಂದಿದೆ. ಕೇಂದ್ರಗಳು ಬಂಜೆತನದ ಬಗ್ಗೆ 30 ವರ್ಷಗಳ ಅನುಭವವನ್ನು ಹೊಂದಿವೆ ಮತ್ತು ಅಧ್ಯಕ್ಷ ಡಾ.ವೇಲುಸ್ವಾಮಿ ಮತ್ತು ಡಾ.ಚಂದ್ರಲೇಖಾ ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ಐವಿಎಫ್ (ಇನ್ ವಿಟ್ರೊ ಫರ್ಟಿಲಿಟಿ) ಮತ್ತು ಪಿಜಿಎಸ್ (ಪ್ರಿ ಇಂಪ್ಲಾಂಟೇಶನ್ ಸ್ಕ್ರೀನಿಂಗ್) ಮತ್ತು ಪಿಜಿಡಿ ಚಿಕಿತ್ಸೆಯನ್ನು ನೀಡುತ್ತದೆ. ಭಾರತದ ಮೊದಲ ಫ್ರೋಜನ್ ಎಗ್ ಮಗು ಮತ್ತು ಸ್ತನ ಕ್ಯಾನ್ಸರ್ನಿಂದ ಬದುಕುಳಿದವರಿಗೆ ಭಾರತದ ಮೊದಲ ಐವಿಎಫ್ ಮಗುವನ್ನು ಐಶ್ವರ್ಯ ದಲ್ಲಿ ಸಾಧಿಸಲಾಯಿತು.

ಬಂಜೆತನದ ಕ್ಷೇತ್ರದಲ್ಲಿ ನಮ್ಮ ಅತ್ಯುನ್ನತ ಪರಿಣತಿಯನ್ನು ತಿಳಿದುಕೊಂಡು ವಿಶ್ವದೆಲ್ಲೆಡೆಯಿಂದ ಅನೇಕ ರೋಗಿಗಳು ಬಂಜೆತನ ಚಿಕಿತ್ಸೆಗಾಗಿ ನಮ್ಮ ಬಳಿಗೆ ಬರುತ್ತಾರೆ. ಬಂಜೆತನದ ದಂಪತಿಗಳು ಕೈಗೆಟುಕುವ ವೆಚ್ಚದಲ್ಲಿ ಹೆಚ್ಚಿನ ಯಶಸ್ಸಿನ ಪ್ರಮಾಣದಲ್ಲಿ ಗರ್ಭಿಣಿಯಾಗಲು ಸಹಾಯ ಮಾಡುವುದು ನಮ್ಮ ಉದ್ದೇಶ. ಬಂಜೆತನ ಮತ್ತು ಮಕ್ಕಳಿಲ್ಲದ ದಂಪತಿಗಳಿಗೆ ಸಹಾಯ ಮಾಡಲು ನಾವು ನಿಯಮಿತ ಶಿಬಿರಗಳನ್ನು ಸಹ ನಡೆಸುತ್ತೇವೆ ಎಂದು ಡಾ. ಅರವಿಂದ್ ಚಂದರ್ ತಿಳಿಸಿದರು.

ಗಿನ್ನೆಸ್ ರೆಕಾರ್ಡ್ ಪ್ರಯತ್ನದ ಸಮಯದಲ್ಲಿ ಡಾ.ಅರವಿಂದ್ ಚಂದರ್ ಅವರು 893 ಪುರುಷರಿಗೆ ಶಿಕ್ಷಣ ನೀಡಿದ್ದಾರೆ, ಇದು ವಿಶ್ವದ ಪುರುಷರ ಬಂಜೆತನದ ಬಗ್ಗೆ ನೀಡಲಾದ ಅತಿದೊಡ್ಡ ಜಾಗೃತಿ ಕಾರ್ಯಕ್ರಮವಾಗಿದೆ. ಈವರೆಗೆ ನಮ್ಮ ತಂಡವು 5000 ಕ್ಕೂ ಹೆಚ್ಚು ಪುರುಷರಿಗೆ ಈ ರೀತಿಯ ವಿವಿಧ ಕಾರ್ಯಕ್ರಮಗಳಲ್ಲಿ ಕೊಯಮತ್ತೂರು, ಈರೋಡ್ ನಲ್ಲಿ ಶಿಕ್ಷಣ ನೀಡಿದೆ. ಮತ್ತು .... ಈ ವಲಯದಲ್ಲಿ ಇತ್ತೀಚೆಗೆ 75 ಸಾವಿರಕ್ಕೂ ಹೆಚ್ಚು ದಂಪತಿಗಳಿಗೆ ಸಲಹೆ ನೀಡಿದ್ದೇವೆ. ಇಲ್ಲಿಯವರೆಗೆ ಐಶ್ವರ್ಯ 20,000 ಕ್ಕೂ ಹೆಚ್ಚು ಐವಿಎಫ್ ದಂಪತಿಗಳಿಗೆ ಯಶಸ್ಸನ್ನು ನೀಡಿದೆ ಹಾಗು ಲ್ಯಾಪ್ರೊಸ್ಕೋಪಿ ಮತ್ತು ಹಿಸ್ಟರೊಸ್ಕೋಪಿಯಲ್ಲಿ ಹೆಚ್ಚಿನ ಅನುಭವವನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com