ಜಿಯೊ ಪ್ಲಾಟ್ ಫಾರ್ಮ್ಸ್ ಗೆ ಇಂಟೆಲ್ ಕ್ಯಾಪಿಟಲ್ 1,894 ಕೋಟಿ ರೂ. ಹೂಡಿಕೆ!

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆ ಹೂಡಿಕೆ ಮುಂದುವರಿದಿದೆ. ಇಂಟೆಲ್ ಕ್ಯಾಪಿಟಲ್ ಜಿಯೊ ಪ್ಲಾಟ್ ಫಾರ್ಮ್ಸ್ ನಲ್ಲಿ 1 ಲಕ್ಷದ 894.50 ಕೋಟಿ ರೂಪಾಯಿಗಳನ್ನು ಷೇರು ಮೌಲ್ಯ 4.91 ಲಕ್ಷ ಕೋಟಿ ರೂಪಾಯಿ ಮತ್ತು ಉದ್ಯಮ ಮೌಲ್ಯ 5.16 ಕೋಟಿ ರೂಪಾಯಿ ಮೊತ್ತಗಳಷ್ಟು ಹೂಡಿಕೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆ ಹೂಡಿಕೆ ಮುಂದುವರಿದಿದೆ. ಇಂಟೆಲ್ ಕ್ಯಾಪಿಟಲ್ ಜಿಯೊ ಪ್ಲಾಟ್ ಫಾರ್ಮ್ಸ್ ನಲ್ಲಿ 1 ಲಕ್ಷದ 894.50 ಕೋಟಿ ರೂಪಾಯಿಗಳನ್ನು ಷೇರು ಮೌಲ್ಯ 4.91 ಲಕ್ಷ ಕೋಟಿ ರೂಪಾಯಿ ಮತ್ತು ಉದ್ಯಮ ಮೌಲ್ಯ 5.16 ಕೋಟಿ ರೂಪಾಯಿ ಮೊತ್ತಗಳಷ್ಟು ಹೂಡಿಕೆ ಮಾಡಿದೆ.

ಇಂಟೆಲ್ ಕ್ಯಾಪಿಟಲ್ ಕಂಪೆನಿಯ ಹೂಡಿಕೆ 0.39 ಶೇಕಡಾದಷ್ಟು ಹೂಡಿಕೆ ಷೇರು ಆಗಿದೆ. ಈ ಮೂಲಕ ಕಳೆದ ಎರಡು ತಿಂಗಳಲ್ಲಿ ಜಿಯೊ ಪ್ಲಾಟ್ ಫಾರ್ಮ್ ನಡಿ ಹೂಡಿಕೆ ಮಾಡಿರುವ ಕಂಪೆನಿಗಳ ಮೊತ್ತ 117,588.45 ಕೋಟಿ ರೂಪಾಯಿಗಳಾಗಿದೆ. ಕಳೆದ ಏಪ್ರಿಲ್ 22ರಿಂದ ವಿವಿಧ ಕಂಪೆನಿಗಳು ಜಿಯೊನಡಿ ಹೂಡಿಕೆ ಮಾಡುತ್ತಿದ್ದು ಇಂಟೆಲ್ ಕ್ಯಾಪಿಟಲ್ 12ನೇ ಕಂಪೆನಿಯಾಗಿದೆ.

ಈ ಹಿಂದೆ ಫೇಸ್ ಬುಕ್, ಸಿಲ್ವರ್ ಲೇಕ್ ಪಾರ್ಟ್ಸ್ ನರ್ಸ್, ವಿಸ್ತಾ ಈಕ್ವೆಟಿ ಪಾರ್ಟ್ಸ್ ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬದಲಾ, ಅಡಿಯಾ, ಟಿಪಿಜಿ, ಎಲ್ ಕ್ಯಾಟ್ಟರ್ಟನ್, ಪಿಐಎಫ್ ಗಳು ಜಿಯೊ ಪ್ಲಾಟ್ ಫಾರ್ಮ್ ನಡಿ ಹೂಡಿಕೆ ಮಾಡಿದ್ದವು.

ಇಂಟೆಲ್ ಕ್ಯಾಪಿಟಲ್ ತಮ್ಮ ಕಂಪೆನಿ ಜೊತೆ ಕೈಜೋಡಿಸಿರುವುದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com