ಅಲಿಬಾಬಾ ಸಂಸ್ಥೆ ಮುಖ್ಯಸ್ಥ, ಶ್ರೀಮಂತ ಉದ್ಯಮಿ ಜಾಕ್ ಮಾಗೆ ಗುರುಗ್ರಾಮ ಕೋರ್ಟ್ ಸಮನ್ಸ್!

ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿರುವ ಆಲಿಬಾಬಾ ಸಂಸ್ಥೆಯ ಜಾಕ್ ಮಾ ಅವರಿಗೆ ಗುರುಗ್ರಾಮದ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಜಾಕ್ ಮಾ
ಜಾಕ್ ಮಾ

ಗುರುಗ್ರಾಮ: ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿರುವ ಆಲಿಬಾಬಾ ಸಂಸ್ಥೆಯ ಜಾಕ್ ಮಾ ಅವರಿಗೆ ಗುರುಗ್ರಾಮದ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಹೌದು.. ಆಲಿಬಾಬಾ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಕೋರ್ಟ್, ಸಂಸ್ಥೆಯ ಮುಖ್ಯಸ್ಥರಿಂದ ಎಚ್ ಆರ್ ತನಕ ಎಲ್ಲರಿಗೂ ಸಮನ್ಸ್ ನೀಡಿದೆ. ಆಲಿಬಾಬಾದ ಯುಸಿ ನ್ಯೂಸ್ , ಯುಸಿ ಬ್ರೌಸರ್ ಹಾಗೂ 57 ಇನ್ನಿತರ ಚೀನಾ ಮೂಲದ ಆಪ್ಲಿಕೇಷನ್ ನಿಂದ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಭಾರತ ಸರ್ಕಾರ ನಿಷೇಧ ಹಾಕಿದೆ.

ಇದಾದ ಬಳಿಕ ಆಲಿಬಾಬಾದ ಯುಸಿ ಬ್ರೌಸರ್ ವೆಬ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ನಂತರ ಹುದ್ದೆ ಕಳೆದುಕೊಂಡ ಉದ್ಯೋಗಿಯೊಬ್ಬರು ದಾವೆ ಹೂಡಿ ತಮಗಾದ ನಷ್ಟಕ್ಕೆ 2 ಕೋಟಿ ರೂಪಾಯಿ ಪರಿಹಾರ ಕೂಡಾ ಕೇಳಿದ್ದಾರೆ.

ಸಿವಿಎಲ್ ಜಡ್ಜ್ ಸೋನಿಯಾ ಶಿಯೋಕಾಂದ್ ಅವರು ದೂರುದಾರರ ಹೇಳಿಕೆ ಆಧರಿಸಿ ಆಲಿಬಾಬಾ ಸಂಸ್ಥೆಯ ಜಾಕ್ ಮಾ, 12ಕ್ಕೂ ಅಧಿಕ ಹಿರಿಯ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ ಇದೇ 29ರಂದು ಕೋರ್ಟಿಗೆ ಖುದ್ದು ಹಾಜರಾಗಬೇಕು ಅಥವಾ ವಕೀಲರ ಮೂಲಕ ಹಾಜರಾಗಿ ಸೂಕ್ತ ದಾಖಲೆ ನೀಡಬೇಕು ಎಂದೂ ಆದೇಶ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com