ಆರ್ಥಿಕ ಬಿಕ್ಕಟ್ಟು: ಯೆಸ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಲು 'ಯೆಸ್' ಎಂದ ಕೋಟಕ್ ಮಹೀಂದ್ರಾ ,ಎಚ್‌ಡಿಎಫ್‌ಸಿ

 ಸಾಲದ ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕಿಗೆ ಆರ್‌ಬಿಐನ ಪರಿಹಾರ ಯೋಜನೆಯಡಿ 500 ಕೋಟಿ ರೂ.ಗಳ ಈಕ್ವಿಟಿ ಕ್ಯಾಪಿಟಲ್ ಅನ್ನು ತುಂಬಿಸಲು ಉದಯ್ ಕೊಟಕ್ ನೇತೃತ್ವದ ಕೊಟಕ್ ಮಹೀಂದ್ರಾ ಬ್ಯಾಂಕ್ ಶುಕ್ರವಾರ ಸಮ್ಮತಿಸಿದೆ. 
ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್

ನವದೆಹಲಿ: ಸಾಲದ ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕಿಗೆ ಆರ್‌ಬಿಐನ ಪರಿಹಾರ ಯೋಜನೆಯಡಿ 500 ಕೋಟಿ ರೂ.ಗಳ ಈಕ್ವಿಟಿ ಕ್ಯಾಪಿಟಲ್ ಅನ್ನು ತುಂಬಿಸಲು ಉದಯ್ ಕೊಟಕ್ ನೇತೃತ್ವದ ಕೊಟಕ್ ಮಹೀಂದ್ರಾ ಬ್ಯಾಂಕ್ ಶುಕ್ರವಾರ ಸಮ್ಮತಿಸಿದೆ.

"ಯೆಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿ 500 ಕೋಟಿ ರೂ. ('ಈಕ್ವಿಟಿ ಬದ್ಧತೆ') ಹೂಡಿಕೆ ಮಾಡಲು ಬ್ಯಾಂಕ್ ಈಕ್ವಿಟಿ ಬದ್ಧತೆ ಪತ್ರವನ್ನು ನೀಡಿದೆ

ಏತನ್ಮಧ್ಯೆ, ಅಡಮಾನ ಸಾಲದಾತನಾದ ಎಚ್‌ಡಿಎಫ್‌ಸಿ ಲಿಮಿಟೆಡ್ ಸಹ ತೊಂದರೆಗೊಳಗಾಗಿರುವ ಯೆಸ್ ಬ್ಯಾಂಕಿಗೆ ಆರ್‌ಬಿಐ ಕಡ್ಡಾಯ ಪುನರ್ನಿರ್ಮಾಣ ಯೋಜನೆಯ ಪ್ರಕಾರ ಈಕ್ವಿಟಿ ಪಾಲಾಗಿ 1,000 ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿತು.

"ನಿಗಮವು ಯೆಸ್ ಬ್ಯಾಂಕಿನ ತಲಾ 2 ರೂ.ಗಳ 100 ಕೋಟಿ ಇಕ್ವಿಟಿ ಷೇರುಗಳಲ್ಲಿ 1,000 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ. ಪ್ರತಿ ಷೇರಿಗೆ 10 ರೂ. (8 ರೂ. ಪ್ರೀಮಿಯಂ ಸೇರಿದಂತೆ)  ಹೂಡಿಕೆ ಇರಲಿದೆ" ಎಚ್‌ಡಿಎಫ್‌ಸಿ ಲಿಮಿಟೆಡ್ ಹೇಳಿಕೆ ತಿಳಿಸಿದೆ.

1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 45 ರ ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಸ್ತಾಪಿಸಿರುವ ಯೆಸ್ ಬ್ಯಾಂಕ್‌ನ ಪುನರ್ನಿರ್ಮಾಣ ಯೋಜನೆಗೆ ಬದ್ಧವಾಗಿದೆ ಮತ್ತು ಇದು ನಿಯಂತ್ರಕ ಅನುಮೋದನೆಗಳು ಮತ್ತು ಇತರ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಅದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com