ಆರ್ಥಿಕ ವಹಿವಾಟು: ಫೆಬ್ರವರಿ ನಂತರ ಇದೇ ಮೊದಲ ಬಾರಿಗೆ 1 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಆರ್ಥಿಕ ವಹಿವಾಟು: ಫೆಬ್ರವರಿ ನಂತರ ಇದೇ ಮೊದಲ ಬಾರಿಗೆ 1 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹವು 1.05 ಲಕ್ಷ ಕೋಟಿ ರೂ.ಗೆ ತಲುಪಿದ್ದು ಈ ವರ್ಷದ ಫೆಬ್ರವರಿಯ ನಂತರ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ನವದೆಹಲಿ: ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹವು 1.05 ಲಕ್ಷ ಕೋಟಿ ರೂ.ಗೆ ತಲುಪಿದ್ದು ಈ ವರ್ಷದ ಫೆಬ್ರವರಿಯ ನಂತರ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಅಕ್ಟೋಬರ್ 31, 2020 ರವರೆಗೆ ಸಲ್ಲಿಸಿದ ಒಟ್ಟು ಜಿಎಸ್‌ಟಿಆರ್ -3ಬಿ ರಿಟರ್ನ್‌ಗಳ ಸಂಖ್ಯೆ 80 ಲಕ್ಷವಾಗಿದೆ.

2020 ರ ಅಕ್ಟೋಬರ್‌ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,05,155 ಕೋಟಿ ರೂ. ಇದರಲ್ಲಿ ಸಿಜಿಎಸ್‌ಟಿ 19,193 ಕೋಟಿ ರೂ., ಎಸ್‌ಜಿಎಸ್‌ಟಿ 5,411 ಕೋಟಿ ರೂ., ಐಜಿಎಸ್‌ಟಿ 52,540 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 23,375 ಕೋಟಿ ರೂ.) ಮತ್ತು ಸೆಸ್ 8,011 ಕೋಟಿ ರೂ. (ಸರಕುಗಳ ಆಮದುಗಾಗಿ ಸಂಗ್ರಹಿಸಿದ 932 ಕೋಟಿ ರೂ. ಸೇರಿದಂತೆ) ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷದ ಇದೇ ತಿಂಗಳಲ್ಲಿ ಸಂಗ್ರಹಿಸಿದ ಆದಾಯಕ್ಕೆ ಹೋಲಿಸಿದರೆ ಈ ಬಾರಿಯ ಆದಾಯವು  ಶೇಕಡಾ 10 ರಷ್ಟು ಹೆಚ್ಚಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com