ಗೃಹ ಸಾಲದ ದರದಲ್ಲಿ 25 ಬಿಪಿಎಸ್ ರಿಯಾಯಿತಿ ಘೋಷಿಸಿದ ಎಸ್ ಬಿಐ 

ದೇಶದ ಅತಿ ದೊಡ್ಡ ಲೆಂಡರ್ ಎಸ್ ಬಿಐ ಗೃಹ ಸಾಲದ ದರದಲ್ಲಿ 25 ಬಿಪಿ ಎಸ್ ರಿಯಾಯಿತಿ ಘೋಷಿಸಿದೆ. 
ಎಸ್ ಬಿಐ
ಎಸ್ ಬಿಐ
Updated on

ಮುಂಬೈ: ದೇಶದ ಅತಿ ದೊಡ್ಡ ಲೆಂಡರ್ ಎಸ್ ಬಿಐ ಗೃಹ ಸಾಲದ ದರದಲ್ಲಿ 25 ಬಿಪಿ ಎಸ್ ರಿಯಾಯಿತಿ ಘೋಷಿಸಿದೆ. 

ಈ ಮೂಲಕ ಎಸ್ ಬಿಐ ನ ಗ್ರಾಹಕರು ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ 25 ಬೇಸಿಸ್ ಪಾಯಿಂಟ್ ಗಳಷ್ಟು ರಿಯಾಯಿತಿ ಪಡೆಯಲಿದ್ದಾರೆ. 75 ಲಕ್ಷದ ಮೇಲಿನ ಸಾಲಕ್ಕೆ ಇದು ಅನ್ವಯವಾಗಲಿದೆ.

ಇದಕ್ಕೆ ಕೆಲವು ಷರತ್ತುಗಳು ಅನ್ವಯವಾಗಲಿದ್ದು, ಸಿಬಿಐಎಲ್ ಸ್ಕೋರ್ ಆಧಾರದಲ್ಲಿ ಹಾಗೂ ಯೋನೋ ಮೂಲಕ ವ್ಯವಹರಿಸಿದರೆ ಈ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಹಬ್ಬದ ಆಫರ್ ಗಳ ಘೋಷಣೆಯ ವಿಸ್ತರಣೆಯಾಗಿ ಎಸ್ ಬಿಐ 25 ಬಿಪಿಎಸ್ ಗಳ ರಿಯಾಯಿತಿಯನ್ನು ಘೋಷಿಸಿದೆ. 

30 ಲಕ್ಷ ದಿಂದ 2 ಕೋಟಿ ರೂಪಾಯಿಗಳ ಗೃಹ ಸಾಲದವರೆಗೂ ಈ ಹಿಂದಿದ್ದ 10 ಬಿಪಿಎಸ್ ನಿಂದ 20 ಬಿಪಿಎಸ್ ವರೆಗೆ ರಿಯಾಯಿತಿ ದೊರೆಯಲಿದೆ. ಯೋನೋ ಮೂಲಕ ವ್ಯವಹರಿಸುವ ಗ್ರಾಹಕರಿಗೆ ಹೆಚ್ಚುವರು 5 ಬಿಪಿಎಸ್ ರಿಯಾಯಿತಿ ದೊರೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com